Thursday, 12th December 2024

Actress Ramya: ಹ್ಯಾಪಿ ಬರ್ತ್ ಡೇ My Divu; ನಟಿ ರಮ್ಯಾಗೆ ಶುಭಾಶಯ ಹೇಳಿದ ಆ ಹುಡುಗ ಯಾರು?

ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Actress Ramya) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, 42ನೇ ವರ್ಷಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು, ಚಿತ್ರರಂಗದ ಕಲಾವಿದರರು ಶುಭಾಶಯ ತಿಳಿಸುತ್ತಿದ್ದಾರೆ. ಈ ಪೈಕಿ ಯುವಕನೊಬ್ಬ, ಮೋಹಕ ತಾರೆ ರಮ್ಯಾ ಅವರಿಗೆ ಮಾಡಿರುವ ಜನ್ಮದಿನದ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಆ ಹುಡುಗ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ನಟಿ ರಮ್ಯಾ ಅವರು ಆಪ್ತರ ಜತೆ ವಿದೇಶದಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಅರಣ್ಯ ಭಾಗದಲ್ಲಿ ನಟಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ರಮ್ಯಾ ಅವರ ಜತೆಗೆ ಇಳಿದಿರುವ ಫೋಟೋ ಪೋಸ್ಟ್‌ ಮಾಡಿರುವ ಯುವಕ, ರಮ್ಯಾ ಅವರಿಗೆ,‌ “ಹ್ಯಾಪಿ ಬರ್ತ್ ಡೇ My Divu, ಲವ್‌ ಯು ಫಾರ್‌ ಎವೆರ್” ಎಂದು ಜನ್ಮದಿನ ಶುಭಾಶಯ ತಿಳಿಸಿದ್ದಾರೆ.

ನಟಿ ರಮ್ಯಾಗೆ ಶುಭಾಶಯ ತಿಳಿಸಿರುವ ಯುವಕ ಸಂಜೀವ್ ಮೋಹನ್ ಎಂದು ತಿಳಿದುಬಂದಿದ್ದು, ಇವರು ರಮ್ಯಾ ಅವರ ಆಪ್ತವಲಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು, ಇವರು ನಟಿ ರಮ್ಯಾ ಅವರ ಸಹೋದರ (Sibling) ಎನ್ನಲಾಗಿದೆ.

ಅಂದಹಾಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದಿಂದ ಜೆಮಾಲಜಿಯಲ್ಲಿ ಪದವಿ ಪಡೆದಿರುವ ಸಂಜೀವ್ ಮೋಹನ್, ಬೆಂಗಳೂರಿನ ರಿಚ್ಮಂಡ್ ರೋಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜ್ಯುವೆಲರಿ ಮಾಲೀಕ ನರಸಿಂಹುಲು ಚೆಟ್ಟಿಯ ಮೊಮ್ಮಗ ಹಾಗೂ ಮುರಳಿ ಮೋಹನ್ ಅವರ ಪುತ್ರ ಎನ್ನಲಾಗಿದೆ. ರಮ್ಯಾ ಮತ್ತು ಸಂಜೀವ್ ಮೋಹನ್ ಅವರ ನಡುವೆ ಅಕ್ಕ ಮತ್ತು ತಮ್ಮನ ಬಾಂಧವ್ಯ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಅಭಿಪ್ರಾಯಗಳು ಸಂಜೀವ್ ಮೋಹನ್ ಅವರು ಹಂಚಿಕೊಂಡ ಪೋಸ್ಟ್‌ಗಳಲ್ಲೂ ನೋಡಬಹುದಾಗಿದೆ.

2014ರ ಬಳಿಕ ರಮ್ಯಾ ಸಿನಿಮಾ ಜೀವನ ನಿಧಾನಗತಿಯಲ್ಲಿ ಸಾಗಿತ್ತು. ಬಳಿಕ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಸಂಸದೆಯೂ ಆಗಿದ್ದರು. ಈ ನಂತರ ರಮ್ಯಾ ಸಿನಿಮಾ ಜೀವನದಿಂದ ಬಹಳವೇ ದೂರ ಉಳಿದಿದ್ದರು. ಆದರೆ, 2022ರಲ್ಲಿ ಮತ್ತೆ ಸಿನಿಜರ್ನಿಯನ್ನು ಆರಂಭ ಮಾಡಿದ್ದ ರಮ್ಯಾ ಅವರು, ‘ಆ್ಯಪಲ್ ಬಾಕ್ಸ್‌ ಸ್ಟುಡಿಯೋಸ್’ ‌ಎಂಬ ಪ್ರೊಡಕ್ಷನ್‌ ಹೌಸ್‌ ತೆರೆದಿದ್ದರು.

ಈ ಸುದ್ದಿಯನ್ನೂ ಓದಿ | Star Saree: ಹಳದಿ ಸೀರೆಯಲ್ಲಿ ರಶ್ಮಿಕಾ ಮಂದಣ್ಣರಂತೆ ಕಾಣಲು ಹೀಗೆ ಮಾಡಿ!

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ತಮ್ಮ ಒಪ್ಪಿಗೆ ಇಲ್ಲದೆ ದೃಶ್ಯಗಳನ್ನು ಬಳಕೆ ಮಾಡಲಾಗಿದೆ ಎಂದು ರಮ್ಯಾ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನು ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ನಾಯಕಿ ಆಗಿ ನಟಿಸಬೇಕಿತ್ತು. ಆದರೆ, ಈ ಚಿತ್ರದಿಂದ ಅವರು ಹೊರಕ್ಕೆ ಬಂದಿದ್ದರು.