Saturday, 14th December 2024

ರಾಷ್ಟ್ರೀಯ ಲೋಕ ಮೇಘಾ ಅದಾಲತ್‌ನಲ್ಲಿ 626 ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ: ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ನಡೆದ ಒಟ್ಟು ೮೦೩ ಪ್ರಕರಣಗಳನ್ನು ಕೈಗೆತ್ತಿಕೊಂಡು, ೬೨೬ ಪ್ರಕರಣಗಳನ್ನು ಉಭಯ ನ್ಯಾಯಾ ಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ,ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡ೦ತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೪೭೮ ಪ್ರಕರಣಗಳ ಪೈಕಿ ೩೩೯ ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ೧,೦೪೭,೩೦೭೨-೦೦ ರೂ.ಗಳು ಮತ್ತು ಬ್ಯಾಂಕ್ ದಾವ ಪೂರ್ವ ಪ್ರಕರಣಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು.

ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೩೨೫ ಪ್ರಕರಣಗಳ ಪೈಕಿ ೨೮೭ ಪ್ರಕಣಗಳನ್ನು ಇತ್ಯರ್ಥ ಪಡೆಸಿ, ಒಟ್ಟು ೮೯,೫೭,೬೨೦-೦೦ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು ೬೨೬ ಪ್ರಕರಣಗಳು, ಮತ್ತು ೧೯,೪೩೦,೬೯೨ ಲಕ್ಷ.-೦೦ ರೂ. ಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಇಬ್ಬರನ್ನು ಪರಸ್ಪರ ಹೊಂದಾಣಿಕೆಮಾಡಿಸಿ ಇಬ್ಬರ ಮನಸ್ಸುನ್ನು ಬದಲಾಯಿಸಿ ನೂತನ ಜೀವನಕ್ಕೆ ನ್ಯಾಯಾದೀಶರು ಮನವೋಲಿಸಿ ಸತಿ ಪತಿ ಗಳನ್ನು ಒಗ್ಗೂಡಿಸಿ ಯಶಸ್ವಿಗೊಳಿಸಿದರು

ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದ ಉಭಯ ನ್ಯಾಯಾದೀಶರುಗಳು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ, ಹಿರಿಯ ಮತ್ತು ಹಿರಿಯ ನ್ಯಾಯಾವಾದಿಗಳಿಗೆ, ಹಾಗೂ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡ ಎಲ್ಲಾ ಕಕ್ಷಿದಾರರಿಗೆ ಉಭಯ ನ್ಯಾಯಾ ಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ, ನ್ಯಾಯಾಧೀಶರುಗಳು ಅಭಿನಂಧನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ, ಕೆ.ಜಗದಪ್ಪ, ಉಪಾಧ್ಯಕ್ಷ ವಾಸುದೇವಾ ಬಿ.ಡಿ. ಕಾರ್ಯದರ್ಶಿ ಎಸ್.ಜಿ.ತಿಪ್ಪೇ ಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ನಾಗೇAದ್ರಪ್ಪ, ಖಜಾಂಚಿ ಹುಲಿಯಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ ಗಂಗಾಧರ್ ಗುರುಮಠ್, ಕೆ. ಚಂದ್ರಗೌಡು, ಕೆ.ಬಸವರಾಜ್, ಮತ್ತಿಹಳ್ಳಿ ಅಜ್ಜಣ್ಣ, ಟಿ. ವೆಂಕಟೇಶ್, ಬಿ. ಹಾಲೇಶ್, ಎಸ್.ರುದ್ರಮನಿ, ಕೆ. ಪ್ರಕಾಶ್ , ಬಿ, ಗೋಣಿಬಸಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಬಂಡ್ರಿ, ಆನಂದ, ಮುತ್ತಿಗಿ. ರೇವಣ ಸಿದ್ದಪ್ಪ, ಶಾಂತವೀರ್ ನಾಯ್ಕ, ಎಂ.ಮೃAತಜಯ್ಯ, ಇದ್ಲಿ ರಾಮಪ್ಪ, ಎಂ. ಮಲ್ಲಪ್ಪ, ದೇವರಾಜ್, ಕೆ.ಸಣ್ಣನಿಂಗನಗೌಡ, ನಂದೀಶ್, ಜಿ. ಹಾಲೇಶ್, ಡಿ. ಹನುಮಂತ, ಓ.ತಿರುಪತಿ, ಕೆ.ಕೊಟ್ರೇಶ್, ಕೆ.ನಾಗರಾಜ್, ಸಿ. ಜಾತಪ್ಪ , ಜಾಕೀರ್, ಬಸವರಾಜ್, ಜೆ. ಸೀಮಾ, ರೇಣುಖಾ ಮೇಟಿ, ದ್ರಕ್ಷಯಣಮ್ಮ, ನ್ಯಾಯಾಲಯದ ಸಿಬ್ಬಂದಿಗಳಾದ ಮಂಜುನಾಥ್ ಜನವಾಡೆ, ಮೇಘರಾಜ್, ಶಿವಾನಂದ, ಮುರಳಿಧರ್, ರಂಗಪ್ಪ, ಚೆನ್ನಮಲ್ಲಪ್ಪ, ಮತ್ತು ಇತರರು ಇದ್ದರು.