Saturday, 14th December 2024

ಗಡಿ ವಿಚಾರ ಅಪ್ರಸ್ತುತ: ಮರೇಪ್ಪ ಗಿರಣಿವಡ್ಡರ್

ಇಂಡಿ: ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗ ಎರಡೂ ರಾಜ್ಯಗಳ ನಡುವೆ ಅವಿನಾಭವ ಸಹೋದರತ್ವದ ಸಂಬ೦ಧಗಳ ಬೆಸುಗೆ ಸಾಕಷ್ಟು ಇದ್ದು ಗಡಿವಿವಾದ ವಿಚಾರ ಹುಟ್ಟು ಹಾಕಿರುವುದು ಅಪ್ರಸ್ತುತ ಮತ್ತು ಸರಿ ಯಾದ ಕ್ರಮವಲ್ಲ ಎಂದು ಜೆಡಿಎಸ್ ಮುಖಂಡ ಮರೆಪ್ಪ ಗಿರಣಿವಡ್ಡರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವೇಲ್ಲರೂ ಮೋದಲು ಭಾರತೀಯರು ನಮ್ಮ ಪೂರ್ವಜರು ಅಖಂಡ ದೇಶ ಸ್ವಾತಂತ್ರö್ಯಗೊಳಿಸುವಲ್ಲಿ ಶ್ರಮಿಸಿದ್ದಾರೆ. ದೇಶದ ಆಂತರಿಕ ಭದ್ರತೆ ಇರಬೇಕು ಅಂದಾಗ ದೇಶದ ಏಕತೆ ಸಾಧಿಸಲು ಸಾಧ್ಯ. ತಮ್ಮ ರಾಜ್ಯದ ಹಳ್ಳಿಗಳನ್ನೆ ಉದ್ದಾರ ಮಾಡದ ಮಹಾರಾಷ್ಟ್ರ ಸರಕಾರ ಕರ್ನಾಟಕ ರಾಜ್ಯದ ಬಗ್ಗೆ ಅಪಸ್ವರ ಎತ್ತಿರುವುದು ಹಾಸ್ಯಾಸ್ಪದ.

ಇಂದು ಗಡಿವಿಚಾರದಲ್ಲಿ ತಗಾದೆ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಜತ್ತ, ಅಕ್ಕಲಕೋಟ ಸೇರಿದಂತೆ ೪೦ಕ್ಕಿಂ ಅಧೀಕ ಗ್ರಾಮಗಳ ಜನರು ಕರ್ನಾಟಕ ಸೇರುವ ಇಂಗಿತ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ನೋಡಿರಬಹುದು ಇದು ಮಹಾರಾಷ್ಟ್ರಿಗರಿಗೆ ತೀರಗು ಬಾಣದಂತಾಗಿ ಮುಜುಗರಕ್ಕೆ ಇಡಾಗಿದೆ. ಈ ಬಗ್ಗೆ ಅಲ್ಲಿನ ಜನರು ಗ್ರಾ.ಪಂಚಾಯತಿ ಯಲ್ಲಿ ತೀರ್ಮಾನಿಸಿ ಮಹಾಜನ್ ವರದಿಯಂತೆ ನಾವು ಕರ್ನಾಟಕಕ್ಕೆ ಸೇರುತ್ತೇವೆ.

ಗಡಿ ಕನ್ನಡಿಗರಿಗೆ ೫ ದಶಕಗಳಿಂದ ಅನ್ಯಾಯ ವಾಗುತ್ತಿದೆ ಎಂದು ಮಹಾ ಸರಕಾರದ ಮೇಲೆ ಅಲ್ಲಿನ ಜನತೆ ದೂರಿದ್ದಾರೆ. ಗಡಿ ವಿಚಾರ ಸುಪ್ರೀಂ ಕೋರ್ಟ ಅಂಗಳದಲ್ಲಿದ್ದು ಎಲ್ಲರೂ ನ್ಯಾಯಾಲಯದ ಆಜ್ಞೆ ಗೌರವಿಸಬೇಕು ಎಂದು ತಿಳಿಸಿದ್ದಾರೆ.