ಇಂಡಿ: ಅ.೨೩ ರಂದು ರಾಣಿ ಚನ್ನಮ್ನನವರು ಬ್ರಿಟಿಷ್ ಥ್ಯಾಕರೆ ಮತ್ತು ಅವರ ಸೈನಿಕರ ವಿರುಧ್ದ ವಿಜಯ ಸಾಧಿಸಿದ ದಿನವಾ ಗಿದ್ದು, ಸರಕಾರ ಈ ದಿನವನ್ನು ಚನ್ನಮ್ಮನವರ ವಿಜಯೋತ್ಸವ ದಿನ ಎಂದು ಸರಕಾರ ಆಚರಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ ಹೇಳಿದರು.
ಅವರು ಭಾನುವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಹಮ್ಮಿ ಕೊಂಡ ರಾಣಿಚನ್ನಮ್ಮನವರ ಜಯಂತ್ಯೋ ತ್ಸವದ ಅಂಗವಾಗಿ ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುಧ್ಧ ಹೋರಾಡಿದ ವೀರವನಿತೆ, ಪ್ರಥಮ ಸ್ವಾತಂತ್ರ‍್ಯ ಸೇನಾನಿ ಕಿತ್ತೂರಿನ ರಾಣಿ ಚನ್ನಮ್ಮನವರು ಎಂದರು.
ಸರಕಾರ ಕೂಡಲೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ಸಮಾಜ ಬಾಂಧವರು ಒಗ್ಗೂಡಿ ಸರಕಾರದ ವಿರುಧ್ಧ ಹೋರಾಟ ಮಾಡುತ್ತೇವೆ. ಡಿ.೧೨ ರಂದು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿ ಗಾಗಿ ಬೆಂಗಳೂರಿನ ವಿಧಶಾನಸೌಧಕ್ಕೆ ಮುತ್ತಿಗೆ ಹಾಕುವ ಬೃಹತ್ ಹೋರಾಟ ಹಮ್ಮಿ ಕೊಂಡಿದ್ದು ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆ ಹೋರಾಟ ದಲಿ ಭಾಗವಹಿಸಲು ವಿನಂತಿಸಿದರು.
ಕ೦ದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಡಾ|| ವಿಪುಲ್ ಕೋಳೆಕರ್, ರಾಣಿ ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸೌಹಾರ್ದದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಶಿವಾನಂದ ಮಠಪತಿ, ಮಹಾಂತೇಶ ಮುಡಕೆ, ಬಸವರಾಜ ದಶವಂತ, ಸಿದ್ದಾರ್ಥ ಅರಳಿ, ಚಂದ್ರಾಮ ಮೇಡೇದಾರ, ವ್ಯವಸ್ಥಾಪಕ ಅಶೋಕ ಬಳಬಟ್ಟಿ, ಬಸವರಾಜ ರಾವೂರ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ, ಬಾಳು ಮುಳಜಿ, ಶಿವಾನಂದ ಚಾಳೀಕಾರ, ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯೆಕ್ಷೆ ಶಶಿಕಲಾ ಬೆಟಗೇರಿ, ವಿದ್ಯಾಶ್ರೀ ಪಾಟೀಲ, ಶಶಿಕಲಾ ಆಳೂರ ಮತ್ತಿತರರು ಇದ್ದರು.