Saturday, 14th December 2024

ರಣಜಿ ಕ್ರಿಕೆಟ್ ಪಟು ಬಿ. ವಿಜಯಕೃಷ್ಣ ಇನ್ನಿಲ್ಲ

ಬೆಂಗಳೂರು: ಕರ್ನಾಟಕದ ರಣಜಿ ಕ್ರಿಕೆಟ್ ಪಟು ಬಿ. ವಿಜಯಕೃಷ್ಣ(71) ಗುರುವಾರ ನಿಧನರಾದರು.
ರಣಜಿ ಕ್ರಿಕೆಟ್ ನ ಎಡಗೈ ಸ್ಪಿನ್ನರ್, ಬೌಲರ್ ಖ್ಯಾತಿಯ ವಿಜಯ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ಅವರ ಸಹೋದರರಾದ ವಿಜಯ್ ಕೃಷ್ಣ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರ ಸಂಬಂಧಿಯೂ ಹೌದು. ಬೆಂಗಳೂರಿನ ಕುಮಾರ ಪಾರ್ಕ್ ನಲ್ಲಿ ವಾಸಿಸುತ್ತಿದ್ದ ಮೃತರ ಅಂತ್ಯಕ್ರಿಯೆ  4 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ನೆರವೇರಲಿದೆ.
ತಮ್ಮ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅತ್ಯುತ್ತಮ ಕ್ರಿಕೆಟ್ ಪಟು ಎನಿಸಿಕೊಂಡಿದ್ದ ವಿಜಿ ಅವರು, ಅಪರೂಪದ ಆಲ್-ರೌಂಡರ್ ಆಗಿದ್ದರು. ಸುಮಾರು 80ಕ್ಕೂ ಹೆಚ್ಚು ಪ್ರಥಮ ಶ್ರೇಣಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮಾಡಿದ್ದ ಇವರು 198 ವಿಕೆಟ್ ಹಾಗೂ ಸುಮಾರು 2000 ರನ್ ಗಳನ್ನು ಬಾಚಿಕೊಂಡಿದ್ದರು.