Saturday, 14th December 2024

ಜನವಿರೋಧಿ ಬಜೇಟ್: ಆರ್.ಬಿ ಪಕಾಲಿ

ಕೊಲ್ಹಾರ: ಕೇಂದ್ರ ಸರಕಾರ ಮಂಡಿಸಿದ ಬಜೇಟ್ ಅಸಮರ್ಪಕ ಬಜೇಟ್ ಆಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಹೇಳಿದರು.

ಬಜೇಟ್ ಮಂಡನೆಯಲ್ಲಿ ರೈತಾಪಿ ವರ್ಗವನ್ನು ನಿರೀಕ್ಷಿತ ಪ್ರಮಾಣದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಬೆಳೆಗಳಿಗೆ ಕೇಂದ್ರಿಕೃತ ಯೋಜನೆಗಳನ್ನು ರೂಪಿಸದೆ ರೈತರನ್ನು ಕಡೆಗಣಿಸಲಾಗಿದೆ. ಸಣ್ಣ, ಅತಿಸಣ್ಣ ಹಾಗೂ ಮದ್ಯಮ ಕೈಗಾರಿಕೆಗೆ ಅಂದುಕೊಂಡಷ್ಟು ಒತ್ತು ಕೊಡದೆ ಬೃಹತ್ ಉದ್ಯಮಗಳಿಗೆ ಮಾತ್ರ ಆದ್ಯತೆ ನೀಡಿ ಶ್ರೀಮಂತರ ಪರ, ಬಡವರ ವಿರುದ್ಧ ಎನ್ನುವ ಬಜೇಟ್ ಇದಾಗಿದ್ದು. ಒಟ್ಟಾರೆ ಜನವಿರೋದಿ ಬಜೇಟ್ ಆಗಿದೆ.