ಹರಪನಹಳ್ಳಿ: ಯಾವ ವ್ಯಕ್ತಿ ವೃತ್ತಿ ಮತ್ತು ಪರಿಶ್ರಮ ಹೊಂದಿರುತ್ತಾನೋ ಅಂತಹವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂದು ಸಾಹಿತಿ ಇಸ್ಮಾಯಿಲ್ ಎಲಿಗಾರ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜೀವಜಲ ಟ್ರಸ್ಟ್ ನಡಿ ಬುಧುವಾರ ಯಕ್ಷಗಾನ ಪ್ರಶಸ್ತಿ ವಿಜೇತ ಸಮಸ್ತರು ಬಿ.ಪರಶುರಾಮರವರಿಗೆ ಸನ್ಮಾನಿಸಿ, ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ರಂಗಭೂಮಿ ನಶೀಷಿ ಹೋಗುತ್ತಿದ್ದು, ಅಂತಹ ಕಲೆಯನ್ನು ಪರಿಶ್ರಮದಿಂದ ಸಾಧರಪಡಿಸಿ ತಾಲೂಕಿಗೆ ಕೀರ್ತಿ ತಂದ ಪರಶುರಾಮ ರವರು ಅವರ ಯೋಜನೆಗಳು ಮುಂದಿನ ದಿನಗಳಲ್ಲಿ ಸಫಲವಾಗಲಿ ಎಂದು ಹೇಳಿದರು. ಇಂದಿನ ಯುವಪೀಳಿಗೆ ರಂಗಸಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಡಿ.ರಾಮನಮಲಿ ಮಾತನಾಡಿ ಬಹುಮುಖಿ ಪ್ರತಿಭೆಯನ್ನು ಹೊಂದಿರುವ ಪರಶುರಾಮರವರು ಋಷಿಗಳ ತಪಸ್ಸಿನಂತೆ ರಂಗಕ್ಷೇತ್ರದಲ್ಲಿ ಸತತ ಪ್ರಯತ್ನದಿಂದ ಇಂದು ರಾಜ್ಯಮಟ್ಟದ ಯಕ್ಷಗಾನ ಪ್ರಶಸ್ತಿ ೨೦೨೦ ಲಭಿಸಿರುವುದು ತಾಲೂಕಿನ ಹೆಮ್ಮೆಯನ್ನು ಹೆಚ್ಚಿಸಿದೆ ಎಂದ ಅವರು ಇವರು ಸಂಘಟನೆ, ಹೋರಾಟ ಜೊತೆಗೆ ಸಮಾಜಮುಖಿ ಕಾರ್ಯಗಳು ಇವರನ್ನು ಗುರುತಿಸುವಂತೆ ಮಾಡಿವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಪರಶುರಾಮರವರು ಹೋರಾಟ ಚಳುವಳಿ ನಿಂತ ನಿರಾಗಬಾರದು ಸದಾ ಹರಿಯುವ ನೀರಾಗಬೇಕು. ಕಾಲ ಕಾಲಕ್ಕೆ ತಕ್ಕಂತೆ ಜೀವನ ಶೈಲಿ ಕೂಡ ನನ್ನನ್ನು ಉನ್ನತಮಟ್ಟಕ್ಕೆ ಕೊಂಡೊ ಯ್ಯುದಿದೆ ಎಂದ ಅವರು ಯಕ್ಷಗಾನದ ಇತಿಹಾಸ ಅರಿಯುವಲ್ಲಿ ಮುಂದಿನ ಪಿಳಿಗೆ ಗಳಿಗೆ ದಾರಿದೀಪ ಆಗಲಿ. ಇಂದಿನ ಪ್ರಶಸ್ತಿ ಸಿಕ್ಕಿದ್ದು ಹರಪನಹಳ್ಳಿ ಜನರ ಪ್ರೀತಿ, ವಿಶ್ವಾಸವೇ ಸರಿ ಮೂಡಲಪಾಯ ಜೀವಂತ ಸಾಕ್ಷಿ ಎಂದರು.
ರಾಜ ಸೋಮಶೇಖರನ ಅಳ್ವಿಕೆಯಲ್ಲಿ ಹರಪನಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿನ ಕಲಾ ಕೇಂದ್ರಗಳು ಎಲ್ಲರನ್ನು ಮೆಚ್ಚಿಸುತ್ತಿದ್ದವು, ಆಗಾಗಿ ನೆಲದಲ್ಲಿ ಹುಟ್ಟಿದ ನನಗೆ ಕಲೆ, ಗಟ್ಟಿತನ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದರು. ಜೀವಲಜಲ ಟ್ರಸ್ಟ್ ಅಧ್ಯಕ್ಷ ಮೋರಿಗೇರಿ ಹೇಮಣ್ಣ ಮಾತನಾಡಿದರು. ಎಲ್‌ಐಸಿ ವೀರಭದ್ರಪ್ಪ, ನಾರಾಯಣ, ಇತರರು ಇದ್ದರು.