ಇಂಡಿ: ಸ್ಥಳೀಯ ಶ್ರೀಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯ ಕ್ರಮ ಅದ್ದೂರಿಯಾಗಿ ಜರುಗಿತು.
ಭಾಷೆ ಎಂಬುದು ಮನುಷ್ಯನಿಗೆ ಇರದಿದ್ದರೆ ಪ್ರಪಂಚ ಕತ್ತಲಾಗುತ್ತಿತ್ತು. ಭಾಷೆಗಳ ಮೂಲಕ ಪ್ರತಿಯೋಂದು ಚಟುವಟಿಕೆ ಗುರು ತಿಸಲು ಸಾಧ್ಯ. ಪ್ರತಿಯೋಬ್ಬರಿಗೂ ತಮ್ಮ ನಾಡು,ನುಡಿ ದೇಶ ಭಾಷೆಗಳ ಬಗ್ಗೆ ಅಭಿಮಾನ ಇರಬೇಕು.
ಕನ್ನಡಿಗರಿಗೆ ಮಾತೃಭಾಷೆಯೇ ಜೀವಾಳ ತಾಯಿ ತೊಡಿಯ ಮೇಲೆ ಲಲನೇಯಿಂದ ಆಡಿದ ಭಾಷೆ ಕನ್ನಡ ಅದಕ್ಕಾಗಿ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಗೌರವ ಇರಬೇಕು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕವಿವಾಣಿಯಂತೆ ಕನ್ನಡ ಭಾಷೆಯಷ್ಟು ಸರಳ, ಸುಲಲೀತ ಭಾಷೆ ಬೇರೊಂದಿಲ್ಲ. ವಿಧ್ಯಾರ್ಥಿಗಳಿಗೆ ಕನ್ನಡ ಭಾಷೆ ಯಲ್ಲಿ ಬೋದನೆ ಮಾಡಿದರೆ ತಿಳುವಳಿಕೆ ಮೂಡುತ್ತದೆ. ಕನ್ನಡ ಬೆಳೆಸಲು ಪ್ರತಿಯೋಬ್ಬ ಕನ್ನಡಿಗ ಇಂದು ಪ್ರತಿಜ್ಞೆ ಮಾಡಬೇಕು ಇಂಡಿ ಮಹಾರಾಷ್ಟ್ರದ ಸಮೀಪ ಗಡಿಯಲ್ಲಿ ದ್ದರೂ ಕೂಡಾ ಕನ್ನಡ ಭಾಷೆಯ ಗಟ್ಟಿತನ ಸದಾ ಅಚ್ಚಳಿಯದೆ ಜನರ ಭಾಷೆಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶೀ ಪ್ರಭಾಕರ ಬಗಲಿ ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಪ್ರಾಚಾರ್ಯ ಬಿ.ಎನ್ ರಾಠೋಡ, ಎ.ಬಿ ಪಾಟೀಲ, ಸಾಹಿತಿ ರಾಘವೇಂದ್ರ ಕುಲಕರ್ಣಿ, ಎ.ಪಿ ಬೇರಡ ವೇದಿಕೆಯಲ್ಲಿದ್ದು. ಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕರು ಬೋದಕ ವರ್ಗ ಉಪಸ್ಥಿತರಿದ್ದರು.