Saturday, 5th October 2024

ಇಂಡಿ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ

ಇಂಡಿ : ಇಂಡಿಯಲ್ಲಿ ಹಮ್ಮಿಕೊಂಡ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಮುಸ್ಲೀಮ ಸಮುದಾಯದವರು ಸೇರಿ ಎಲ್ಲ ಸಮುದಾಯ ದವರು ಹೂವನ್ನು ಸುರಿವಿ,ಅಡ್ಡಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆಯುವುದು ನೋಡಿದರೆ ಇಂಡಿ ಸರ್ವ ಧರ್ಮ ಸಮನ್ವಯತೆ ಸಾರಿದ ಪುಣ್ಯಸ್ಥಳ. ಈ ಪುಣ್ಯಭೂಮಿಗೆ ಶ್ರೀ ಶಾಂತೇಶ್ವರ ಹಾಗೂ ತಪೋರತ್ನ ಯೋಗಿರಾಜೇಂದ್ರ ಪೂಜ್ಯರ ಆಶಿರ್ವಾದ ಇದೆ. ಹೀಗಾಗಿ ಇಂಡಿ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ. ಸಂಸ್ಕಾರವ0ತ ಪ್ರದೇಶವಾಗಿದೆ ಎಂದು ಶ್ರೀಮದ್ ಕಾಶಿ ಜ್ಞಾನಸಿಂಹಾಸನಾದೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯಶಿವಾ ಚಾರ್ಯರು ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿ ಶ್ರೀ ಶಾಂತೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ದೇವರ ವ ಹಿರೇಇಂಡಿ ಶ್ರೀ ಹನುಮಂತ ದೇವರ ಟ್ರಸ್ಟ ಕಮಿಟಿ ಹಾಗೂ ಶ್ರೀ ಶಾಂತೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಮ್ಮಿಕೊಂಡ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಾನು ಜನ್ಮತಾಳಿದ ಗ್ರಾಮದಲ್ಲಿ ಹಮ್ಮಿಕೊಂಡ ಅದ್ದೂರಿ ಅಡ್ಡಪಲ್ಲಕ್ಕಿ ಉತ್ಸವಕ್ಕಿಂತ ಇಂಡಿಯಲ್ಲಿ ಹಮ್ಮಿಕೊಂಡ ಅಡ್ಡಪಲ್ಲಕ್ಕಿ ಉತ್ಸವ ಬಹು ವಿಜ್ರಂಭಣೆಯಿ0ದ ನಡೆದಿರು ವುದು. ಸುಮಾರು ೨೫ ವರ್ಷಗಳ ಹಿಂದೆ ಇಂಡಿಯಲ್ಲಿ ಹಮ್ಮಿಕೊಂಡ ಪಂಚಪೀಠಗಳ ೫ ಜನ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಂದು ಅಂದು ಪೂಜ್ಯರು ಹಚ್ಚಿದ ದೀಪ ಇಂದಿನವರೆಗೂ ಬೆಳಗುತ್ತಿರುವುದರಿಂದ ಇಂಡಿಯಲ್ಲಿ ಸಂಸ್ಕಾರಯುತ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ ಎಂದು ಹೇಳಿದ ಶ್ರೀಗಳು,ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಹಿಸಿದ ನವದಂಪತಿಗಳು ಪುಣ್ಯವಂತರು.

ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಡಿನ ಶರಣರು,ಜಗದ್ಗುರುಗಳು,ಎಂಪಿ,ಶಾಸಕರು,ಸಾವಿರಾರು ತಾಯಂದಿರರು, ಹಿರಿಯರು ಭಾಗವಹಿಸಿ ಆಶಿರ್ವಾದ ಮಾಡುತ್ತಿರುವುದರಿಂದ ಇದು ಶ್ರೀಮಂತರ ಮದುವೆ, ಭಾಗ್ಯವಂತರ ಮದುವೆ ಎಂದು ಹೇಳಿದರು.

ಹಿರಿಯ ತಾಯಂದಿರರು ನಿಮ್ಮ ಮನೆಗೆ ಬರುವ ಸೋಸೆಯನ್ನು ನಿಮ್ಮ ಮನೆಯ ಮಗಳೆಂದು ಸ್ವೀಕರಿಸಿ,ಪ್ರೇಮದಿಂದ ನೋಡ ಬೇಕು. ಮಗಳು ತಪ್ಪು ಮಾಡಿದಾಗ ತಿದ್ದುವ ಕೆಲಸ ಹೇಗೆ ಮಾಡುತ್ತಿರೊ ಹಾಗೆಯೇ ಸೋಸೆಯಾದವಳು ಚಿಕ್ಕವಳಾಗಿ ನಿಮ್ಮ ಮೆನೆಗೆ ಬಂದಾಗ ಅವಳ ತಪ್ಪನ್ನು ಮನ್ನಿಸಿ,ತಪ್ಪನ್ನು ಮುಚ್ಚಿಕೊಳ್ಳುವ ಕೆಲಸ ಮಾಡಬೇಕು.

ಸೋಸೆಯಾದವಳು ತಮ್ಮ ಮನೆಯನ್ನು ಸಂಬ0ಧವನ್ನು ಬಿಟ್ಟು ನಿಮ್ಮ ಮನೆಯನ್ನು ಬೆಳಗಲು ಬಂದಿರುತ್ತಾಳೆ ಎಂದು ಹೇಳಿದ ಶ್ರೀಗಳು,ಸೋಸೆಯಾದವಳ ಮೇಲೆಯೂ ಬಹಳ ಜವಾಬ್ದಾರಿ ಇದೆ. ಅತ್ತೆ ಅನ್ನುವ ಭಾವನೆಯನ್ನು ಬಿಟ್ಟು,ತಾಯಿ ಎಂಬ ಭಾವನೆ ಯಿಂದ ಬದುಕಿದರೆ ಇಬ್ಬರ ಮಧ್ಯ ಪ್ರೀತಿ ಬೆಳೆಯುತ್ತದೆ.ಹುಟ್ಟಿದ ಮನೆ, ಗಂಡನ ಮನೆ ಎರಡು ಮೆನೆಗಳ ಜವಾಬ್ದಾರಿ ಹೊತ್ತು ಕೊಂಡು ಎರಡು ಮನೆಗಳ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ಜನರಲ್ಲಿ ಸಂಸ್ಕಾರ ಬೆಳೆಯಲು ಮಠಗಳು ಕೇಂದ್ರ ಬಿಂದುಗಳು.ಮಠಗಳಿAದ ಶಾಂತಿ,ನೆಮ್ಮದಿ ಸಿಗುತ್ತದೆ.ಹಿಂಥ ಸಂಸ್ಕಾರವನ್ನು ಶ್ರೀ ಶಾಂತೇಶ್ವರ ಹಾಗೂ ತಫೊರತ್ನ ಯೋಗಿರಾಜೇಂದ್ರ ಪೂಜ್ಯರ ಆಶಿರ್ವಾದ ಇಂಡಿ ಭಾಗದ ಜನರ ಮೇಲೆ ಬಿದ್ದಿದೆ. ಹೀಗಾಗಿ ಇಂಡಿ ಜನರು ಸಂಸ್ಕಾರವ0ತರು ಎಂದು ಹೇಳಿದರು.

ಇದಕ್ಕೂ ಮುಂಚೆ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಶಿವಾಜಿ ವೃತ್ತದಿಂದ ಮಹಾವೀರ, ಅಂಬೇಡ್ಕರ, ಬಸವೇಶ್ವರ, ದಿ.ದಾದಾ ಗೌಡ ಪಾಟೀಲ ವೃತ್ತಗಳ ಮೂಲಕ ೨ ಸಾವಿರ ಸುಮಂಗಲೆಯರ ಕುಂಭ ಮೆರವಣಿಗೆಯೊಂದಿಗೆ ಕಾಶಿ ಪೀಠದ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.ಶ್ರೀ ಶಾಂತೇಶ್ವರ ದೇವರ ಭಾವಚಿತ್ರವನ್ನು ಆನೆಯ ಮೇಲೆ ಮೆರವಣಿಗೆ ಮಾಡಲಾಯಿತು.ಕುದುರೆ ಹಾಗೂ ಲಂಬಾಣಿ ನೃತ್ಯ ಮೆರವಣಿಗೆಯಲ್ಲಿ ವಿಜ್ರಂಭಣೆ ಯಿ0ದ ಜರುಗಿತು. ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೧೦ ಜೋಡಿ ನವದಂಪತಿಗಳು ನವಜೀವನಕ್ಕೆ ಕಾಲಿಟ್ಟರು.

ಅಭಿನವ ಮುರುಘೇಂದ್ರ ಶ್ರೀ,ಅಭಿನವ ಪುಂಡಲಿAಗ ಶ್ರೀ,ಅಭಿನವ ಶಿವಲಿಂಗೇಶ್ವರ ಶ್ರೀ,ವಿರೂಪಾಕ್ಷಯ್ಯ ಹಿರೇಮಠ,ರೇಣುಕಾ ಶ್ರೀ,ವೀರ ಶಿವಲಿಂಗೇಶ್ವರ ಶ್ರೀ,ಶಿವಾನಂದ ಶ್ರೀ,ಶಾಂತಯ್ಯ ಹಿರೇಮಠ,ಚನ್ನಮಲ್ಲಿಕಾರ್ಜುನ ಶ್ರೀ,ರಾಚೋಟೇಶ್ವರ ಶ್ರೀಗಳು, ಮಡಿವಾಳಯ್ಯ ಶಾಸ್ತಿç ಸಾನಿಧ್ಯ ವಹಿಸಿದ್ದರು.ಶಾಂತೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸದ ರಮೇಶ ಜಿಗಜಿಣಗಿ,ಶಾಸಕ ಯಶವಂತರಾಯಗೌಡ ಪಾಟೀಲ,ಪ್ರಭಾಕರ ಬಗಲಿ,ಶ್ರೀಶೈಲಗೌಡ ಬಿರಾದಾರ,ಶಂಕರಗೌಡ ಪಾಟೀಲ,ಭೀಮನಗೌಡ ಪಾಟೀಲ,ಶ್ರೀಮಂತ ಇಂಡಿ,ನೀಲಕAಠಗೌಡ ಪಾಟೀಲ,ಸಿಡಿಪಿಒ ಸುಮಂಗಲಾ ಹಿರೇಮನಿ,ಪುರಸಭೆ ಮುಖ್ಯಾಽಕಾರಿ ಲಕ್ಷಿ÷್ಮÃಶ,ವಿರಾಜ ಪಾಟೀಲ,ಭೀಮು ರಾಠೋಡ,ಯಲ್ಲಪ್ಪ ಹದರಿ ವೇದಿಕೆ ಮೇಲಿದ್ದರು.

ಭೀಮರಾಯಗೌಡ ಮದರಖಂಡಿ,ಅನೀಲಗೌಡ ಬಿರಾದಾರ,ದೇವೆಂದ್ರ ಕುಂಬಾರ,ಶಾ0ತು ಕಂಬಾರ,ಮಹೇಶ ಹೂಗಾರ, ಶಂಕರ ಗೌಡ ಪಾಟೀಲ, ಧರ್ಮು ಮದರಖಂಡಿ,ಸುನೀಲಗೌಡ ಬಿರಾದಾರ,ಭೀಮು ಪ್ರಚಂಡಿ,ರಾಚು ಬಡಿಗೇರ, ಸೋಮು ನಿಂಬರಗಿಮಠ, ಶ್ರೀಕಾಂತ ಕುಡಿಗನೂರ,ಯಮುನಾಜಿ ಸಾಳುಂಕೆ, ಅಪ್ಪು ಪವಾರ, ಅಶೋಕಗೌಡ ಬಿರಾದಾರ, ಅಶೋಕ ಅಕಲಾದಿ, ಪ್ರವೀಣ ಮಠ, ಸಂಜು ದಶವಂತ, ಶ್ರೀಶೈಲ ಲಾಳಸಂಗಿ, ದಯಾನ0ದ ಮೈದರ್ಗಿ, ಧಾನಯ್ಯ ಹಿರೇಮಠ, ರಾಮಸಿಂಗ ಕನ್ನೊಳ್ಳಿ, ಸಂತೋಷ ಪೊಲಾಶಿ, ಆನಂದ ದೇವರ, ಅವಿನಾಶ ಬಗಲಿ, ಶಿವಾನಂದ ಬಿಸನಾಳ, ಸಂಕೇತ ಜೋಶಿ, ಲಾಯಪ್ಪ ದೊಡ್ಡಮನಿ, ವಿಜು ಮಾನೆ, ಅಜೀತ ಹಿರೇಮಠ, ಕಿರಣ ಕಡ್ಲೇವಾಡಿ,ಮುನಸಿ ಹದಗಲ್ಲ, ಜಗುಗೌಡ ಬಿರಾದಾರ,ಶ್ರೀಶೈಲ ಹದಗಲ್ಲ,ಈರಪ್ಪ ಹದಗಲ್ಲ,ಮುಸ್ತಾಕ ಇಂಡಿಕರ,ಜೈನುದ್ದಿನ ಬಾಗವಾನ,ಭೀಮಾಶಂಕರ ಮೂರಮನ,ರೈಸ್ ಅಸ್ಟೇಕರ,ಬಸು ಮೈದರ್ಗಿ, ಪ್ರಭು ಶಿರಕನಹಳ್ಳಿ,ದತ್ತಾ ಬಂಡೇನವರ, ಶೈಲಜಾ ತೆಲ್ಲೂರ,ಸುನಂದಾ ಗಿರಣಿವಡ್ಡರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು.ವೈ.ಜಿ.ಬಿರಾದಾರ ನಿರೂಪಿಸಿದರು. ಪ್ರಕಾಶ ಬಿರಾದಾರ ವಂದಿಸಿದರು.