ಹರಪನಹಳ್ಳಿ: ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಬೆಂಡಿಗೇರೆ ಗ್ರಾಮದ(ಬೆಂಡಿಗೇರೆತಾಂಡ) ಗುರುಸಿದ್ದಪ್ಪ ಅವರು ನೇಮಕವಾಗಿದ್ದಾರೆ.
ಗುರುಸಿದ್ದಪ್ಪ ಅವರನ್ನು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ, (ಕ್ರಾಂತಿ) ರಾಜ್ಯ ಹಾಗೂ ಜಿಲ್ಲಾ ಸಮಿತಿ ಮೇರೆಗೆ ಮತ್ತುಹಿರಿಯರ ಶಿಫಾರಸ್ಸಿನ ಮೇರೆಗೆ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಅವರು ನೇಮಕ ಮಾಡಿದ್ದಾರೆ.
ಈ ಗುರುತರವಾದ ಜವಾಬ್ದಾರಿ ವಹಿಸಿಕೊಂಡು ವೇದಿಕೆ ಯಧ್ಯೇಯೋದ್ದೇಶ, ಗುರಿ ಮತ್ತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ವಿವಿಧ ವಿಭಾಗಗಳನ್ನು ಪರಿಣಾಮ ಕಾರಿಯಾಗಿ ಸಂಘಟಿಸಿ, ಇತರ ಸಮುದಾಯಗಳ ಸಹಕಾರ, ಸೌಹಾರ್ದತೆ ಹಾಗೂ ಪ್ರಗತಿಯೊಂದಿಗೆಯುವ ವೇದಿಕೆಯನ್ನು ಬಲಿಷ್ಠಗೊಳಿಸಬೇಕು ಎಂದು ಗುರುಸಿದ್ದಪ್ಪ ಅವರಿಗೆ ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.