Saturday, 12th October 2024

ಸಚಿವ ಉಮೇಶ ಕತ್ತಿಯವರ ನಿಧನ: ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಸಂತಾಪ

ಕೋಲಾರ: ನನ್ನ ಆತ್ಮೀಯ ಸ್ನೇಹಿತರಾಗಿದ್ದ ಸಚಿವ ಉಮೇಶ ಕತ್ತಿಯವರ ಅಕಾಲಿಕ ನಿಧನ ಸುದ್ದಿ ತೀವ್ರ ಆಫಾತವನ್ನುಂಟು ಮಾಡಿದೆ. ಅವರು ಸರಳ ಹಾಗೂ ನೇರನುಡಿಯ ವ್ಯಕ್ತಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದ ಜನಪ್ರಿಯ ರಾಜಕಾರಣಿ ಯಾಗಿದ್ದರು.

2008 ರಲ್ಲಿ ನಾನು ತೋಟಗಾರಿಕೆ ಇಲಾಖೆ ಸಚಿವನಾಗಿದ್ದಾಗ ವರಿಷ್ಠರಾದ ರಾಜನಾಥ ಸಿಂಗ್ ಹಾಗೂ ಆಗಿನ ಸಿ.ಎಂ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ನಂತರ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಉಮೇಶ ಕತ್ತಿಯವರಿಗೆ ಆ ಖಾತೆ ನೀಡಲಾಗಿತ್ತು.

ಕತ್ತಿಯವರ ಅಕಾಲಿಕ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ಹಾನಿಯಾಗಿದೆ. ಉಮೇಶ್ ಕತ್ತಿಯವರ ಕುಟುಂಬಕ್ಕೆ, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಕತ್ತಿಯವರ ಅಗಲಿಕೆಯ ನೋವು ಹಾಗೂ ದುಖಃವನ್ನು ಸಹಿಸಿಕೊಳ್ಳುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ‌ ಸಚಿವ ಎಸ್.ಕೆ.ಬೆಳ್ಳುಬ್ಬಿ ಸಚಿವ ಉಮೇಶ ಕತ್ತಿಯವರ ನಿಧನಕ್ಕೆ ಸಂತಾಪ ಸೂಚಿಸಿದರು.