Wednesday, 9th October 2024

Bank Holidays: ಅಕ್ಟೋಬರ್ ತಿಂಗಳ ಅರ್ಧ ಭಾಗ ಬ್ಯಾಂಕ್‌ಗಳಿಗೆ ರಜೆ, ಯಾವಾಗ ಓಪನ್‌ ಇರುತ್ತೆ ತಿಳಿದುಕೊಳ್ಳಿ

bank leaves

ಬೆಂಗಳೂರು: ಅಕ್ಟೋಬರ್‌ ತಿಂಗಳಲ್ಲಿ ವಾರದ ರಜೆಗಳು ಹಾಗೂ ಹಲವು ಹಬ್ಬಗಳು ಆಗಮಿಸುವುದರಿಂದ ತಿಂಗಳ ಹೆಚ್ಚು ಕಡಿಮೆ ಅರ್ಧದಷ್ಟು ದಿನಗಳು ರಜಾ (October month bank holidays) ಇರುತ್ತದೆ. ಇನ್ನುಳಿದ ಕರ್ತವ್ಯದ ದಿನಗಳಲ್ಲಿ ನೀವು ನಿಮ್ಮ ಕೆಲಸವನ್ನು ಈಡೇರಿಸಿಕೊಳ್ಳಬೇಕು.

ಭಾರತೀಯರಿಗೆ ಇದೀಗ ಹಬ್ಬಗಳ ಸಮಯ. ಶ್ರಾವಣ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಹಾಗೂ ರಜೆಗಳು ಆರಂಭ ಆಗುತ್ತವೆ. ಹೀಗಾಗಿ ಎಲ್ಲಾ ಕಡೆ ಬರೀ ರಜೆಯದ್ದೇ ಚರ್ಚೆ. ಅದರಲ್ಲೂ ಬ್ಯಾಂಕ್ ನೌಕರರಿಗೆ ಮತ್ತು ಸರ್ಕಾರಿ ನೌಕರರಿಗೆ ಸಾಲು ಸಾಲು ರಜೆಗಳು. 2024ರ ಅಕ್ಟೋಬರ್ ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 15 ದಿನ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ವಾರದ ರಜಾದಿನಗಳು, ಎರಡನೇ ಶನಿವಾರ, ದಸರಾ, ದೀಪಾವಳಿ, ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಗಳ ಹಿನ್ನೆಲೆಯಲ್ಲಿ ಸುಮಾರು 10 ದಿನಗಳ ರಜೆ ಇದೆ. ಹಾಗಾದ್ರೆ ಯಾವೆಲ್ಲಾ ದಿನ ಬ್ಯಾಂಕ್‌ಗಳು ಬಂದ್ ಆಗಲಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಅಕ್ಟೋಬರ್-1: ಜಮ್ಮು & ಕಾಶ್ಮೀರ ವಿಧಾನಸಭಾ ಚುನಾವಣೆ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಇಂದು ಬ್ಯಾಂಕ್‌ಗಳಿಗೆ ರಜೆ ಘೋಷಣೆ.

ಅಕ್ಟೋಬರ್-2: ಮಹಾತ್ಮ ಗಾಂಧಿ ಜಯಂತಿ & ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ.

ಅಕ್ಟೋಬರ್-3: ನವರಾತ್ರಿ ಹಿನ್ನೆಲೆಯಲ್ಲಿ ರಾಜಸ್ಥಾನ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ.

ಅಕ್ಟೋಬರ್-6: ಭಾನುವಾರ ಆಗಿರುವ ಹಿನ್ನೆಲೆ ಅಕ್ಟೋಬರ್ 6 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.

ಅಕ್ಟೋಬರ್-10: ಮಹಾ ಸಪ್ತಮಿ ಹಿನ್ನೆಲೆಯಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.

ಅಕ್ಟೋಬರ್-11: ದಸರಾ & ಆಯುಧ ಪೂಜೆ ಸೇರಿದಂತೆ ದುರ್ಗಾಷ್ಟಮಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರುತ್ತದೆ.

ಅಕ್ಟೋಬರ್-12: ಎರಡನೇ ಶನಿವಾರ ಹಿನ್ನೆಲೆ, ಅಕ್ಟೋಬರ್ 6ಕ್ಕೆ ಬ್ಯಾಂಕ್‌ಗೆ ಮಾಮೂಲಿ ರಜೆ ಇರಲಿದೆ.

ಅಕ್ಟೋಬರ್-13: ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 13ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.

ಅಕ್ಟೋಬರ್-14: ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ.

ಅಕ್ಟೋಬರ್-16: ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ & ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳ ರಜೆ.

ಅಕ್ಟೋಬರ್-17: ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕತಿ ಬಿಹು ಹಿನ್ನೆಲೆಯಲ್ಲಿ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.

ಅಕ್ಟೋಬರ್-20: ಭಾನುವಾರ ಹಿನ್ನೆಲೆ ಅಕ್ಟೋಬರ್ 20 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ.

ಅಕ್ಟೋಬರ್-26: ಜಮ್ಮು ಮತ್ತು ಕಾಶ್ಮೀರ ಭಾರತ ದೇಶದಲ್ಲಿ ವಿಲೀನವಾದ ದಿನದ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದಲ್ಲಿ ಇರುವ ಬ್ಯಾಂಕುಗಳು ಬಂದ್ ಆಗಲಿವೆ.

ಅಕ್ಟೋಬರ್-27: ಭಾನುವಾರ ಹಿನ್ನೆಲೆ ಅಕ್ಟೋಬರ್ 27 ರಂದು ಬ್ಯಾಂಕ್‌ಗಳಿಗೆ ರಜೆ ಇದೆ.

ಅಕ್ಟೋಬರ್-31: ದೀಪಾವಳಿ & ನರಕ ಚತುರ್ದಶಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ಬಂದ್ ಆಗಲಿವೆ.

ಇದನ್ನೂ ಓದಿ: Dasara holidays: ರಾಜ್ಯದ ಶಾಲೆಗಳಿಗೆ ದಸರಾ ರಜೆ ಘೋಷಣೆ; ಈ ಬಾರಿ ಎಷ್ಟು ದಿನ?