ಇಂಡಿ: ಜೆ.ಡಿ.ಎಸ್ ತಾಲೂಕಾ ಅಧ್ಯಕ್ಷ ಬಿ.ಡಿ ಪಾಟೀಲ ಮುಂಬರುವ ೨೦೨೩ಕ್ಕೆ ಇಂಡಿ ಮತಕ್ಷೇತ್ರ ಶಾಸಕರಾಗಬೇಕು ಎಂದು ಹರಕೆ ಹೊತ್ತು ಇಂಡಿಯಿ0ದ ಸ್ವಾಮಿ ಅಯ್ಯಪ್ಪ ದೇವಸ್ಥಾನ ಶಬರಿಮಲೆವರೆಗೆ ತಡವಲಗಾ ಗ್ರಾಮದ ಭೀಮರಾಯ ಕಟ್ಟಿ ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆ ಕೈಗೊಂಡ ಭೀಮರಾಯ ಅವರನ್ನು ಬಿ.ಡಿ ಪಾಟೀಲ ನೂರಾರು ಕಾರ್ಯಕರ್ತರು ಇಂದು ಶಬರಿಮಲೆ ಪುಣ್ಯಕ್ಷೇತ್ರಕ್ಕೆ ಬೀಳ್ಕೋಟ್ಟರು.
ಈ ಸಂಧರ್ಬದಲ್ಲಿ ಬಿ.ಡಿ ಪಾಟೀಲ ಮಾತನಾಡಿ ನಾನು ಇಂಡಿ ಮತಕ್ಷೇತ್ರದ ಶಾಸಕ ನಾಗಬೇಕು ಎಂದು ಸಾವಿರದಾ ೪ ನೂರು ಕಿ,ಮೀ ದೂರ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆಮೂಲಕ ನನ್ನಗೆಲುವಿಗೆ ಸಂಕಲ್ಪ ಮಾಡಿ ತೇರಳುತ್ತಿರುವುದು ಸಂತಸ ತಂದಿದೆ.ನಾನು ಒಬ್ಬ ಬಡ ವ್ಯಕ್ತಿ ನನಗೆ ಕಾಣದೆ ಇರುವ ಅನೇಕ ಕೈಗಳು ಸಹಾಯ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ನಿಮ್ಮ ಮನೆಯ ಮಗನಾಗಿ, ಒಬ್ಬ ಸೇವಕನಾಗಿ ಕೂಲಿ ಆಳಾಗಿ ದುಡಿದು ನಿಮ್ಮೇಲರ ಋಣ ತೀರಿಸುತ್ತೇನೆ ಎಂದರು.
ಭೀಮರಾಯಕಟ್ಟಿ ಮಾತನಾಡಿ ರಾಯಲ್‌ಸ್ವಾಮಿ ,ಗುರುಸ್ವಾಮಿ,ಕುಪೇಂದ್ರ ಸ್ವಾಮಿ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಅಯುಬ ನಾಟೀಕಾರ.ಸಿದ್ದಪ್ಪ ಗುನ್ನಾಪೂರ, ರಾಜು ಮುಲ್ಲಾ, ನೀಯಾಝ ಅಗರಖೇಡ, ರಮೇಶ ರಾಠೋಡ, ಫೈಜಲ್ ಮುಲ್ಲಾ, ಸದ್ದಾಂ ಕೋಟ್ನಳ, ಶ್ರೀಶೈಲ ಪೂಜಾರಿ,ಶಾಂತಯ್ಯಾ ಪತ್ರಿಮಠ, ಮಂಜು ಬಡಿಗೇರ ಇತರರು ಶುಭ ಹಾರೈಸಿದರು.