ಮುದ್ದೇಬಿಹಾಳ: ಅಗಸ್ಟ ೩೦ ರಂದು ದೇಶಾದ್ಯಂತ ವೀರಭದ್ರೇಶ್ವರ ಜಯಂತಿ ಆಚರಿಸ ಲಾಗುತಿದ್ದು ಅದರಂತೆ ನಮ್ಮ ಕಿತ್ತೂರು ಕರ್ನಾಟಕದಲ್ಲು ಪತ್ರ ಮನೆಗಳಲ್ಲಿ ವೀರಭದ್ರೇ ಶ್ವರ ಜಯಂತಿ ಆಚರಣೆ ಮಾಡಲು ಕರ್ನಾಟಕ ವೀರಶೈವ ಸಂಘಟನಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಕಾಶಿಬಾಯಿ ರಾಂಪೂರ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸನಾತನ ಧರ್ಮದಲ್ಲಿ ೩೩ ಕೋಟಿ ದೇವರುಗಳಿದ್ದು. ಒಂದೋAದು ಕಾಲಗಟ್ಟದಲ್ಲಿ ನಡೆಯುವ ಅನ್ಯಾಯ, ಅಧರ್ಮ, ಅನೀತಿಗಳನ್ನು ತಡೆಯಲುದುಷ್ಟರನ್ನು ಶಿಕ್ಷಿಸಲು ಹಾಗೂ ಶಿಷ್ಟರನ್ನು ರಕ್ಷೀಸಲು ದೇವತೆ ಗಳು ಒಂದಲ್ಲಾ ಒಂದು ಅವತಾರವನ್ನು ತಾಳುವದು ನಮಗೆ ತಿಳಿದಿರುವ ವಿಷಯಿಂತಹದೆ ಒಂದು ಆ ಮಹಾದೇವ ಬೋಳಾಶಂಕರನ ಅವತಾರವಾದ ವೀರಭದ್ರನನ್ನು ದಕ್ಷ ಬ್ರಹ್ಮಣ ಸಂಹಾರಕ್ಕಾಗಿ ಮತ್ತು ಶೈವ ಪರಂಪರೆಯ ಮಹತ್ವವನ್ನು ಇಡಿ ವಿಶ್ವಕ್ಕೆ ಸಾರುವ ಸಲುವಾಗಿ ಜನ್ಮ ತಾಳಿದನು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷವು ಪ್ರತಿ ಗ್ರಾಮದ ಮನೆ,ಮನೆಗಳಲ್ಲಿ ವೀರಭದ್ರೇಶ್ವರನ ಜಯಂತಿಯನ್ನು ಆಚರಿಸಿ ಪ್ರತಿಯೋಬ್ಬರು ಸಹ ವೀರಭದ್ರೇ ಶ್ವರನ ಕೃಪೆಗೆ ಪಾತ್ರರಾಗಿ ಸಕಲ ಇಷ್ಟಾರ್ಥಗಳನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.