ಇಂಡಿ: ಸೋಲು ಗೆಲುವು ಒಂದೇ ನಾಣ್ಯದ ಮುಖಗಳಿದಂತೆ ಸಮಾನವಾಗಿ ಸ್ವೀಕರಿಸುವ ಗುಣ ನನ್ನಲ್ಲಿದೆ.
ಜೀವನದಲ್ಲಿ ಯಾವತ್ತೂ ಹತಾಶೇಯ ಆಗಿಲ್ಲ ಆಗುವುದು ಇಲ್ಲನನ್ನ ಬದುಕೆ ಬಡವರ ದೀನ ದುರ್ಬಲರ ನೊಂದವರ ಪರ ಸದಾ ಹೋರಾಟ ಮಾಡುತ್ತೇನೆ. ಜಗಳ ಹಚ್ಚಿ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವುದು ಮನುಷ್ಯತ್ವ ಅನ್ನುವುದಿಲ್ಲ ವಿನಾಕಾರಣ ನನಗೆ ತಳಕು ಹಾಕಿಕೊಂಡಿದ್ದಾರೆ ಇದರಲ್ಲಿ ನನ್ನ ಪಾತ್ರವಿದ್ದರೆ ದೇವರೆ ನೋಡಿ ಕೊಳ್ಳಲಿ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಡಿ ಪಾಟೀಲ ಹೇಳಿದರು.
ತಾಲೂಕಿನ ಹಂಜಗಿ ಗ್ರಾಮದ ಹಾಲುಮತ ಸಮಾಜದ ದಾಯಾದಿಗಳ ಮಧ್ಯ ವೈಯಕ್ತಿಕ ಜಗಳ ನಡೆದು ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲಾ ಗಿದ್ದಾರೆ ,ಮೇ೨೪ ಜೆ.ಡಿ.ಎಸ್ ಆತ್ಮಾವಲೋಕನ ಸಭೆಯಲ್ಲಿ ನಾನು ಭಾಗಿ ಯಾಗಿದ್ದೇನೆ ಈ ಜಗಳಕ್ಕೆ ಸಂಬದಿಸಿದ0ತೆ ನನಗೆ ಕಿಂಚ್ಚಿತ್ತು ಗೊತ್ತಿಲ್ಲ ವಿನಾ ಕಾರಣ ಈ ಬಡ ಬಿ.ಡಿ ಪಾಟೀಲನಿಗೆ ದ್ವೇಷ ,ಅಸೋಯ ಸಾಧಿಸುತ್ತಿರುವುದು ಯಾವ ನ್ಯಾಯ. ಪೊಲೀಸ್ ಇಲಾಖೆಯ ಅಧಿಕಾರಿಗಳು ಇದರ ಕುರಿತು ಸಮಗ್ರ ತನಿಖೆಮಾಡಿ ನನ್ನ ಪಾತ್ರ ಇದ್ದರೆ ಯಾವ ಶಿಕ್ಷೆ ನೀಡಿದರೂ ತಯಾರಿದ್ದೇನೆ. ಇಂದು ದಾಯಾದಿಗಳ ಜನಗಳದಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿರುವುದರಿAದ ನನಗೆ ತೇಜೋವಧೆ ಮಾಡುವ ಹುನ್ನಾರವಾಗಿದೆ. ಈ ವಿಚಾರವಾಗಿ ಸಾರ್ವಜನಿಕವಾಗಿ ಸಾಕಷ್ಟು ನೋವನ್ನುಂಟು ಮಾಡಿದೆ ನನ್ನ ಮೇಲೆ ಕೆಸು ಹಾಕಿದವರಿಗೆ ಮಾನನಷ್ಠ ಮೋಕದ್ದಮೆ ದಾಖಲಿಸುತ್ತೇನೆ ಎಂದರು.
ಜೆಡಿಎಸ್ ಮುಖಂಡರಾದ ಮುತ್ತಪ್ಪ ಪೂತೆ, ಸಿದ್ದಪ್ಪ ಗುನ್ನಾಪೂರ, ಮರೇಪ್ಪ ಗಿರಣಿವಡ್ಡರ್, ಸಿದ್ದು ಡಂಗಾ, ನಿಯಾಝ ಅಗರಖೇಡ, ಇರ್ಫಾನ ಅಗರಖೆಡ, ದುಂಡು ಬಿರಾದಾರ,ಭೀಮಣ್ಣಾ ಕೋಳಿ, ಗೂಪಾಲ ಸುರಪೂರ, ಶ್ರೀಶೈಲಗೌಡ ಪಾಟೀಲ, ರಾಜು ಬನಸೋಡೆ, ರಫೀಕ ಸೋಡೇವಾಲೆ, ಮಳಗು ಪೂಜಾರಿ,ವಿಠ್ಠಲ ಹಳ್ಳಿ, ಮಹಿಬೂಬ ಬೇವನೂರ, ಎಚ್.ಜಿ ಹಂಜಗಿ, ಉಮೇಶ ಹಲಸಂಗಿ, ಚಂದ್ರಯ್ಯಾ ಮಠಪತಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.