Wednesday, 18th September 2024

ಪಟ್ಟಣ ಪಂಚಾಯತ 2024-25 ಸಾಲಿನ ಆಯ-ವ್ಯಯ

ಕೊಲ್ಹಾರ: 2024-25 ನೇ ಸಾಲಿನ ಪಟ್ಟಣ ಪಂಚಾಯತ್ ಆಯ-ವ್ಯಯ ಬಜೆಟ್ ಮಂಡನೆ ಜರುಗಿತು.

ಪ.ಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ನೇತೃತ್ವದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ಆಯ-ವ್ಯಯ ಬಜೆಟ್ ಓದಿ ಹೇಳಿದರು.

ಪಟ್ಟಣ ಪಂಚಾಯತ್ ವಾರ್ಷಿಕ ಸರ್ವ ಚಟುವಟಿಕೆಗಳನ್ನು ಗಮನದಲ್ಲಿಟ್ಟು ಯಾವುದಕ್ಕೂ ಕೊರತೆಯಾಗದಂತೆ ಆಯ-ವ್ಯಯ ಬಜೆಟ್ ಮಂಡಿಸ ಲಾಗಿದೆ ಎಂದು ಈ ಸಂದರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ಮಾಹಿತಿ ನೀಡಿದರು.

ಆಯ-ವ್ಯಯ ಮಂಡನೆ ಸಂದರ್ಭದಲ್ಲಿ ಪ.ಪಂ ಆಡಳಿತಾಧಿಕಾರಿ, ತಹಶೀಲ್ದಾರ್ ಎಸ್‌.ಎಸ್ ನಾಯಕಲಮಠ, ಸಿಬ್ಬಂದಿಗಳಾದ ನಿಖಿಲ್ ಪಾಟೀಲ್, ಗೌಡಪ್ಪ ಕಾರಜೋಳ, ಮಂಜುನಾಥ ಚಿತ್ತರಕಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *