Saturday, 14th December 2024

ದಿವಂಗತ ಅನಂತಕುಮಾರ್ ಜನ್ಮದಿನವನ್ನು ಮತ್ತೆ ಸ್ಮರಿಸಿದ ಬಿ.ವೈ.ವಿಜಯೇಂದ್ರ

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಎರಡು ತಿಂಗಳು ನಂತರ ದಿವಂಗತ ಅನಂತ ಕುಮಾರ್ ಅವರ ಜನ್ಮದಿನವನ್ನು ಮತ್ತೆ ಸ್ಮರಿಸಿದ್ದಾರೆ.

‘ಜನಪ್ರಿಯ ಹಿರಿಯ ನಾಯಕರು, ಕೇಂದ್ರದ ಮಾಜಿ ಸಚಿವರು, ಸ್ನೇಹಜೀವಿ, ಆದರ್ಶ ನೇತಾರ ಸನ್ಮಾನ್ಯ ಶ್ರೀ ಅನಂತಕುಮಾರ್ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ಪಕ್ಷ ಸಂಘಟನೆಯಲ್ಲಿ ಅವರ ನಿಷ್ಠೆ, ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಬದ್ಧತೆ, ಜನಸೇವೆಯಲ್ಲಿ ಅವರ ಸಾಧನೆಗಳು ನಮ್ಮೆಲ್ಲ ರಗೂ ಸದಾ ಸ್ಫೂರ್ತಿಯಾಗಿದೆ’ ಎಂದು ಬಿ. ವೈ.ವಿಜಯೇಂದ್ರ ಕೂ ಮಾಡಿದ್ದಾರೆ.

ರಾಜಕೀಯ ತಂತ್ರಗಾರಿಕೆ ಮತ್ತು ಪಕ್ಷದ ಸಂಘಟನೆ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಬೀರಿದ್ದ ಅನಂತ್‌ ಕುಮಾರ್ ಅವರ ಜನ್ಮದಿನ ಜೂಲೈ 22. ಆದರೆ ವಿಜಯೆಂದರೆ ಅವರು ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಇಂದು ಸೆಪ್ಟೆಂಬರ್ 22ಕ್ಕೆ ಅವರ ಜನ್ಮಜಯಂತಿಯ ಶುಭಾಶಯ ತಿಳಿಸಿದ್ದಾರೆ.