Thursday, 3rd October 2024

Chlorine gas leak: ಹೊಸದುರ್ಗದಲ್ಲಿ ಕ್ಲೋರಿನ್ ಗ್ಯಾಸ್‌ ಸೋರಿಕೆಯಾಗಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Chlorine gas leak

ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಪುರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ಸೋಮವಾರ ಸಂಜೆ ಕ್ಲೋರಿನ್ (Chlorine gas leak) ಅನಿಲ ಸೋರಿಕೆಯಾಗಿ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಪಟ್ಟಣಕ್ಕೆ ಸರಬರಾಜು ಆಗುವ ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಅನಿಲ ತುಂಬಿದ ಸಿಲಿಂಡರ್‌ನಿಂದ ಸಂಜೆ ಗ್ಯಾಸ್ ಸೋರಿಕೆಯಾಗಿದ್ದರಿಂದ ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಜನರು ಉಸಿರುಗಟ್ಟಿ, ಅಸ್ವಸ್ಥಗೊಂಡಿದ್ದಾರೆ.

ಏಕಾಏಕಿ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬಂದು ಎಪಿಎಂಸಿ ಮೈದಾನ ಹಾಗೂ ಶಾಲಾ ಮೈದಾನದ ಸೇರಿದಂತೆ ಕಾಲಿ ಜಾಗಕ್ಕೆ ಓಡಿ ಹೋಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುವುದನ್ನು ತಡೆಯಲು ತೀವ್ರ ಪ್ರಯತ್ನ ನಡೆಸಿದರು. ಸಿಬ್ಬಂದಿ ಕೂಡ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡರೂ ಗ್ಯಾಸ್‌ ಸೋರಿಕೆಯಾಗುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ | Rashmika Mandanna : ಅಪಘಾತದಲ್ಲಿ ಗಾಯಗೊಂಡಿದ್ದಾರೆ ರಶ್ಮಿಕಾ ಮಂದಣ್ಣ; ಏನಾಯಿತು ಎಂದು ವಿವರಿಸಿದ ನಟಿ

ತೀವ್ರವಾಗಿ ಅಸ್ವಸ್ಥಗೊಂಡ ನೂರಕ್ಕೂ ಹೆಚ್ಚು ಜನರನ್ನು ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿಸಲಾಗಿದೆ.

ಗಣೇಶೋತ್ಸವದ ವೇಳೆ ವಿದ್ಯುತ್ ತಗುಲಿ ಬಾಲಕಿ ಸಾವು

ದೊಡ್ಡಬಳ್ಳಾಪುರ: ಗಣೇಶೋತ್ಸವದ ವೇಳೆ ವಿದ್ಯುತ್ ತಗುಲಿ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ಭಾನುವಾರ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಶಾಲೆಯ ಆವರಣದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ವಿದ್ಯುತ್ ತಗುಲಿ (Electric shock) ಬಾಲಕಿ ಕೊನೆಯುಸಿರೆಳೆದಿದ್ದಾಲೆ.

ವಿದ್ಯುತ್ ತಗುಲಿದ ಕೂಡಲೇ ಬಾಲಕಿಯನ್ನು ನೆಲಮಂಗಲದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ.