Thursday, 12th December 2024

Air Quality: ಟಾಪ್ 10ರ ಪಟ್ಟಿಯಲ್ಲಿ ಶುದ್ಧ ಗಾಳಿ ಹೊಂದಿರುವ ಕರ್ನಾಟಕದ ಎರಡು ನಗರಗಳು!

Air Quality

ಏರುತ್ತಿರುವ ಜಾಗತಿಕ ತಾಪಮಾನ, ಹೆಚ್ಚುತ್ತಿರುವ ವಾಯು ಮಾಲಿನ್ಯದ (air pollution) ಕುರಿತು ಈಗ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಈ ನಡುವೆಯೂ ಕೆಲವೊಂದು ಸಂಗತಿಗಳು ಕೊಂಚ ನೆಮ್ಮದಿಯಿಂದ ಉಸಿರಾಡುವಂತೆ ಮಾಡುತ್ತದೆ. ವಾಯು ಗುಣಮಟ್ಟ ಸೂಚ್ಯಂಕದ (Air Quality) ಪ್ರಕಾರ ಕರ್ನಾಟಕದ ಎರಡು ನಗರಗಳಲ್ಲಿ ಶುದ್ಧ ಗಾಳಿಯನ್ನು ಹೊಂದಿದೆ. ಇದು ಟಾಪ್ ಹತ್ತರ ಪಟ್ಟಿಯಲ್ಲಿರುವುದು ಕನ್ನಡಿಗರಿಗೆ ಕೊಂಚ ನೆಮ್ಮದಿ ಕೊಡುವ ಸಂಗತಿ.

ಭಾರತದಾದ್ಯಂತ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಆದರೆ ಹೆಚ್ಚಿನ ಪ್ರದೇಶಗಳಲ್ಲಿ ಉತ್ತಮ ಅಥವಾ ತೃಪ್ತಿದಾಯಕವಾಗಿ ಉಳಿದಿದೆ.

ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಐಜ್ವಾಲ್, ತ್ರಿಶೂರ್, ಬಾಗಲಕೋಟ್ ಮತ್ತು ಚಾಮರಾಜನಗರದಲ್ಲಿ “ಉತ್ತಮ” ಗಾಳಿಯ ಗುಣಮಟ್ಟವನ್ನು ದಾಖಲಿಸಲಾಗಿದೆ. ಇಲ್ಲಿ ವಾಯು ಗುಣಮಟ್ಟ ಮಟ್ಟ 44ರಿಂದ 50ರಷ್ಟಿದೆ.
ದೆಹಲಿ, ಚಂಡೀಗಢದಂತಹ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು ಉಸಿರುಗಟ್ಟಿಸುವಂತಿದ್ದರೆ ಚಾಮರಾಜನಗರ, ಐಜ್ವಾಲ್, ತ್ರಿಶೂರ್ ಮತ್ತು ಬಾಗಲಕೋಟೆಯಂತಹ ನಗರಗಳು ಶುದ್ಧ ಗಾಳಿಯನ್ನು ದಾಖಲಿಸಿವೆ.

ಕರ್ನಾಟಕದ ಚಾಮರಾಜನಗರವು ಗಾಳಿಯ ಗುಣಮಟ್ಟ ಉತ್ತಮವಾಗಿದ್ದು ಸ್ವಚ್ಛವಾಗಿರುವ ನಗರಗಳ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

Air Quality

ಭಾರತದಾದ್ಯಂತ ಹಲವಾರು ನಗರಗಳಲ್ಲಿ ಗಾಳಿಯು ಹೆಚ್ಚಾಗಿ “ಉತ್ತಮ” ಅಥವಾ “ತೃಪ್ತಿದಾಯಕ” ವರ್ಗಗಳಲ್ಲಿ ಉಳಿದಿದೆ. ಐಜ್ವಾಲ್, ತ್ರಿಶೂರ್, ಬಾಗಲಕೋಟ್ ಮತ್ತು ಚಾಮರಾಜನಗರವು “ಉತ್ತಮ” ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ 44 ರಿಂದ 50 ರವರೆಗಿನ ವ್ಯಾಪ್ತಿಯಲ್ಲಿವೆ. ಇನ್ನು ನಾಗಾಂವ್, ಗುವಾಹಟಿ ಮತ್ತು ರಾಮನಾಥಪುರಂಗಳು “ತೃಪ್ತಿದಾಯಕ” ವರ್ಗಕ್ಕೆ ಒಳಪಟ್ಟಿದ್ದು, ಇಲ್ಲಿ ವಾಯು ಗುಣಮಟ್ಟ 56ರಿಂದ 82ರ ನಡುವೆ ಇವೆ.

ಟಾಪ್ 10ರ ಪಟ್ಟಿಯಲ್ಲಿರುವ ಸ್ವಚ್ಛ ನಗರಗಳು

ಭಾನುವಾರ ದಾಖಲಾಗಿರುವ ಅಂಕಿ ಅಂಶಗಳ ಆಧಾರದ ಮೇಲೆ ಭಾರತದ ಈ ನಗರಗಳಲ್ಲಿ ವಾಯು ಗುಣಮಟ್ಟ ಇಂತಿದೆ.

ಮಿಜೋರಾಂನ ಐಜ್ವಾಲ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 50 ಆಗಿದ್ದು ಉತ್ತಮ ಎಂದು ದಾಖಲಾಗಿದೆ. ಕರ್ನಾಟಕದ ಬಾಗಲಕೋಟೆಯಲ್ಲಿ 46, ಚಾಮರಾಜನಗರದಲ್ಲಿ 44, ಕೇರಳದ ತ್ರಿಶೂರ್ ನಲ್ಲಿ 50 ದಾಖಲಾಗಿದ್ದು, ಉತ್ತಮ ಎಂದು ದಾಖಲಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿ 82, ಕೇರಳದ ಕೊಲ್ಲಂನಲ್ಲಿ 61, ಅಸ್ಸಾಂನ ನಾಗಾಂವ್ ನಲ್ಲಿ 56, ತಮಿಳುನಾಡಿನ ರಾಮನಾಥಪುರಂನಲ್ಲಿ 68, ಉತ್ತರಾಖಂಡದ ಋಷಿಕೇಶದಲ್ಲಿ 73, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 80 ದಾಖಲಾಗಿದ್ದು, ತೃಪ್ತಿದಾಯಕ ವರ್ಗದಲ್ಲಿ ಉಳಿದಿದೆ.

Tirupati Tirumala Temple:‌ ಡಿ.1ರಿಂದ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ದರ್ಶನ ಟಿಕೆಟ್ ಕ್ಯಾನ್ಸಲ್

ಈ ನಡುವೆ ದೆಹಲಿಯು ಭಾನುವಾರ ಅತ್ಯಂತ ಕಲುಷಿತ ನಗರವಾಗಿದ್ದು, ಅತ್ಯಂತ ಕಳಪೆ ವರ್ಗದ ಅಡಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 366 ದಾಖಲಿಸಿದೆ.