ಇಂಡಿ: ಆರನೇ ಶತಮಾನದಲ್ಲಿ ಕನಕದಾಸರು ಹೇಳಿದ ಆದರ್ಶವನ್ನು ಪಾಲಿಸಿದ್ದರೆ ಜಾತಿ ಪಿಡುಗಿನ ಹೋರಾಟಗಳೇ ಇರುತ್ತಿರಲಿಲ್ಲ ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು.
ಶುಕ್ರವಾರ ತಾಲೂಕಿನ ಆಳೂರ ಗ್ರಾಮದಲ್ಲಿ ಹಮ್ಮಿಕೊಂಡದ್ದ ಸಂತ ಶ್ರೇಷ್ಠ ಕನಕದಾಸರ ೫೩೫ನೇ ಜಯಂತಿ ಆಚರಣೆ ಕರ‍್ಯಕ್ರಮದಲ್ಲಿ ಮಾತನಾಡಿದರು.
ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದ ಕನಕದಾಸರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತರು. ದಾಸ ಪರಂಪರೆಯ ೫೦ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು.
೧೫ನೆಯ ಶತಮಾನದಲ್ಲಿ ದಾಸ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಕನಕದಾಸರು. ಮಾಡುವ ಕೆಲಸ ಸಮಾಜಮುಖಿ ಯಾದರೆ ಅವರು ಶ್ರೇಷ್ಠರಾಗುತ್ತಾರೆ ಎನ್ನುವುದಕ್ಕೆ ಕನಕದಾಸರು ಆದರ್ಶವಾಗಿದ್ದಾರೆ. ಜಯಂತಿಗಳು ಕೇವಲ ಮೆರವಣಿಗೆ ಮತ್ತು ಆಚರಣೆಗೆ ಸಿಮೀತವಾಗದೆ ಅವರ ತತ್ವ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸುವಲ್ಲಿ ಮುನ್ನಡೆಯ ಬೇಕು. ವರ್ಣ ಮತ್ತು ವರ್ಗ ರಹಿತ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಗ್ರಾಮ ಪಂಚಾಯ ಅಭಿವೃದ್ಧಿ ಅಧಿಕಾರಿ ಉಮೇಶ ಹೂಗಾರ ಮಾತನಾಡಿ, ಸಮಾಜದ ಒಳಿತಿಗಾಗಿ ಹೋರಾಡಿದ ಸಂತ ಕನಕದಾಸರು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ಕನಕದಾಸರ ಸಾಹಿತ್ಯದ ಸಂದೇಶ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಎಲ್ಲರೂ ಕೂಡಿ ಮಾಡೋಣ ಎಂದರು.
ಗ್ರಾಪ0 ಸದಸ್ಯ ಯಲ್ಲಪ್ಪ ಹಿರೇಕುರಬರ ಮಾತನಾಡಿ, ಹದಿನೈದು-ಹದಿನಾರನೇ ಶತಮಾನದಲ್ಲಿ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟಿದ ದಾಸರು. ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದರು. ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನ ಕಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಇತಿಹಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಯಲಗೊಂಡ ಬೇವನೂರ, ದ್ಯಾವಪ್ಪ ಹಿರೇಕುರಬರ, ಬೂತಾಳಿ ಕರಜಗಿ, ಬಸವರಾಜ ವಾಲಿಕಾರ, ನಾಮದೇವ ಮಾವಿನಹಳ್ಳಿ, ಸುರೇಶ ಚಾಬುಕಸವಾರ, ಯಲಗೊಂಡ ರೇವಪ್ಪ ಬೇನೂರ, ಮಹಾದೇವ ನಡಹಟ್ಟಿ, ಮಲ್ಲು ಹೊನ್ನಳಿ, ಧರ್ಮಣ ಬೇನೂರ, ಸಂಗನಬಸವ ಬೇವನೂರ, ಸಿದ್ದು ಕರಜಗಿ, ಚಿದಾನಂದ ನಡಹಟ್ಟಿ, ಸುರೇಶ ಧನಗರ, ಸಿದ್ದು ಬೇನೂರ, ಮುತ್ತು ಬೇನೂರ, ಮಹದೇವ ಕರಜಗಿ, ಸಿದ್ದಗೊಂಡ ಬೇನೂರ, ಸಿವಾನಂದ ಮಾವಿನಹಳ್ಳಿ ಸೇರಿದಂತೆ ಅನೇಕರು ಇದ್ದರು.