Saturday, 14th December 2024

ಚೌಡಿಹಾಳ ಗ್ರಾ.ಪಂ ಸಭೆಗೆ ಅಧಿಕಾರಿಗಳ ಗೈರು

ಇಂಡಿ: ತಾಲೂಕಿನ ಚೌವುಡಿಹಾಳ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಬುಧವಾರ ಚೌವುಡಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ, ಕೆ.ಡಿ.ಪಿ ಸಭೆ ಗ್ರಾಮ ಪಂಚಾಯತ ಅಧ್ಯಕ್ಷೆ ದೀಲ್‌ಶಾದ. ಬೀ ಅಲ್ಲಾಉದೀನ ಚೌದರಿ ಅಧ್ಯಕ್ಷತೆ ಯಲ್ಲಿ ಜರುಗಿತು.

ಸಭೆಗೆ ಹಾಜರಾಗಬೇಕಾಗಿದ್ದ ಕೃಷಿ ತೋಟಗಾರಿಕೆ, ಅರಣ್ಯ, ಕಂದಾಯ ಮೀನುಗಾರಿಕೆ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಶು ಸಂಗೋಪನೆ, ಆರೋಗ್ಯ ಇಲಾಖೆ ಸಂಬAಧಿಸಿದ ಇಲಾಖೆ ಮುಖ್ಯಸ್ಥರು ಸಭೆಗೆ ಬಾರದೆ ಇರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯ ಸದಸ್ಯ ಸಾಯಬಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಕಾಮಣ್ಣಾ ದಶವಂತ ಆಕ್ರೋಷ ವ್ಯಕ್ತ ಪಡಿಸಿ ಅಧಿಕಾರಿಗಳು ಸಭೆಗೆ ಬಾರದೆ ಸಭೆ ನಡೇಸುವುದಾದರೂ ಯಾತಕ್ಕೆ ? ಎಂದು ಸದಸ್ಯರು ಪ್ರಶ್ನಿಸಿದರು.

ಸಾರ್ವಜನಿಕರಿಗೆ ಇಲಾಖೆ ಯೋಜನೆಗಳು ತಿಳಿಸಲು ಸಾಧ್ಯವಾಗುತ್ತಿಲ್ಲ ಸಭೆಗೆ ಬಾರದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ ಸಿ.ಈ.ಓ ಹಾಗೂ ತಾ.ಪಂ ಇಓ ಅವರಿಗೆ ವರದಿ ಸಲ್ಲಿಸಲು ಪಿ.ಡಿ.ಒ ಸಿಜಿ.ಪಾರೆಯವರಿಗೆ ಸೂಚಿಸಿ ದರು. ಹೀಗಾಗಿ ಕೆಡಿಪಿ ಸಭೆ ಅಧಿಕಾರಿಗಳು ಸಭೆಗೆ ಬಾರದೆ ಇರುವುದರಿಂದ ಮುಂದೂಡ ಲಾಯಿತು.