Wednesday, 11th December 2024

ನವೀನ್ ನಾಡಗೌಡ ಹುಟ್ಟು ಹಬ್ಬ, ಸಸಿ ನೆಟ್ಟು ಗ್ರಾಮದಲ್ಲಿ ಅನ್ನಸಂತರ್ಪಣೆ

ಮಾನವಿ: ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ತಾಲೂಕು ಬಿಜೆಪಿ ಯುವ ಘಟಕ ಅಧ್ಯಕ್ಷರು ನವೀನ್ ನಾಡಗೌಡ ಅವರು ತಮ್ಮ 28ನೇ ವರ್ಷದ ಜನ್ಮ ದಿನದ ಪ್ರಯುಕ್ತ ಹಾಗೂ ಜೂ.5 ವಿಶ್ವ ಪರಿಸರ ದಿನ ಅಂಗವಾಗಿ ಗ್ರಾಮದಲ್ಲಿ ಸಸಿ ನೆಡುವುದರ ಜೊತೆಗೆ 600ಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಕೈಗೊಂಡಿದ್ದರು.

ಪೋತ್ನಾಳ ಗ್ರಾಮದಲ್ಲಿ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನ ಕೈಗೊಳ್ಳು ವ ಇವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನ ವಿಭಿನ್ನವಾಗಿ ಆಚರಿಸಿ ಕೊಂಡರು.

ನಂತರ ಗ್ರಾಮದ ಗುರು ಹಿರಿಯರು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು. ಈ ವೇಳೆ, ಪೋತ್ನಾಳ ಗ್ರಾಮದ ಗುರುಹಿರಿಯರು ಹಾಗೂ ಗೆಳೆಯರ ಬಳಗವು ಪಾಲ್ಗೊಂಡು ಶುಭ ಹಾರೈಸಿದರು.