ಹರಪನಹಳ್ಳಿ: ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದಿಂದ ತಾಲೂಕಿನ ಪ್ರತಿಯೊಂದು ಗ್ರಾಮೀಣ ಪ್ರದೇಶದ ಜನರ ಕಷ್ಟಕ್ಕೆ ಭಾಗಿಯಾಗಿ ಸುಮಾರು ೩೦ ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ ಬಂದಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷವನ್ನು ಸಂಘಟಿಸುತ್ತ ಬಂದಿದ್ದೇನೆ. ಹೈಕಮಾಂಡ್ ಗುರುತಿಸಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ನಾನು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದ ನಿದ್ದೇನೆ. ಎಂದು ಹಿರಿಯ ನ್ಯಾಯಾವಾದಿ ಹಾಗೂ ಕ.ರಾ.ರ.ಸಾ.ನಿಗಮದ ನಿರ್ದೇಶಕ ಆರುಂಡಿ ನಾಗರಾಜ್ ಹೇಳಿದರು.
ಪಟ್ಟಣದ ಹಳೇ ಬಸ್ಸ್ ನಿಲ್ದಾಣದಲ್ಲಿರುವ ತಮ್ಮ ಜನ ಸಂಪರ್ಕ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಸುಮಾರು ವರ್ಷಗಳಿಂದ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ ತಾಲೂಕಿನ ಎಲ್ಲಾ ಸಮುದಾಯದ ಜನರ ಪ್ರೀತಿ ವಿಶ್ವಾಸವನ್ನು ಹತ್ತಿರದಿಂದ ಕಂಡು ಪಕ್ಷವನ್ನು ಸಂಘಟಿಸಿದ್ದೇನೆ. ನಾನು ಕೂಡ ತಾಲೂಕು ಬಿಜೆಪಿ ಅಧ್ಯಕ್ಷರಾಗಿ, ಪಕ್ಷದ ಕಾರ್ಯಕಾರಣಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಶ್ರೀಮತಿ ಡಾ.ಆರುಂಡಿ ಸುವರ್ಣಮ್ಮ ಪಿ.ಹೆಚ್.ಡಿ ಪದವಿಯ ಜೊತೆಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿ ಹಲುವಾಗಲು ಜಿಲ್ಲಾ ಮಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿಯಾಗಿ ಅಭೂತಪೂರ್ವ ಗೆಲುವಿನ ಮೂಲಕ ಮತದಾರರ ಪ್ರೀತಿ ಯನ್ನು ಗಳಿಸಿದ್ದಾರೆ. ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಪಕ್ಷವನ್ನು ಸಂಘಟಿಸಿದ್ದೇವೆ ಎಂದು ವಿಶ್ಲೇಷಿಸಿದರು.
ಸುಮಾರು ಹತ್ತು ವರ್ಷಗಳಿಂದ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯಾರ್ಥಿ ಸ್ಥಳೀಯದವರಾಗಬೇಕು ಎಂಬ ಕೂಗು ಕೇಳಿಬರುತ್ತಿತ್ತು ಆದರೆ ಕಾಲ ಈಗ ಕೂಡಿಬಂದಿದೆ ತಾಲೂಕಿನ ಜನರು ಸ್ಥಳೀಚಿiÀÄ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಮಾತ್ರ ಕ್ಷೇತ್ರ ಅಭಿವೃದ್ದಿಯಾಗುವದಕ್ಕೆ ಸಾಧ್ಯವಾಗುತ್ತದೆ ಇಲ್ಲವಾದರೆ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರ ಅತಿಥಿ ಕ್ಷೇತ್ರವಾಗಿ ಉಳಿಯುತ್ತದೆ ಆದ್ದರಿಂದ ಹರಪನಹಳ್ಳಿ ತಾಲೂಕಿನ ಮತದಾರರು ಸ್ಥಳೀಚಿiÀÄ ನಾಯಕರನ್ನು ಬೆಂಬಲಿಸಬೇಕು ನಾನು ಕೂಡ ಬಿಜೆಪಿ ಪಕ್ಷದ ಅಭ್ಯಾರ್ಥಿಯಾಗಿದ್ದು, ಪಕ್ಷದ ಹಿರಿಯರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿ ಅವರ ಸನ್‌ಮಾರ್ಗದಲ್ಲಿ ನಡೆಯುತ್ತೇನೆ. ವಿಶ್ವಾಸ ವ್ಯಕ್ತಪಡಿಸಿದರು.