Saturday, 14th December 2024

ಪತ್ರಕರ್ತರ ಬಳಗದಿಂದ ವೈದ್ಯರ ಹಾಗೂ ಕಂದಾಯ ದಿನಾಚರಣೆ

ಚಿಂಚೋಳಿ: ರಾಷ್ಟ್ರೀಯ ವೈದ್ಯರ, ಕಂದಾಯ ಹಾಗೂ ಪತ್ರಕರ್ತರ ದಿನಾಚರಣೆಯನ್ನು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ಪತ್ರಿಕಾ ಬಳಗದ ವತಿಯಿಂದ ಜರುಗಿತು.

ಈ ವೇಳೆ ಕಂದಾಯ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಅಂಜುಮ್ ತಬಸ್ಸುಮ್, ಗ್ರೇಡ್ – ತಹಸೀಲ್ದಾರ್ ವೆಂಕಟೇಶ ದುಗ್ಗನ್, ವೈದ್ದರುಗಳಾದ ತಾಲೂಕ ವೈದ್ಯಾಧಿಕಾರಿ ಡಾ. ಗಾಫರ್, ಆಡಳಿತಧಿಕಾರಿ ಸಂತೋಷ ಪಾಟೀಲ್, ಡಾ. ಫಾತಿಮ, ಡಾ. ದೀಪಾ, ಡಾ. ವೀರೇಶ ಪಾಟೀಲ್, ವಿಕ್ರಂ ಪಾಟೀಲ್, ಡಾ. ಸಂಗಮೇಶ ಪಾಟೀಲ್ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.

ಇದರ ಅಧ್ಯಕ್ಷತೆ ವಹಿಸಿ ಮಾತಾನಾಡಿದ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ದೇಶದಲ್ಲಿ ಮಹಾಮಾರಿ ಕರೋನದಿಂದ ಜನರು ಸಾವಿನ ಭಯದಿಂದ ತತ್ತರಿಸಿದ ಹೋಗಿದ್ದ ಸಂದರ್ಭದಲ್ಲಿ ವೈದ್ಯರುಗಳು ಹೆದರದೆ ತಮ್ ಕುಟುಂಬವನ್ನು ಲೆಕ್ಕಿಸದೆ ಕರ್ತವ್ಯವನ್ನು ಮಾಡಿದ ವೈದ್ಯರ ಸೇವೆಯನ್ನು ನಾವು ಎಷ್ಟು ಶ್ಲಾಘಸಿದರು ಸಾಲದು.

ಇನ್ನೂ ದೇಶದ ಅಂಕು ಡೊಂಕುಗಳನ್ನು ತಿದ್ದಿ, ತೀಡಿ ಸರಿದಾರಿಗೆ ತರುವಲ್ಲಿ ಮುಖ್ಯ ವಾಹಿಸುವರು ಪತ್ರಿಕಾರಂಗವು ಕೂಡ ಕೋರನದ ಮಹಾಮಾರಿಯಲ್ಲಿ ವೈದ್ಯರ ಜೊತೆಗೆ ಸೇರಿ ತಮ್ಮ ಸುದ್ದಿಗಳನ್ನು ಬಿತ್ತರಿಸುವ ಮುಖಾಂತರ ಜನರನ್ನು ಎಚ್ಚರಗೋಳಿಸಿರುವ ಪತ್ರಕರ್ತರ ಸೇವೆ ಅಮೂಲ್ಯ ವಾಗಿದೆ ಎಂದು ಹೇಳಿದರು.

ಡಾ. ಗಾಫರ್ ಅವರು ಮಾತನಾಡಿ, ಪತ್ರಕರ್ತರು ಪ್ರತಿಯೊಬ್ಬರ ಇಲಾಖೆಯ ಅವರ ತಪ್ಪುಗಳನ್ನು ತಿದ್ದುವತಂವರು. ಇವರಿಂದ ಸನ್ಮಾನ ಮಾಡಿಕೊಳ್ಳುವುದು ನಮ್ಮ ಭಾಗ್ಯವಾಗಿದೆ ಎಂದು ತಿಳಿಸಿದರು.

ತಾಲೂಕಿನ ಹಿರಿಯ ಮುತ್ಸದಿ ಪತ್ರಕರ್ತ ರಾಮರಾವ್ ಪಾಟೀಲ್ ಕುಲಕರ್ಣಿ ಅವರ 33 ವರ್ಷಡಾ ನಿರಂತರ ಸೇವೆಗೆ ತಹಸೀ ಲ್ದಾರ್ ಅಂಜುಮ್ ತಬಸ್ಸುಮ್ ಹಾಗೂ ಪತ್ರಕರ್ತರ ಬಳಗದಿಂದ ಅವರನ್ನು ಸನ್ಮಾನಿಸಲಾಯಿತು.

ಈ ಸದರ್ಭದಲ್ಲಿ ಪುರಸಭೆ ಅಧಿಕಾರಿ ಕಾಶಿನ್ನಾಥ ಧನ್ನಿ, ಕಿರಣ ಮಡಿವಾಳ, ಪತ್ರಕರ್ತರಾದ ಮಹೇಬೂಬ್ ಶಾ ಅನವಾರ, ರಾಜೇಂದ್ರ ಪ್ರಸಾದ, ಮೋಯಿಜ್ ಪಟೇಲ್, ವೆಂಕಟೇಶ ದುದ್ಯಾಲ್, ಚಾಂದಪಾಶಾ, ವೀರಭದ್ರ ರಾಯಪಳ್ಳಿ, ಶಿವಕುಮಾರ ತಳವಾರ, ವಾಸಿಮ್ ಪಟೇಲ್, ಸುಮಂತ್ ಸಂಗೆದ, ರಾಜು ಮೀರಿಯಾಣ ಇದ್ದರು.

ಇದೇ ವೇಳೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.