Friday, 13th December 2024

ರಸ್ತೆಯ ಮೇಲೆ ದನಗಳದ್ದೇ ಕಾರು ಬಾರು

ಶರಣಬಸಪ್ಪಾ.ಎನ್ ಕೆ.

ಇಂಡಿ: ಹೌದು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಾಚಾರಿಗಳು ಅಲೇದಾಟ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ತೀರುಗಾಡುವ ಪರಸ್ಥಿತಿ ನಿರ್ಮಾಣವಾಗಿದೆ ಏಕೆಂದರೆ ಪ್ರತಿ ರಸ್ತೆಗಳ ಮೇಲೆ ದನಗಳ ಕಾರುಬಾರು ಇರುವದರಿಂದ ಯಾವ ಸಂಧರ್ಬದಲ್ಲಿ ಕಾದಿದೇಯೋ ಕುತ್ತು ದೇವರೇ ಬಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪಟ್ಟಣದ ಪ್ರತಿಯೊಂದು ಕುಂದು ಕೊರತೆಗಳ ಬಗ್ಗೆ ಹದ್ದಿನ ಕಣ್ಣು ಇಡಬೇಕಾದ ಪುರಸಭೆ ಕಣ್ಮುಚಿ ಕುಳಿತ್ತಿದ್ದು ಸ್ಥಳೀಯ ಆಡಳಿತ ಇದ್ದು ಇಲ್ಲದಂತಾಗಿದೆ. ನಗರದಲ್ಲಿ ಕೆಲ ಬಡಾವಣೆಗಳಲ್ಲಿ ಗಟಾರುಗಳ ನೀರು ಹರಿದು ರಸ್ತೆಯ ಮೇಲೆ ನಿಂತಿರು ವದರಿಂದ ಸೋಳ್ಳೆಗಳ ಕಾಟ ಹೆಚ್ಚಾಗಿ ಸಾರ್ವಜನಿಕರಿಗೆ ಮಲೇರಿಯಾ ಡೇಂಘೀ ರೋಗಳಿಂದ ಜನರು ಆಸ್ಪತ್ರೆ ಪಾಲಾಗುತ್ತಿದ್ದಾರೆ ಇನ್ನು ಪಟ್ಟಣದ ಪ್ರಮುಖ ರಸ್ತೆಗಳಾದ ವಿಜಯಪೂರ ರಸ್ತೆ, ಅಗರಖೇಡ ರಸ್ತೆ, ಸ್ಟೇಶನ ರಸ್ತೆ, ಸಿಂದಗಿ ಪ್ರಮುಖ ರಸ್ತೆಗಳಾಗಿದ್ದು ದ್ವೀಚಕ್ರವಾಹನಗಳು, ಸಾರಿಗೆ ವಾಹನಗಳು, ಶಾಲಾ,ಕಾಲೇಜುಗಳ ವಾಹನ. ಟಂ ಟಂ , ಪಿಕಫ್ ಇತರೆ ವಾಹನ ಗಳು ಪ್ರತಿನಿತ್ಯ ಸಂದಿಲ್ಲದೆ ಓಡಾಡುತ್ತಿರುತ್ತವೆ ಇವುಗಳ ಓಡಾಡಕ್ಕೆ ಜಾನುವಾರಗಳ ಹಿಂಡು ಅಡ್ಡಾದಿಡ್ಡಿ ಅಲೆದಾಡಿ ಸಾರ್ವಜನಿಕರಿಗೆ ,ವಾಹನ ಗಳಿಗೆ ಅಡ್ಡಗಟ್ಟಿ ನಿಲ್ಲಿಸುತ್ತಿವೆ.

ಅಷ್ಠೇ ಅಲ್ಲದೆ ಪರಸ್ಥರ ಜಾನುವಾರಗಳು ಕಾದಾಟ ಮಾಡುತ್ತಾ ಜನರ ಮೇಲೆ ಮತ್ತು ರಸ್ತೆಯ ಬದಿ ಕಾಯಿಫಲ್ಲೆ ಮಾರು ಮಾರಾಟಗಾರರ ಹಾಗೂ ಬೀದಿ ವ್ಯಾಪಾರಸ್ಥರ ಮತ್ತು ಮೈ ಮೇಲೆ ಬೀಳುವುದು ಕೊಂಬಿನಿಂದ ತೀವಿಯುವುದು ಮಾಡುತ್ತಿವೆ.

ಶಾಲೆ, ಕಾಲೇಜುಗಳಿಗೆ ಹೋಗುವ ಚಿಕ್ಕ ಚಿಕ್ಕ ಕಂದಮ್ಮಗಳ ಮೈ ಮೇಲೆ ಹೆಣ್ಣು ಮಕ್ಕಳ ಮೇಲೆ ಏರಿ ಹೋಗುತ್ತಿರುವದರಿಂದ ಮಕ್ಕಳು,ಮಹಿಳೆಯರು ಭಯಭೀತರಾಗಿ ಅಲೇದಾಡುವ ಸಂಧರ್ಬ ಬಂದು ಬಿಟ್ಟಿದೆ. ಇಂತಹ ಸ್ಥಳೀಯ ಅನೇಕ ಸಮಸ್ಯಗಳ ಕುರಿತು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಇವರಿಗೆ ಕರೆ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ ಎಂಬುದು ಸಾರ್ವ ಜನಿಕರು ಅಧಿಕಾರಿಯ ನಡೇಗೆ ದೂರುತ್ತಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಕ್ಯಾಮರ ಹಾಕಿದ್ದರೂ ಅಲ್ಲಲ್ಲಿ ಏನು ನಡೇಯುತ್ತದೆ ಎಂದು ವೀಕ್ಷಿಸದೆ ಇದನ್ನು ನೋಡದ ಗೋಜಿಗೆ ಹೋಗದಿದ್ದರೆ ಸಿ.ಸಿ ಕ್ಯಾಮರಾ ಹಾಕಿ ಏನು ಪ್ರಯೋಜನ ಎಂಬುದು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಸ್ಥಳೀಯ ಪುರಸಭೆ ಅಧಿಕಾರಿ ಎಚ್ಚೇತ್ತು ಸಾರ್ವ ಜನಿಕರಿಗೆ ಆಗುವ ತೊಂದರೆಯನ್ನು ನೀವಾರಿಸುತ್ತಾರೆಯೋ ಇಲ್ಲೋ ಎಂಬುದು ಕಾದು ನೋಡಬೇಕಾಗಿದೆ.

*

ಜಾನುವಾರಗಳ ಹಾವಳಿ ಹೆಚ್ಚಾಗಿದ್ದು ಜಾನುವಾರಗಳು ಮಾಲಿಕರು ಪ್ರಜ್ಞಾವಂತರದ್ದೆಯಾಗಿವೆ. ಈ ಹಿಂದೆ ಅನೇಕ ಬಾರಿ ಜಾನುವಾರಗಳು ಗೋಶಾಲೆಗೆ ಅಥವಾ ಬೇರೆಕಡೆ ಸ್ಥಳಾಂತರಿಸಬೇಕು ಎಂದು ಜಾನುವಾರಗಳ ಮಾಲೀಕರಿಗೆ ಧ್ವನಿ ವರ್ಧಕದ ಮೂಲಕ ತಿಳುವಳಿಕೆ ಹೇಳಲಾಗಿದೆ ಆದರೆ ಅವರು ಒಟ್ಟೇ ಕೇಳುವ ಪರಸ್ಥಿತಿಯಲ್ಲಿ ಇಲ್ಲ. ಜಾನುವಾರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವುದು ನೀಜ ಪಟ್ಟಣದಲ್ಲಿ ಜಾನುವಾರಗಳು ಅಡ್ಡಾದಿಡ್ಡಿ ಅಲೇದಾಡಿ ಸಾರ್ವಜನಿಕರಿಗೆ ಘಾಯಗೊಳಿಸಿವೆ ಆದರೆ ಹೇಳುವುದು ಯಾರಿಗೆ ಎಂದು ಸಾರ್ವಜನಿಕರು ಪರಸ್ಥಳದಿಂದ ಬಂದ ಜನರು ಬಂದ ದಾರಿಗೆ ಸುಂಕವಿಲ್ಲ ಎಂದು ಮೋಕ ರೂಧನೆ ಅನುಭವಿಸಿ ಹೋಗಿದ್ದಾರೆ.
ಬಸವ ಸಮೀತಿ ಅಧ್ಯಕ್ಷ ಅನೀಲಗೌಡ ಬಿರಾದಾರ

ನಾನು ಬಂದ ನಂತರ ಕೆಲ ಸಮಸ್ಯೆಗಳು ತಕ್ಕ ಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ರಸ್ತೆಯ ಇಕ್ಕಟಾ ಗಿರುವದರಿಂದ ಸುಣ್ಣದಿಂದ ಗೆರೆ ಏಳೇದು ವ್ಯಾಪಾರಸ್ಥರಿಗೆ, ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿರುವದನ್ನು ಗಮನಿಸಿ ಸ್ಥಳಾಂತರಿಸಲಾಗಿದೆ. ಸದ್ಯ ಜಾನುವಾರುಗಳ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಕೂಡಲೆ ಕ್ರಮಕೈಗೊಂಡು ಒಂದು ವೇಳೆ ಜಾನುವಾರಗಳ ಮಾಲೀಕರು ಜಾನುವಾರಗಳಿಗೆ ಬೇರೆ ಕಡೆ ಸಾಗಿಸದಿದ್ದರೆ ಖುದ್ದಾಗಿ ನಾನೇ ಗೋಶಾಲೆಗೆ ಸ್ಥಳಾಂತರ ಮಾಡುತ್ತೇನೆ.

ಉಪವಿಭಾಗ ದಂಡಾಧಿಕಾರಿ ಅಬೀದ ಗದ್ಯಾಳ