ಶ್ರೀಶೈಲ ಪೀಠದ ಡಾ, ಚನ್ನಸಿದ್ದರಾಮ ಸ್ವಾಮೀಜಿ ಹೇಳಿಕೆ
ಬಸವನಬಾಗೇವಾಡಿ: ಸಮಾನತೆ, ಜಾತಿ, ನಿರ್ಮೂಲನೆಗಾಗಿ ಹೋರಾಡಿದ ಅಪರೂಪದ ವ್ಯಕ್ತಿ ವಿಶ್ವಗುರು ಬಸವಣ್ಣನವರು, ಅಂತಹ ಮಹಾಪುರುಷರ ಸಂದೇಶವನ್ನು ಇಡಿ ಸಮಾಜಕ್ಕೆ ಮುಟ್ಟಿಸುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಬಸವಜನ್ಮ ಸ್ಥಳ ಬಸವನಬಾಗೇವಾಡಿ ಮಾರ್ಗವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಡಾ, ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಮಂಗಳವಾರ ಶ್ರೀಶೈಲ ಪೀಠದ ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗಳ ದ್ವಾದಶ ಪೀಠಾರೋಹಣ ಸುವರ್ಣ ಮಹೋತ್ಸವ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಧರ್ಮ ಹಾಗೂ ಪರಿಸರ ರಕ್ಷಣೆಗಾಗಿ ಹಮ್ಮಿಕೊಂಡ ಪಾದಯಾತ್ರೆಯ ಕುರಿತು ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಮಾತನಾಡಿ ದ ಅವರು ಪಂಚಪೀಠಗಳ- ಬಸವಣ್ಣನವರ ನಡುವೆ ಕೆಲವರು ಸಮಾಜದಲ್ಲಿ ಕಂದಕ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ.
ನಾವಂತೂ ಯಾವುದೇ ಕಾಲಕ್ಕೂ ಬಸವಣ್ಣನವರನ್ನ ಬಿಟ್ಟು ಕೊಟ್ಟಿಲ್ಲ, ನಮ್ಮ ಪೀಠದ ವಾಗೇಶ ಜಗದ್ಗುರುಗಳು ಬಸವಣ್ಣ ನವರು ಕುರಿತು ಕೃತಿ ಬರೆಯುವ ಜೊತೆಗೆ ಶ್ರೀಶೈಲ ಅಥಣಿಯ ಶಿವಯೋಗಿಗಳ ಸುಪ್ರಭಾತ ರಚಿಸಿದ್ದಾರೆ. ಗುರು-ವಿರಕ್ತ ಪರಂಪರೆ ಗಳು ಎರಡು ಒಂದೇ ಆಗಿವೆ ಸಮಾಜದ ಅಭಿವೃದ್ದಿ ಮಾಡುವ ಉದ್ದೇಶ ಹೊಂದಿವೆ ಎಂದರು.
ಭಕ್ತರು ಕಷ್ಟದ ಪಾದಯಾತ್ರೆ ಮಾಡುವುದನ್ನು ನಾವು ಕಳೆದ 12ವರ್ಷಗಳಿಂದ ನೋಡಿದ್ದೆವೆ, ಈ ಪಾದಯಾತ್ರೆಯಲ್ಲಿ ಬರುವ ಭಕ್ತರನ್ನು ಮಲ್ಲಯ್ಯ ಕಾಪಾಡುತ್ತಾನೆ ಪಾದಯಾತ್ರೆಯಲ್ಲಿ ಅಲೌಕಿಕ ಶಕ್ತಿ, ತೃಪ್ತಿ, ಇದೆ, ಕೊವೀಡ್-19 ರೋಗದ ಭೀತಿ ಕಡಿಮೆ ಆದ ನಂತರ ಶ್ರೀಶೈಲ ಕ್ಷೇತ್ರಕ್ಕೆ 18 ಲಕ್ಷ ಜನರು ಭೇಟಿ ಕೊಟ್ಟಿದ್ದಾರೆ, ಇದರಲ್ಲಿ 10 ಲಕ್ಷ ಜನು ಪಾದಯಾತ್ರೆ ಮೂಲಕವೇ ಕ್ಷೇತ್ರಕ್ಕೆ ಬಂದಿರುವುದು ವಿಶೇಷವಾಗಿದೆ ಎಂದರು.
ಸಮಾಜದಲ್ಲಿ ಧರ್ಮ ಜಾಗೃತಿ ಯುವಜನರನ್ನು ದುಷ್ಚಟದಿಂದ ದೂರ ಮಾಡುವುದು ಪರಿಸರ ಸಂರಕ್ಷಣೆ ಮಾಡುವದು ಸಾವ ಯವ ಕೃಷಿ ಮಾಡುವದು ಸೇರಿದಂತೆ ಹಲವಾರು ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾದ ಯಾತ್ರೆ ಹಮ್ಮಿಕೊಂಡಿದ್ದೆವೆ. ಈ ಪಾದಯಾತ್ರೆಯು ಇತಿಹಾಸ ಪುಟದಲ್ಲಿ ದಾಖಲಾಗಿದೆ ಎಂದರು.
ಶ್ರೀಶೈಲ ಪೀಠವು ಶಕ್ತಿ ಪೀಠವಾಗಿದೆ, ಇದೊಂದು ತ್ರೀವೆಣಿ ಸಂಗಮವಾಗಿದೆ. ನಮ್ಮ ಪಾದಯಾತ್ರೆಯಲ್ಲಿ ಶ್ರೀಶೈಲ ಪೀಠಕ್ಕೆ ಸಂಭಂದಿತ ಮಹಾತ್ಮರ ಪ್ರತಿಮೆಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಹೇಮರಡ್ಡಿ ಮಲ್ಲಮ್ಮ, ಅಲ್ಲಮ್ಮ ಪ್ರಭು, ದೇವರ ದಾಸಿಮಯ್ಯಾ, ಛತ್ರಪತಿ ಶಿವಾಜಿಮಹಾರಾಜ ಸೇರಿದಂತೆ ಅನೇಕ ಮಹಾಪುರುಷರ ಸ್ತಬ್ಧ ಚಿತ್ರಗಳು ಪಾದಯಾತ್ರೆಯಲ್ಲಿರುವುದು ವಿಶೇಷವಾಗಿದೆ ಎಂದರು.
ಶ್ರೀಶೈಲದ ಗತವೈಭವವನ್ನು ಜನರಿಗೆ ಮುಟ್ಟಿಸುವುದು ಉದ್ದೇಶ ನಮ್ಮದು, ನಮ್ಮ ನಿರೀಕ್ಷೆ ಮೀರಿ ಜನರು ಪಾದಯಾತ್ರೆಯಲ್ಲಿ ಬಾಗವಹಿಸುತ್ತಿರುವುದು ಸಂತಸ ತಂದಿದೆ, ಧರ್ಮ ಜಾಗೃತಿ ವಿಷಯ ಬಂದಾಗ ಇದೊಂದು ಜಾತ್ಯಾತೀತ ಭಾವೈಕ್ಯತೆಯ ಪಾದಯಾತ್ರೆಯಾಗಿದೆ ಇದೊಂದು ಐತಿಹಾಸಿಕ ಪಾದಯಾತ್ರೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದರು.
ಪಾದಯಾತ್ರೆ ಸ್ವಾಗತ ಸಮೀತಿ ಕಾಯರ್ಾಧ್ಯಕ್ಷ ಮುದ್ದೇಬಿಹಾಳದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ ದಾಸೋಹದ ಪರಿಕಲ್ಪನೆಯನ್ನು ಅಣ್ಣಬಸವಣ್ಣನವರು ಜಗತ್ತಿಗೆ ಸಾರಿದರು. ಇಂದು ಅಣ್ಣನ ಜನ್ಮಸ್ಥಳದಲ್ಲಿ ಮಹಿಳೆಯರು ರೋಟ್ಟಿ ಬುತ್ತಿ ತೆಲೆ ಮೇಲೆ ಹೊತ್ತು ಪಾದಯಾತ್ರೆಯ ಭಕ್ತರುಗೆ ನೀಡುವ ಮೂಲಕ ಮತ್ತೆ ದಾಸೋಹದ ಪರಿಕ್ಪನೆಯನ್ನು ಪುನರ ಆರಂಭವಾಗಿದೆ. ಎಂದು ಹೇಳಿದರು.