ಸಿದ್ಧಲಿಂಗಯ್ಯನವರು ಹೆಗಡೆಯಿಂದ ಅಮಿತ್ ಶಾವರೆಗೂ ಸಾಧಿಸಿದ್ದ ಉತ್ತಮ ರಾಜಕೀಯ ಸಖ್ಯ
ಶಿವಕುಮಾರ್ ಬೆಳ್ಳಿತಟ್ಟೆ
ರಾಜಕಾರಣದ ವಿಚಾರಕ್ಕೆ ಬಂದರೆ ಕವಿ ಸಿದ್ಧಲಿಂಗಯ್ಯ ಅವರು ಒಂದು ರೀತಿಯಲ್ಲಿ ರಾಜಕೀಯ ಅಜಾತಶತ್ರು. ಅವರು ಎಲ್ಲಾ ರಾಜಕಾರಣಿಗಳಿಗೂ, ಎಲ್ಲಾ ಪಕ್ಷದವರಿಗೂ, ಮುಖಂಡರಿಗೂ ಬೇಕಾಗಿದ್ದ ವಿಶೇಷ ವ್ಯಕ್ತಿತ್ವದವರಾಗಿದ್ದರು. ರಾಜಕಾರಣ ಇವರನ್ನು ಹುಡುಕಿ ಬರುತ್ತಿತ್ತೋ ಅಥವಾ ಇವರೇ ರಾಜಕಾರಣದಲ್ಲಿ ಆಸಕ್ತಿ ವಹಿಸಿ ಹೋಗುತ್ತಿದ್ದರೋ ಎನ್ನುವುದಕ್ಕಿಂತ ಇವರು ರಾಜ್ಯ ರಾಜಕೀಯದ ಅನೇಕ ಬೆಳವಣಿಗಳಿಗೆ ಸಾಕ್ಷಿಯಾಗಿದ್ದವರು.
ಯಾವುದೇ ಪಕ್ಷವನ್ನಾಗಲಿ, ಪಕ್ಷದ ನಾಯಕರನ್ನಾಗಲಿ ಬಹಿರಂಗವಾಗಿ ವಿರೋಧಿಸಿ ಶತ್ರುತ್ವ ಕಟ್ಟಿಕೊಳ್ಳದ ವಿಶೇಷ ಗುಣ ಇವರಿಗೆ ಅನೇಕ ರಾಜಕೀಯ ಅವಕಾಶಗಳನ್ನು ತಂದು ಕೊಟ್ಟಿತ್ತು. ಎಲ್ಲರ ಜತೆಗಿನ ಆತ್ಮೀಯತೆ ಮತ್ತು ಜನಾನುರಾಗಿ ಸ್ವಭಾವ ಇವರಿಗೆ ಎರಡು ಬಾರಿ ವಿಧಾನಪರಿಷತ್ ಸದಸ್ಯತ್ವ ಗೌರವ ಸಿಗುವಂತೆ ಮಾಡಿತ್ತು.
ಅಷ್ಟೇ ಏಕೆ, ಸರಕಾರದ ಪ್ರಾಧಿಕಾರ ಗಳು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಪ್ರೊಫೆಸರ್, ಗಾಂಧಿಭವನದ ನಿರ್ದೇಶಕರೂ ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಗೊಂಡು ಗಮನಾರ್ಹ ಸೇವೆ ಸಲ್ಲಿಸಿದ್ದರು. 80ರ ದಶಕದಲ್ಲಿ ಬಂಡಾಯ ಸಾಹಿತ್ಯದ ಮೂಲಕ ಅಪಾರ ಸಂಖ್ಯೆಯ ಒದುಗರನ್ನು ಸೃಷ್ಟಿಸಿಕೊಂಡಿದ್ದ ಸಿದ್ಧಲಿಂಗಯ್ಯ ಅವರು ಒಂದು ರೀತಿಯಲ್ಲಿ ಎಡಪಂಥೀಯ ಧೋರಣೆಗೆ ಹೆಸರಾಗಿದ್ದವರು. ಆಗ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ತರಬೇಕೆನ್ನುವ ರಾಮಕೃಷ್ಣ ಹೆಗಡೆ ಅವರ
ಹೋರಾಟದಿಂದ ಪರೋಕ್ಷವಾಗಿ ಆಕರ್ಷಿತರಾಗಿದ್ದರು.
ಹೋರಾಟದ ಘೋಷಣೆಗಳು: ಇಂದಿರಾಗಾಂಧಿ ಹತ್ಯೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸೇ ತರ ಪಕ್ಷ ಬೆಂಬಲಿಸಬೇಕೆನ್ನುವ ಅಂದಿನ ಪ್ರಯತ್ನಗಳಿಗೆ ಸಿದ್ಧಲಿಂಗಯ್ಯ ಬೆಂಬಲ ನೀಡಿದ್ದರು. ಅಂದಿನ ಹೋರಾಟದ ಘೋಷಣೆಗಳು, ಬೀದಿ ನಾಟಕಗಳು ಮತ್ತು ಹಾಡುಗಳಿಗೆ ಸಾಹಿತ್ಯದ ಮೂಲಕ ಸಹಕರಿಸಿದರು. ಈ ಮೂಲಕ ಅಂದಿನ ಕಾಂಗ್ರೆಸ್ ವಿರುದ್ಧದ ಹೋರಾಟ ಸಮರ ಸಾರಿದ್ದ ರಾಮಕೃಷ್ಣ ಹೆಗಡೆ ಅವರ ಸಂಪರ್ಕ ಸಾಧಿಸಿದ್ದರು.
ಆನಂತರ ಸಿದ್ಧಲಿಂಗಯ್ಯಅವರ ಮಾತುಗಾರಿಕೆ, ಪ್ರಗತಿಪರ ಚಿಂತನೆ ಹಾಗೂ ಕಾಂಗ್ರೆಸ್ ವಿರೋಧಿ ಚರ್ಚೆಗಳು ಹೆಗಡೆ ಅವರಿಗೆ ಇನ್ನೂ ಆಪ್ತರಾಗುವಂತೆ ಮಾಡಿತ್ತು. ಇದರ ಪರಿಣಾಮ 1988ರಲ್ಲಿ ಹೆಗಡೆ ಅವರು ಮುಖ್ಯಮಂತ್ರಿಯಾಗಿ zಗ ಸಿದ್ಧಲಿಂಗಯ್ಯ ಅವರು ಪ್ರಥಮ ಬಾರಿಗೆ ವಿಧಾನ ಪರಿಷತ್ ನಾಮನಿರ್ದೇಶಕ ಸದಸ್ಯರಾಗಿದ್ದರು. ನಂತರ ಅಧಿಕಾರಕ್ಕೆ ಬಂದ ಮಾಜಿ ಪ್ರಧಾನಿ ದೇವೇಗೌಡರ ಸರಕಾರದಲ್ಲೂ ಸಿದ್ಧಲಿಂಗಯ್ಯ ಪರಿಷತ್ ಸದಸ್ಯರಾಗಿ 2ನೇ ಬಾರಿಗೆ ನಾಮ ನಿರ್ದೇಶಿತರಾಗಿದ್ದರು. ಅಂದರೆ ಇವರು ರಾಮಕೃಷ್ಣ ಹೆಗಡೆ ಅವರಿಗೆ ಆಪ್ತರಾಗಿದ್ದರೂ ಆನಂತರದಲ್ಲಿ ಜನತಾದಳ ವಿಭಜನೆ ನಂತರದಲ್ಲೂ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿ ಎರಡನೇ ಬಾರಿಗೆ ಮುಂದುವರಿದರು. ಅಂದರೆ ಸಿದ್ಧಲಿಂಗಯ್ಯಅವರು ದೇವೇಗೌಡರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಸಿದ್ಧಲಿಂಗಯ್ಯ ಅವರ ಒಡನಾಟವನ್ನು ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತ ಸ್ಮರಿಸಿಕೊಳ್ಳುತ್ತಾರೆ.
ಅಷ್ಟೇ ಅಲ್ಲ. 2008 ರ ಸಮಯಕ್ಕೆ ಅಧಿಕಾರಕ್ಕೆ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ
ಸರಕಾರದಲ್ಲೂ ಸಿದ್ಧಲಿಂಗಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿ
ದ್ದರು. ಅಂದರೆ ಸಿದ್ಧಲಿಂಗಯ್ಯ ಅವರು ಹೆಗಡೆ, ಗೌಡರ ನಂತರ ಯಡಿಯೂರಪ್ಪ ಅವರ ವಿಶ್ವಾಸವನ್ನೂ ಉತ್ತಮ ರೀತಿಯ ಸಂಪಾದಿಸಿದ್ದರು.
ಅಮಿತ್ ಶಾ ಭೇಟಿ, ಟೀಕೆ
ಇತ್ತೀಚಿಗೆ ಸಿದ್ಧಲಿಂಗಯ್ಯಅವರ ಮನೆಗೆ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬರಮಾಡಿಕೊಂಡು
ರಾಜಕೀಯವಾಗಿ ಗಮನ ಸೆಳೆದಿದ್ದೂ ಉಂಟು. ಆಗಲೇ ಮನೆಯಲ್ಲಿ ಮನುಸ್ಮೃತಿ ಪುಸ್ತಕ ಬಿಡುಗಡೆಯನ್ನೂ ನಡೆಸಿ ಅನೇಕ ಸಂಘಟನೆ ಗಳಿಂದ ಟೀಕೆಗೂ ಗುರಿಯಾಗಿದ್ದರು. ಆದರೂ ಇದ್ಯಾವುದನ್ನೂ ಲೆಕ್ಕಿಸದ ಅವರು ಪಕ್ಷಾತೀತವಾಗಿ ಎಲ್ಲರನ್ನೂ ಪ್ರೀತಿಸುತ್ತೇನೆ ಎನ್ನುವ ಸಂದೇಶವನ್ನು ಸಾಹಿತ್ಯ ಮತ್ತು ಪ್ರಗತಿಪರ ವಲಯಕ್ಕೆ ನೀಡಿದ್ದರು.
ಮತ್ತೊಂದು ವಿಶೇಷವೆಂದರೆ, ಸಿದ್ಧಲಿಂಗಯ್ಯಅವರು ನಾಮ ನಿರ್ದೇಶನ ಆಗುವವರೆಗೂ ಪಕ್ಷದವರಂತೆ ಕಾಣುತ್ತಿದ್ದರೂ ಮೇಲ್ಮನೆ ಸದಸ್ಯರಾದ ನಂತರ ಸದನದಲ್ಲಿ ಪಕ್ಷಾತೀತವಾಗಿಯೇ ಗಮನ ಸೆಳೆಯುತ್ತಿದ್ದರು. ಅಂದರೆ ದೇವರು ಮತ್ತು ಮೌಢ್ಯ ವಿರೋಧಿಸಿ ಮಾತನಾಡುವಾಗ ಹಾಸ್ಯ ಮಿಶ್ರಿತ ಭಾಷಣದಲ್ಲಿ ಎಲ್ಲರೂ ಒಪ್ಪುವಂತೆ ಮಾಡುತ್ತಿದ್ದರು. ಹಾಗೆಯೇ ದೇವರಿzನೆ ಎನ್ನುವುದನ್ನು ನಾಸ್ತಿಕರಿಗೆ ಬೇಸರವಾಗುವಂತೆಯೂ ತಿಳಿ ತಮಾಷೆಯಲ್ಲಿ ಮನವರಿಕೆ ಮಾಡುತ್ತಿದ್ದರು.
ಸದನದಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ವಿಚಾರಗಳು ಬಂದಾಗ ಸಿದ್ಧಲಿಂಗಯ್ಯ ಅವರು ಖಂಡಾತುಂಡವಾಗಿ ಏನನ್ನೂ ಹೇಳದೆ ಯಾರಿಗೂ ಏನು ವಿಷಯ ಮುಟ್ಟಬೇಕೋ ಅ ರೀತಿ ಮುಟ್ಟಿಸುತ್ತಿದ್ದರು. ಪಕ್ಷದಿಂದ ನಾಮ ನಿರ್ದೇಶಿತನಾಗಿ ದ್ದೇನೆ ಎಂದು ಪಕ್ಷದ ಎಲ್ಲ ಕ್ರಮಗಳನ್ನೂ ಸಮರ್ಥಿಸಲು ಹೋಗುತ್ತಿರಲಿಲ್ಲ ಎನ್ನುತ್ತಾರೆ ಅವರ ಜತೆ ಮೇಲ್ಮನೆ ಸದಸ್ಯರಾಗಿ ದ್ದವರು.