Thursday, 3rd October 2024

Rashmika Mandanna: ಮತ್ತೊಮ್ಮೆ ಮಿಲಾನ್‌ ಫ್ಯಾಷನ್‌ ವೀಕ್‌‌‌ನಲ್ಲಿ ರಶ್ಮಿಕಾ ಮಂದಣ್ಣ

Rashmika Mandanna

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿಷ್ಠಿತ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (Milan Fashion Week) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಎರಡನೇ ಬಾರಿ ಅಂದರೇ ಮತ್ತೊಮ್ಮೆ ಭಾಗವಹಿಸಿದ್ದಾರೆ. ಈಗಾಗಲೇ ಆರಂಭಗೊಂಡಿರುವ ಮುಂಬರುವ ಸಮ್ಮರ್‌-ಸ್ಪ್ರಿಂಗ್‌ ಸೀಸನ್‌ನ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ, ಪ್ರಪಂಚದಾದ್ಯಂತ ಇರುವ ಪ್ರತಿಷ್ಠಿತ ಬ್ರಾಂಡ್‌ಗಳು ಭಾಗವಹಿಸಿವೆ. ಎಂದಿನಂತೆ ಇಂಟರ್‌ನ್ಯಾಷನಲ್‌ ಸೆಲೆಬ್ರಿಟಿಗಳು ಹಾಗೂ ತಾರೆಯರು ಕೂಡ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಲ್ಯಾಕ್‌ ಔಟ್‌ಫಿಟ್‌ನಲ್ಲಿ ರಶ್ಮಿಕಾ ಮಂದಣ್ಣ

ಕಳೆದ ಬಾರಿಯಂತೆ ಈ ಬಾರಿಯೂ ಜಪಾನೀಸ್‌ ಲೆಬೆಲ್‌ ಆನ್ಇಟ್ಸ್ಕಾ ಟೈಗರ್‌ಬ್ರಾಂಡ್‌ನ ಕಪ್ಪು ವರ್ಣದ ಫರ್‌ ನೆಕ್‌ಲೈನ್‌ ಇರುವಂತಹ ಬ್ಲೇಝರ್‌ ಡ್ರೆಸ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಕಾಲಿಗೆ ಸ್ಟಾಕಿಂಗ್ಸ್ ಧರಿಸಿರುವ ರಶ್ಮಿಕಾ ಬ್ಲ್ಯಾಕ್‌ ಆಫ್‌ ಶೂ ಮ್ಯಾಚ್‌ ಮಾಡಿದ್ದಾರೆ.

ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ.

ರಶ್ಮಿಕಾ ಸ್ಮೋಕಿ ಐ ಮೇಕಪ್‌

ಹಗಲಲ್ಲೆ ಸ್ಮೋಕಿ ಐ ಮೇಕಪ್‌ನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಅಷ್ಟಾಗಿ ಈ ಮೇಕಪ್‌ ಇಷ್ಟವಿಲ್ಲವಂತೆ. ಇದನ್ನು ಖುದ್ದು ಅವರೇ ತಮಾಷೆಯಾಗಿ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈ ಸ್ಮೋಕಿ ಐ ಮೇಕಪ್‌ ಮೊರೆ ಹೋಗಬೇಕಾಯಿತು ಎಂದು ಫನ್‌ ಆಗಿ ಹೇಳಿಕೊಂಡಿದ್ದಾರೆ.

ಚಿತ್ರಕೃಪೆ: ರಶ್ಮಿಕಾ ಮಂದಣ್ಣ ಟೀಮ್‌ ಇನ್ಸ್ಟಾ ಖಾತೆ.

ಮಿಲಾನ್‌ ಹೈ ಫ್ಯಾಷನ್‌ಗೆ ಸೈ ಎಂದ ರಶ್ಮಿಕಾ

ದಕ್ಷಿಣ ಭಾರತದ ಅದರಲ್ಲೂ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ಮಿಲಾನ್‌ನಂತಹ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಗ್ಗಳಿಕೆ ಎನ್ನುವ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ, ರಶ್ಮಿಕಾ ಫ್ಯಾಷನ್‌ ವೀಕ್‌ಗಳಲ್ಲಿ ಸೇಮ್‌ ಪ್ರೊಫೆಷನಲ್‌ ಮಾಡೆಲ್‌ನಂತೆಯೇ ಕಾಣಿಸಿಕೊಳ್ಳುತ್ತಾರೆ ಎಂದು ಪ್ರಶಂಸಿದ್ದಾರೆ.

ಈ ಸುದ್ದಿಯನ್ನೂ ಓದಿ | Golden Saree Fashion: ಗೋಲ್ಡನ್‌ ಸೀರೆಯಲ್ಲಿ ಸೆಲೆಬ್ರಿಟಿಯಂತೆ ಕಾಣಿಸಲು 5 ಸಿಂಪಲ್‌ ಐಡಿಯಾಗಳಿವು!

ಇನ್ನು, ಫ್ಯಾಷನ್‌ ವೀಕ್‌ನ ರನ್‌ ವೇ ಶೋ ನಡೆಯುವಾಗ, ಮುಂದಿನ ಸಾಲಿನ ಗೆಸ್ಟ್ ಲಿಸ್ಟ್‌ನಲ್ಲಿ ರಶ್ಮಿಕಾ, ನಟ ವೂ ಡು ವ್ಯಾನ್‌ ಸೇರಿದಂತೆ ಸೂಪರ್‌ ಮಾಡೆಲ್‌ಗಳೊಂದಿಗೆ ಕುಳಿತು ಶೋ ಎಂಜಾಯ್‌ ಮಾಡಿರುವುದಕ್ಕೆ ಎಲ್ಲೆಡೆಯಿಂದ ಫ್ಯಾಷನ್‌ ಪ್ರಿಯರ ಮೆಚ್ಚುಗೆ ವ್ಯಕ್ತವಾಗಿದೆ ಎನ್ನಲಾಗಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)