Wednesday, 9th October 2024

ಜನಗಣತಿ ಆಧಾರದ ಮೇಲೆ ಮೀಸಲಾಇ ನೀಡಿ : ಅಹಿಂದ ಸಮುದಾಯಗಳ ಒಕ್ಕೂಟ ವೇಧಿಕೆ

ಹರಪನಹಳ್ಳಿ: ಬಿಜೆಪಿ ದಾರ್ಶನಿಕರ ಇತಿಹಾಸವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದು ವಾಲ್ಮೀಕಿ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಜನಗಣತಿ ಆಧಾರದ ಮೇಲೆ ಮೀಸಲಾತಿ ನೀಡದೇ ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೊದಿಗೇರಿ ರಮೇಶ ಹೇಳಿದರು.

ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಸಮತಾ ರೆಸಾರ್ಟ್ನಲ್ಲಿ ದಾವಣಗೆರೆ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ದಿಂದ ಸೆ.೨೯ ರಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾತಿವಾರು ಸಮೀಕ್ಷೆಯ ವರದಿ ಬಿಡುಗಡೆಗೆ ಒತ್ತಾಯಿಸಿ ನಡೆಯುವ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆಯಲ್ಲಿ ಭಾಗ ವಹಿಸಿ ಮಾತನಾಡಿ, ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ತೆಗೆದು ಹಾಕುವುದರ ಮೂಲಕ ತಾರತಮ್ಯ ಮಾಡು ತ್ತಿದ್ದಾರೆ. ನಗದೀಕರಣದ ಹೆಸರಿನಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿಯವರು ಮೀಸಲಾತಿಯನ್ನು ತೆಗೆಯುವ ಹುನ್ನಾರ ನಡೆಸಿದ್ದಾರೆ.

ಲಿಂಗಾಯಿತರಿಗೆ ೫೦೦ಕೋಟಿ ಒಕ್ಕಲಿಗರಿಗೆ ೫೦೦ಕೋಟಿ ಕೊಡುವ ಬಿಜೆಪಿ ಸರ್ಕಾರ ಅಹಿಂದ ವರ್ಗದವರಿಗೆ ೫೦೦ ಕೋಟಿ ಕೊಟ್ಟು ಅಹಿಂದ ವರ್ಗಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಲು ಹೊರಟಿದ್ದು ಸಾಮಾಜಿಕ ನ್ಯಾಯ ಬಿಜೆಪಿಯಲ್ಲಿ ಇಲ್ಲ ಎಂದರು.

ದಿನದಿAದ ದಿನಕ್ಕೆ ಅಹಿಂದ ವರ್ಗದವರ ವಿಭಜನೆ ಮಾಡಲಾಗುತ್ತಿದ್ದು ರಾಜ್ಯದಲ್ಲಿ ಅಹಿಂದ ವರ್ಗ ಬಲಿಷ್ಟವಾಗ ಬೇಕು. ಮುಂಬರುವ ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ನಾವೆಲ್ಲರೂ ನಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಹಾಗೂ ಜಾಗೃತಿ ಬೆಳೆಸುವ ಕೆಲಸ ಮಾಡಿ ಮುಂಬರುವ ದಿನಮಾನಗಳಲ್ಲಿ ರಾಜಕೀಯ ಧೃವೀಕರಣವಾಗಬೇಕಿದೆ. ಅಹಿಂದ ಸಂಘಟನೆ ಸ್ವಾಭಿಮಾನದ ಸಂಘಟನೆಯಾಗಬೇಕು ಎಂದರು.

ಅಹಿAದ ಮುಖಂಡ ಪಿ.ರಾಜಕುಮಾರ ಮಾತನಾಡಿ ಎಲ್.ಜಿ.ಹಾವನೂರು.ದೇವರಾಜ ಅರಸು ಅಂಬೇಡ್ಕರ್ ರವರ ಅಸೆಯಂತೆ ನಿರಂತರ ಹೋರಾಟ ಅಗತ್ಯತೆ ಇದೆ. ಸತತ ೫ವರ್ಷಗಳ ಕಾಲ ಹಿಂದುಳಿದ ವರ್ಗಗಳ ನಾಯಕರಾಗಿ ಸಿದ್ದರಾಮಯ್ಯನವರು ಜನಪರ ಆಡಳಿತ ಮಾಡಿದ್ದಾರೆ. ಬಿಜೆಪಿಯವರು ಯಾವುದೆ ನಿಗಮಗಳಿಗೆ ಅನುದಾನ ನೀಡಿಲ್ಲ ಪರಿಶಿಷ್ಟ ಜಾತಿ ಪಂಗಡಗಳ ಅನುದಾನವನ್ನು ಸಮರ್ಪಕವಾಗಿ ನೀಡಿಲ್ಲ ಎಂದರು.

ನಿವೃತ್ತ ಉಪನ್ಯಾಸಕ ವಿ.ಬಿ.ರಾಮಚಂದ್ರಪ್ಪ ಮಾತನಾಡಿ ಹಿಂದುಳಿದವರು ಎಂದರೆ ಆರ್ಥಿಕ, ಶೈಕ್ಷಣಿಕ ರಾಜಕೀಯವಾಗಿ ಹಿಂದೂಳಿದವರು ಎಂದು ಅರ್ಥ. ಎಲ್ಲಾ ಅಲಕ್ಷೀತ ಸಮೂದಾಯಗಳು ಒಂದಾದರೆ ರಾಜಕೀಯ ಪದವಿಗಳು ಗ್ಯಾರಂಟಿ. ಸಾಮಾಜಿಕ ನ್ಯಾಯದ ಪರವಾದ ಸರ್ಕಾರ ಬರಬೇಕು ಅಪಮಾನಿತ ಹಸಿವಿನ ಜನರ ಅಸೆಯಂತೆ ಸಂಘಟನೆ ಯಾರ ವಿರುದ್ದ ಅಲ್ಲ. ಬೆವರಿನ ಮೂಲದಿಂದ ಬಂದವರಾದ ನಮಗೆ ಸಾಮಾಜಿಕ,ರಾಜಕೀಯ ಜಾಗೃತಿ ಬರಬೇಕು ಈ ದೇಶದ ಅಯಾಕಟ್ಟಿನ ಜಾಗದಲ್ಲಿ ಅಹಿಂದ ವರ್ಗದವರಿಗೆ ಉದ್ಯೋಗ ಸಿಕ್ಕರೆ ಅಭಿವೃದ್ಧಿ ಸಾಧ್ಯ. ಹರಪನಹಳ್ಳಿ ಕ್ರಾಂತಿಯ ನೆಲವಾಗಿದ್ದು ಇಲ್ಲಿಂದಲೇ ಹಿಂದುಳಿದ ಸಮುದಾಯವನ್ನು ಬಲಪಡಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯ ದರ್ಶಿ ಪಿ.ಟಿ. ಭರತ್, ಮುಖಂಡರಾದ ಶಂಕ್ರನಹಳ್ಳಿ ಉಮೇಶ್ ಬಾಬು, ಬಸವರಾಜಪ್ಪ, ನಲ್ಕುಂದ ಹಾಲೇಶ, ಲೋಕಿಕೇರಿ ಸಿದ್ದಪ್ಪ, ತಾಲ್ಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎ.ಮೂಸಾಸಾಬ್ ಮಾತನಾಡಿ ಇದೇ ತಿಂಗಳು ಸೆ.೨೯ ರಂದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ವಿರೋಧ ಪಕ್ಷ ದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜರುಗುವ ಧರಣಿ ಸತ್ಯಾಗ್ರಹಕ್ಕೆ ಹರಪನಹಳ್ಳಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ಸಮುದಾಯ ಒಗ್ಗೂಡುವಂತೆ ಕರೆ ನೀಡಿದರು.

ಈ ಸಂಧರ್ಭದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚಂಗೆಪ್ಪ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪ, ಉಪ್ಪಾರ ಸಮಾಜದ ಅಧ್ಯಕ್ಷ ಶಂಕ್ರನಹಳ್ಳಿ ಹನುಮಂತಪ್ಪ, ಹರಿಜನ ಸಮಾಜದ ಆಧ್ಯಕ್ಷ ದುಗ್ಗಾವತಿ ಹನುಮಂತಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಜಂಬಣ್ಣ, ಮುಖಂಡರಾದ ಆಲದಹಳ್ಳಿ ಷಣ್ಮೂಖಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ ಹಾಲೇಶ್, ಹರಿಯಮ್ಮನಹಳ್ಳಿ ರಾಜಕುಮಾರ, ಹಲಗೇರಿ ಮಂಜುನಾಥ, ಪುಣಭಗಟ್ಟ ನಿಂಗಪ್ಪ, ತೆಲಿಗಿ ಯೋಗೀಶ್, ನೀಲಗುಂದ ವಾಗೀಶ್, ತಿಮ್ಮೇಶ್, ಎನ್.ಮಜೀದ್, ನೇಮಿರಾಜ ನಾಯ್ಕ್, ಶಶಿಕುಮಾರ್ ನಾಯ್ಕ್, ತಿಮ್ಮಾರೆಡ್ಡಿ, ಮಂಜುನಾಥ ಸೇರಿದಂತೆ ಇತರರು ಇದ್ದರು.