Wednesday, 11th December 2024

ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಮುಖ್ಯವಾಹಿನಿಗೆ ತಂದಿದೆ: ಯಶವಂತರಾಯಗೌಡ ಪಾಟೀಲ

ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೇರ್ಪಡೆ ಮಾಡುವ ಮೂಲಕ ಶೈಕ್ಷಣಿಕ. ಆರ್ಥಿಕ ಹಾಗೂ ಸರಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ತಂದಿರುವುದೆ ಕಾಂಗ್ರೆಸ್ ಇಂತಹ ಮಾತೃಹೃದಯದ ಪಕ್ಷದ ಜೊತೆ ಬಂಜಾರ ಸಮುದಾಯದ ಸದಾ ಇರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತ ರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಹಡಲಸಂಗ ಎಲ್.ಟಿ ನಂ೧ರಲ್ಲಿ ೨೦೨೩ರ ಚುನಾವಣಾ ಪ್ರಚಾರಾರ್ಥ ಸಭೆ ಯಲ್ಲಿ ಮಾತನಾಡಿದ ಅವರು ಬಂಜಾರ ಸಮುದಾಯ ನನಗೆ ಪ್ರತಿಯೊಂದು ಚುನಾವಣೆ ಯಲ್ಲಿ ಸಹಾಯ ಮಾಡಿ ನನಗೆ ಇಷ್ಟೋಂದು ಎತ್ತರಕ್ಕೆ ಬೆಳೆಸಿದ್ದೀರಿ. ಈ ಬಾರಿ ಚುನಾವಣೆ ಮತಕ್ಷೇತ್ರದ ಭವಿಷ್ಯ ಅಡಗಿದೆ. ನಾನು ಅಭಿವೃದ್ದಿ ದಶದಿಕ್ಕುಗಳನ್ನೆ ಬದಲಾವಣೆ ಮಾಡಿ ರುವೆ ಇದಕ್ಕೆ ಕಿಂಚ್ಚಿತ್ತು ಚ್ಯುತಿ ಬರಬಾರದೆಂದರೆ ಮತಷ್ಟು ಪ್ರಗತಿ ಹಾಗೂ ಜಿಲ್ಲೆಯಾಗಿಸಲು ನಿಮ್ಮ ಅಮೂಲ್ಯ ಮತ ನನಗೆ ನೀಡಿ. ಬಂಜಾರ ಸಮುದಾಯಕ್ಕೆ ಎಸ್ಸಿ ಸೇರ್ಪಡೆ ಮಾಡಿದ ಕೆ.ಟಿ ರಾಠೋಡ, ಎಲ್,ಆರ್ ನಾಯಕ ಹಾಗೂ ಅಂದಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸ ಇವರನ್ನು ಹಾಗೂ ಕೇಂದ್ರದಲ್ಲಿ ಎಸ್ಸಿ ಸೆರ್ಪಡೆಗೆ ಶ್ರಮಿಸಿದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂಧಿರಾ ಗಾ0ಧಿಯವರನ್ನು ಬಂಜಾರ ಸಮಾಜ ಸೂರ್ಯಚಂದ್ರ ಇರುವವರೆಗೂ ಮರೆಯಬಾರದು ಯಾರೂ ಸಹಾಯ ಮಾಡಿದ್ದಾರೆ ಸದಾ ಅಂತಹವರ ಪರ ಇರಬೇಕು ಇದು ಮಾನವೀಯ ಧರ್ಮ. ಇಂದು ಬಂಜಾರ ಸಮುದಾಯ ಎಸ್ಸಿ ಪಟ್ಟಿಯಲ್ಲಿ ಇರುವ ದರಿಂದಲೆ ಆಯ್.ಎ.ಎಸ್ ,ಕೆ.ಎ.ಎಸ್, ಆಯ್.ಪಿ.ಎಸ್ ಇತರೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕರ್ನಾಟಕ ಕಾಂಗ್ರೆಸ ಸರಕಾರದ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಬಂಜಾರ ಸಮುದಾಯದ ಧರ್ಮಗುರು ಸೇವಾಲಾಲ್ ಜಯಂತಿ ಸರಕಾರದ ಮಟ್ಟದಲ್ಲಿ ಆಚರಣೆಗೆ ಆದೇಶ ಮಾಡಿದ್ದಾರೆ.

ಇತೀಚಿನ ದಿನಗಳಲ್ಲಿ ಡಬಲ್ ಎಂಜಿನ್ ಸರಕಾರ ಮೀಸಲಾತಿ ಕೊಡುವುದರಲ್ಲಿ ತಪ್ಪು ನಿರ್ಣಯ ಮಾಡುತ್ತಿದ್ದಾರೆ ಇಂತಹ ಅಚಾರ್ತು ಹೇಳಿಕೆಗಳಿಂದ ಜನರಿಗೆ ದಾರಿತಪ್ಪಿಸಬಾರದು. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರ ಪರ ಆಡಳಿತ ಮಾಡದೆ ಅದಾನಿ ,ಅಂಬಾನಿ ಪರ ಚಿಂತನೆ ಮಾಡುತ್ತಿದ್ದಾರೆ, ಗುತ್ತಿಗೆದಾರ ಕೆಂಪಣ್ಣ ೪೦/ ಕಮಿಶೇನ್ ಪಡೆಯುತ್ತಿದ್ದಾರೆ ಎಂದು ಸರಕಾರದ ಮೇಲೆ ಅಪಾದನೆ ಮಾಡಿ ಕೇಂದ್ರ ಪ್ರಧಾನಿಗಳಿಗೆ ಪತ್ರ ಬರೆದರೂ ಕೂಡಾ ಶಿಕ್ಷೆಯಾಗುತ್ತಿಲ್ಲ ಎಕೆ ? ಎಂದು ಶಾಸಕರು ಪ್ರಶ್ನಿಸಿದರು. ರಾಜ್ಯದಲ್ಲಿ ೧೭ ಜನ ಶಾಸಕರನ್ನು ವಾಮ ಮಾರ್ಗದಿಂದ ಆಮಿಷೆ ಒಡ್ಡಿ ಸರಕಾರ ರಚನೆ ಮಾಡಿದ್ದಾರೆ ಇಂತಹ ಭ್ರಷ್ಟ ಸರಕಾರಕ್ಕೆ ತಕ್ಕ ಪಾಠಕಲಿಸಿ ಬರುವ ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ನನಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.

ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಕಾಂತಾ ನಾಯಕ, ಸಂತೋಷಗೌಡ ಪಾಟೀಲ,ಮಾಜಿ ತಾ.ಪಂ ಅಧ್ಯಕ್ಷ ಶೇಖರ ರಾಠೋಡ,ಜೆಟ್ಟೆಪ್ಪ ರವಳಿ, ಜಾವೀದ ಮೋಮಿನ, ಶಶೀಕಾಂತ ನಾಯಕ ಇದ್ದರು.

*

ಕಾಂಗ್ರೆಸ್ ಪಕ್ಷ ನಮ್ಮ ಸಮಾಜಕ್ಕೆ ಎಸ್ಸಿ ಸೆರ್ಪಡೆ ಮಾಡಿದ ಅಂದಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸರನ್ನು ನಮ್ಮ ಸಮಾಜದ ನಾಯಕ ಕೆ.ಟಿ ರಾಠೋಡ ಹಾಗೂ ಎಲ್.ಆರ್ ನಾಯಕ ಇವರನ್ನು ಸ್ಮರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಸದಾ ಬಂಜಾರ ಸಮುದಾಯ ಇರಬೇಕು. ಯಶವಂತರಾಯಗೌಡ ಪಾಟೀಲ ಬಂಜಾರ ಸಮಾಜಕ್ಕೆ ಸಾಕಷ್ಟು ಅನುಧಾನ ನೀಡಿದ್ದಾರೆ. ಮೇ೧೦ ನಡೆಯುವ ಚುನಾವಣೆ ಭವಿಷ್ಯದ ನಿರ್ಮಾಣಕ್ಕೆ ಯಶವಂತರಾಯಗೌಡ ಪಾಟೀಲರಿಗೆ ಮತ ನೀಡಿ ಆಯ್ಕೆ ಮಾಡಿ.

ಕಾಂತಾನಾಯಕ, ಕೆ.ಪಿ.ಸಿ.ಸಿ ಪ್ರಚಾರ ಸಮೀತಿ