ಹರಪನಹಳ್ಳಿ: ನವಜ್ಯೋತಿ ಸಂಸ್ಥೆ ನಮ್ಮೂರ ಹಬ್ಬದ ಹೆಸರಿನಲ್ಲಿ ಸರ್ವ ಧರ್ಮ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ಇದೊಂದು ಸುಂದರವಾದ ಪರಿಕಲ್ಪನೆಯಾಗಿದೆ ಈ ದೇಶದಲ್ಲಿ ಮಹಾನ್ ನಾಯಕರು ಹುಟ್ಟಿ ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ ಎಂದು ಅಮೇರಿಕಾ ನಿವಾಸಿ ಬಸವರಾಜ ಬಣಕಾರ್ ಅಭಿಪ್ರಾಯಪಟ್ಟರು.
ಪಟ್ಟಣದ ನವಜ್ಯೋತಿ ಸಂಸ್ಥೆ ಹಳೇಬಸ್ ನಿಲ್ದಾಣದಲ್ಲಿ ನಡೆಸುತ್ತಿರುವ ನಮ್ಮೂರ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಎಲ್ಲಾ ಧರ್ಮದವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣ ವಾಗಿದೆ ಇಡಿ ವಿಶ್ವವೇ ಒಂದು ಕುಟುಂಬ ನಮ್ಮ ದೇಶ ಭವ್ಯ ಭಾರತ ದೇಶ, ಜನ್ಮ ಭೂಮಿ ಭಾರತವದರೆ ಕರ್ಮ ಭೂಮಿ ಅಮೇರಿಕಾವಾಗಿದೆ ಆದರೂ ಸಹ ನನ್ನ ದೇಶಾಭಿಮಾನ ಮರೆಯುವಂತದ್ದಲ್ಲ. ನವಜ್ಯೋತಿ ಸಂಸ್ಥೆ ಮಾಡು ವಂತಹ ಕಾರ್ಯ ಸಮಾಜಮುಖಿಯಾದುದು ಈ ಸಂಸ್ಥೆಗೆ ನನ್ನ ತಾಯಿ ಶಾರದಮ್ಮನ ಹೆಸರಿನಲ್ಲಿ ಪ್ರತಿ ವರ್ಷ ೨೫ ಸಾವಿರ ದೇಣಿಗೆ ನೀಡುತ್ತೇನೆ ಎಂದರು.
ಸಮತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಟಿ. ಸುಭಾಸ್ ಚಂದ್ರ ದೇಶದ ಮಹಾನ್ ನಾಯಕರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಉದ್ಘಾಟಿಸಿ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ದಂಪತಿಗಳ ಸಾಮಾಜಿಕ ಸೇವೆ ಮೆಚ್ಚು ವಂತದ್ದು ಸಾಮರಸ್ಯ ಸೌಹಾರ್ದತೆ ಮೂಡಿಸುವ ಕಾರ್ಯಕ್ರಮ ಮಾಡಿ ಎಲ್ಲಾ ಮನಸುಗಳನ್ನು ಒಗ್ಗುಡಿಸುತ್ತಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಜೆ.ಎಂ. ಸರ್ಕಾವಸ್ ಮಾತನಾಡಿ ವಿರಸದಲ್ಲಿ ಮರಣವಿದೆ ಹೇಗೆ ನದಿಗಳು ಬೇರೆ ಬೇರೆಯಾಗಿ ಹುಟ್ಟಿ ಹರಿದು ಬಂದರೂ ಸಾಗರದಲ್ಲಿ ಒಟ್ಟಾಗಿ ಸಮ್ಮಿಲನಗೊಳ್ಳುತ್ತವೆ ಹಾಗೆ ನಮ್ಮ ಭರತ ಭೂಮಿ ಯಲ್ಲಿ ನಮ್ಮ ಧರ್ಮಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲ ಒಂದೇ ಭಾರತೀಯರು, ನಮಗೆ ದೇಶ ಮೊದಲು ಧರ್ಮ ನಂತರ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಅAಜಿನಪ್ಪ ಮಾತನಾಡಿ ನೀರಿಗೆ ಜಾತಿ ಇಲ್ಲ, ಆದರೆ ಇವತ್ತು ಜಾತಿ, ಮತ ಧರ್ಮಗಳಿಂದ ದಿಕ್ಕು ತಪ್ಪುತ್ತಿರುವ ಸಮಾಜ ವನ್ನು ನಾವೆಲ್ಲರೂ ಒಂದಾಗಿ ಒಗ್ಗೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಡಿಹಳ್ಳಿ ಭೀಮಪ್ಪ ಅಂಬೇಡ್ಕರ್, ಬುದ್ದ, ಬಸವ, ಮಹಾವೀರ, ಸ್ವಾಮಿ ವಿವೇಕಾನಂದ, ಮಹಮ್ಮದ್ ಪೈಗಂಬರ್ ಹುಟ್ಟಿದ ದೇಶ ನಮ್ಮದು ಇಲ್ಲಿ ಹಿಂದುಗಳೇ ಇರಬೇಕೆಂಬುದು ತಪ್ಪು. ಸಂವಿಧಾನ ನಮ್ಮ ದೇಶದ ಮಹಾನ್ U್ಪ್ರಂಥ ಇದನ್ನು ಮೀರಿ ನಡೆದರೆ ಅಪಚಾರವೆಸಗಿದಂತೆ ಎಂದರು.
ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಸೇವಕ ಆರ್ ಲೋಕೇಶ್, ಜೈನ ಸಮಾಜದ ಅಧ್ಯಕ್ಷ ಹೆಚ್.ಪದ್ಮನಾಭ, ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಸಪ್ನಮಲ್ಲಿಕಾರ್ಜುನ ವಿವಿಧ ಕ್ಷೇತ್ರದ ಸಾಧಕರಿಗೆ ರಂಗಾಯಣದ ಕಲಾವಿದರಾದ ಟಿ.ಶ್ಯಾಮಲ ಮತ್ತು ಅರುಣ್ ಕುಮಾರ್ ಮ್ಯಾದಾರ ಇವರಿಗೆ ಮತ್ತು ವಿವಿಧ ವೃತ್ತಿ ಕಾರ್ಮಿಕರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಎಸ್.ಮಕಬುಲ್ ಭಾಷ ಕಾರ್ಯ ಕ್ರಮ ನಿರ್ವಹಿಸಿದರು.
ಲಿಕ್ವಿಡ್ ಕಲಾ ತಂಡದ ಚನ್ನವೀರಸ್ವಾಮಿ, ಕೆ.ಶಿವನಾಗ, ಹೆಚ್.ಮಂಜುನಾಥ ಇತ್ಯಾದಿ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಸಿ ಕೊಡಲಾಯಿತು.