-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನೋಕ್ರೋಮ್ ಶೇಡ್ನ ಬ್ಲ್ಯಾಕ್ ಔಟ್ಫಿಟ್ನಲ್ಲೂ ಟ್ವಿನ್ನಿಂಗ್ (Black Outfit Fashion Tips) ಮಾಡಬಹುದು. ಅದು, ಅತ್ಯಾಕರ್ಷಕವಾಗಿ ಕಾಣಿಸಬಹುದು. ಹೌದು, ಇದಕ್ಕೆ ಸಾಕ್ಷಿಯೆಂಬಂತೆ, ಇವೆಂಟ್ವೊಂದರಲ್ಲಿ, ಮಾನೋಕ್ರೋಮ್ ಶೇಡ್ನ ಕಪ್ಪು ವರ್ಣದ ಡಿಸೈನರ್ವೇರ್ನಲ್ಲಿ, ಬಾಲಿವುಡ್ನ ಸ್ಟಾರ್ ಜೋಡಿ ರಿತೇಶ್ ಹಾಗೂ ಜೆನಿಲಿಯಾ ಕಾಣಿಸಿಕೊಂಡರು. ಫ್ಯಾಷನ್ ಪ್ರಿಯರನ್ನು ಸೆಳೆದರು. ಅಲ್ಲದೇ, ಸದ್ಯದ ಟ್ವಿನ್ನಿಂಗ್ ಫ್ಯಾಷನ್ಗೆ ಮತ್ತೊಂದು ಟ್ರೆಂಡಿ ಸ್ಟೈಲಿಂಗ್ ಕಾನ್ಸೆಪ್ಟ್ಗೆ ನಾಂದಿ ಹಾಡಿದರು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಸ್ಟಾರ್ ಕಪಲ್ ಜೆನಿಲಿಯಾ ಹಾಗೂ ರಿತೇಶ್ ಅವರ ಈ ಬ್ಲ್ಯಾಕ್ ಔಟ್ಫಿಟ್ ಟ್ವಿನ್ನಿಂಗ್ ಕಾನ್ಸೆಪ್ಟ್ ಫಾಲೋ ಮಾಡಲು ಬಯಸುವವರಿಗಾಗಿ ಸ್ಟೈಲಿಸ್ಟ್ಗಳು 5 ಸಿಂಪಲ್ ಸ್ಟೈಲಿಂಗ್ ಐಡಿಯಾ ನೀಡಿದ್ದಾರೆ.
ಮಾನೋಕ್ರೋಮ್ ಶೇಡ್ ಆಯ್ಕೆ
ಒಂದೇ ವರ್ಣದ ಅಥವಾ ಮಾನೋಕ್ರೋಮ್ ಶೇಡ್ನ ಸಾಲಿಡ್ ಬ್ಲ್ಯಾಕ್ ಕಲರ್ ಆಯ್ಕೆ ಮಾಡುವುದು ಉತ್ತಮ. ಈ ಶೇಡ್ ಯಾವ ಡಿಸೈನ್ ಹೊಂದಿದ್ದರೂ ಕೂಡ ಟ್ವಿನ್ನಿಂಗ್ಗೆ ಸಖತ್ ಆಕರ್ಷಕವಾಗಿ ಕಾಣಿಸುತ್ತದೆ.
ಕಾನ್ಸೆಪ್ಟ್ಗೆ ತಕ್ಕಂತೆ ಔಟ್ಫಿಟ್ ಡಿಸೈನ್
ಜೋಡಿಯು ಯಾವ ಬಗೆಯ ಕಾನ್ಸೆಪ್ಟ್ನ ಡಿಸೈನರ್ವೇರ್ ಅಥವಾ ಫಾರ್ಮಲ್ಸ್ ಧರಿಸುತ್ತಿದೆ ಎಂಬುದನ್ನು ಮೊದಲು ಪ್ಲಾನ್ ಮಾಡಬೇಕು. ಅಲ್ಲದೇ, ಇಬ್ಬರ ಔಟ್ಫಿಟ್ ಧರಿಸಿದಾಗ ಒಟ್ಟಿಗೆ ಕಾಣಿಸಿಕೊಂಡಾಗ ಹೇಗೆ ಕಾಣಿಸಬಹುದೆಂಬ ಪ್ರಿ ಪ್ಲಾನಿಂಗ್ ಮೊದಲೇ ಇರಬೇಕು.
ಪರ್ಫೆಕ್ಟ್ ಆಗಿ ಕ್ಯಾರಿ ಮಾಡುವುದು ಮುಖ್ಯ
ಬ್ಲ್ಯಾಕ್ ಕಲರ್ನ ಔಟ್ಫಿಟ್ ಧರಿಸಿದಾಗ ಇಬ್ಬರೂ ಧರಿಸಿದ ನಂತರ ಆ ಉಡುಪನ್ನು ಹೇಗೆ ಕ್ಯಾರಿ ಮಾಡಬೇಕು ಎಂಬುದನ್ನು ಅರಿತಿರಬೇಕು. ಆಗಷ್ಟೇ ಧರಿಸಿದ ಉಡುಪಿಗೆ ವ್ಯಾಲ್ಯೂ ಸಿಗುವುದು.
ಆಕ್ಸೆಸರೀಸ್ ಮ್ಯಾಚಿಂಗ್
ಬ್ಲ್ಯಾಕ್ ಔಟ್ಫಿಟ್ ಟ್ವಿನ್ಇಂಗ್ ಮಾಡಿದ ನಂತರ ಅದರೊಂದಿಗೆ ಧರಿಸುವ ಆಕ್ಸೆಸರೀಸ್ ಮ್ಯಾಚ್ ಮಾಡಬೇಕೇ! ಅಥವಾ ಕಾಂಟ್ರಾಸ್ಟ್ ಶೇಡ್ನದ್ದನ್ನು ಎದ್ದು ಕಾಣುವಂತೆ ಧರಿಸಬೇಕೆ! ಎಂಬುದನ್ನು ಗಮನದಲ್ಲಿಟ್ಟುಕೊಂಡು ಟ್ರಯಲ್ ಮಾಡಿ, ನೋಡಿ ನಿರ್ಧರಿಸಬೇಕು.
ಈ ಸುದ್ದಿಯನ್ನೂ ಓದಿ | Pro Ludo Star League: ಜನವರಿಯಲ್ಲಿ ಆರಂಭವಾಗಲಿದೆ ‘ಪ್ರೊ ಲುಡೋ ಸ್ಟಾರ್ ಲೀಗ್’; ಹಿರಿತೆರೆ, ಕಿರುತೆರೆ ಕಲಾವಿದರು ಭಾಗಿ
ಸ್ಟೈಲಿಂಗ್ ಹಾಗೂ ಪೋಸಿಂಗ್
ಕೇವಲ ಉಡುಗೆಗಳನ್ನು ಧರಿಸಿದರೇ ಸಾಲದು, ಅದಕ್ಕೆ ತಕ್ಕಂತೆ ಹೇಗೆಲ್ಲಾ ಕಾಣಿಸಿಕೊಳ್ಳಬೇಕು ಅಥವಾ ಪೋಸ್ ನೀಡಬೇಕು ಎಂಬುದನ್ನು ಮೊದಲೇ ಪ್ರಾಕ್ಟೀಸ್ ಮಾಡಿರಬೇಕು. ಇದು ಮತ್ತಷ್ಟು ಆಕರ್ಷಕವಾಗಿ ಕಾಣಿಸುವಂತೆ ಬಿಂಬಿಸುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)