Friday, 13th December 2024

Aurangzeb Banner: ಬೆಳಗಾವಿಯಲ್ಲಿ ಔರಂಗಜೇಬ್‌ ಬ್ಯಾನರ್‌, ಕಿಡಿಗೇಡಿಗಳ ಕೃತ್ಯಕ್ಕೆ ನಗರ ಉದ್ವಿಗ್ನ

aurangzeb

ಬೆಳಗಾವಿ: ರಾತ್ರೋರಾತ್ರಿ ಹಿಂದೂವಿರೋಧಿ ಮೊಗಲ್‌ ಸುಲ್ತಾನ ಔರಂಗಜೇಬನ ಬ್ಯಾನರ್‌ (Aurangzeb Banner) ಅಳವಡಿಸಿದ ಕೆಲವು ಮುಸ್ಲಿಂ ಕಿಡಿಗೇಡಿಗಳ ನಡೆ ಇದೀಗ ಬೆಳಗಾವಿ ನಗರದಲ್ಲಿ (Belagavi crime news) ಪರಿಸ್ಥಿತಿಯ ಉದ್ವಿಗ್ನತೆಗೆ (Belagavi tense) ಕಾರಣವಾಗಿದೆ.

ಬೆಳಗಾವಿಯ ಶಾಹುನಗರದಲ್ಲಿ ಹಿಂದೂವಿರೋಧಿ ಸುಲ್ತಾನ ಔರಂಗಜೇಬನ ಫೋಟೋಗಳಿದ್ದ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಇದಕ್ಕೆ “celebrating sultan E hind the real founder of akhand bharat” ಎಂಬ ಪ್ರಚೋದಕ ಬರಹವನ್ನೂ ಕೊಡಲಾಗಿತ್ತು. ರಾತ್ರೋರಾತ್ರಿ ಕೆಲವು ಕಿಡಿಗೇಡಿ ಯುವಕರು ಇವುಗಳನ್ನು ಅಳವಡಿಕೆ ಮಾಡಿದ್ದರು. ಇದನ್ನು ಗಮನಿಸಿದ ಸ್ಥಳೀಯ ಜನತೆ ಬ್ಯಾನರ್ ಅಳವಡಿಕೆಗೆ ಆಕ್ಷೇಪ ಮಾಡಿದ್ದರು. ಬ್ಯಾನರ್ ತೆರವು ಮಾಡುವಂತೆ ಪೊಲೀಸರಿಗೆ ಸ್ಥಳೀಯರು ಒತ್ತಾಯ ಮಾಡಿದ್ದರು.

ಪೊಲೀಸರು ಕೂಡಲೇ ಇದನ್ನು ಬೆಳಗಾವಿ ಮಹಾನಗರ ಪಾಲಿಕೆ ಗಮನಕ್ಕೆ ತಂದು ಬ್ಯಾನರ್ ತೆರವು ಮಾಡಿದ್ದರು. ಬ್ಯಾನರ್ ತೆರವು ಮಾಡಿದ್ದರಿಂದ ಕೆಲವು ಮುಸ್ಲಿಂ ಯುವ ಪುಢಾರಿಗಳು ಹಾಗೂ ಕಿಡಿಗೇಡಿಗಳು ಕ್ರುದ್ಧರಾಗಿದ್ದು, ವಿವಾದಾತ್ಮಕ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಔರಂಗಜೇಬ್‌ ಬ್ಯಾನರ್‌ ತೆರವು ಮಾಡಿದ್ದನ್ನುಆಕ್ಷೇಪಿಸಿದ್ದಾರೆ.

“ನಗರದಲ್ಲಿ ಹಿಂದೂ ರಾಷ್ಟ್ರ ಅಂತ ಬರೆದ ಬ್ಯಾನರ್ ಹಾಕಿದ್ದಾರೆ. ಬ್ರಿಟಿಷರ ಬೂಟು ನೆಕ್ಕಿದ್ದ ಸಾವರ್ಕರ್ ಬ್ಯಾನರ್ ಹಾಕಿದ್ದಾರೆ. ಅದನ್ನು ಯಾಕೆ ಪೊಲೀಸರು ತೆಗೆಸಿಲ್ಲ? ಔರಂಗಜೇಬ್‌ ಬ್ಯಾನರ್ ತೆರವು ಮಾಡಿದ್ದನ್ನು ನಾವು ಸಹಿಸುವುದಿಲ್ಲ” ಎಂದು ಮುಸ್ಲಿಂ ಯುವಕರು ಪ್ರಚೋದಕ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದಾರೆ.

ಈ ವಿಡಿಯೋಗಳು ನಗರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಕೂಡಿದೆ. ರಾತ್ರೋರಾತ್ರಿ ಔರಂಗಜೇಬ್‌ ಬ್ಯಾನರ್‌ ಅಳವಡಿಕೆಯ ಹಿಂದೆ ನಗರದ ಶಾಂತಿ ಸುವ್ಯವಸ್ಥೆ ಕದಡುವ ವಿಧ್ವಂಸಕ ಶಕ್ತಿಗಳ ಕೈವಾಡವಿದೆ. ಇದನ್ನು ಪತ್ತೆ ಹಚ್ಚಿ ನಿಗ್ರಹಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: Children Kidnap: ಬೆಳಗಾವಿಯ ಮಕ್ಕಳ ಕಳ್ಳರ ಕಾಲಿಗೆ ಗುಂಡು ಹಾರಿಸಿ ಸೆರೆ, ಮಕ್ಕಳ ರಕ್ಷಣೆ