ಸೇಡಂ: ಅಪರಾಧ ತಡೆಗಟ್ಟಲು ಸಾರ್ವಜನಿಕರ ಸಹಕಾರದಿಂದ ಮಾತ್ರ ಜನಸ್ನೇಹಿ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಸೇಡಂ ಠಾಣೆ ಸಿಪಿಐ ಎಸ್.ಎನ್.ಆನಂದರಾವ್ ಹೇಳಿದರು.
ಬಟಗೇರಾ(ಬಿ) ಗ್ರಾಮ ಪಂಚಾಯತ್ ಆವರಣದಲ್ಲಿ ಏರ್ಪಡಿಸಿದ “ನೀಮ್ಮ ಮನೆ ಬಾಗಿಲಿಗೆ ಪೋಲಿಸ್” ಎಂಬ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಗ್ರಾಮ ದಲ್ಲಿ ಅಪರಾಧ ಚಟುವಟಿಕೆ ಗಳ ಬಗ್ಗೆ ಮಾಹಿತಿ ಗುಪ್ತವಾಗಿ ನೀಡಿ ನಿಮ್ಮ ಹೆಸರನ್ನು ತಿಳಿಸುವುದಿಲ್ಲ ಒಳ್ಳೆಯ ಸಮಾಜ ನಿರ್ಮಾಣ ಮಾಡಿ ಭವ್ಯ ಭಾರತ ಭಾರತ ವಾಗಿಸಿ. ಪೋಲಿಸ್ ಸರು ನಿಮ್ಮ ಸ್ನೇಹಿತರು ತಪ್ಪು ಮಾರ್ಗ ಗಳಲ್ಲಿ ಭಾಗಿಯಾಗಿದಲ್ಲಿ ತಂದೆ ಸ್ಥಾನದಲ್ಲಿ ನಿಮ್ಮನ್ನು ಹೇಗೆ ಶಿಕ್ಷಿಸುತ್ತರೊ. ಹಾಗೆ ನಾವು ಕೂಡ್ ನಿಮ್ಮನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ನೀಡುತ್ತವೆ ಎಂದರು.
ಸೇಡಂ ಠಾಣೆ ಪಿ.ಎಸ್.ಐ. ಸೋಮಲೀಂಗ ಒಡೆಯರ್ ಮಾತನಾಡಿ, ಗ್ರಾಮದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು. ನೀಮ್ಮ ಸಹಕಾರ ಅಗತ್ಯವಿದೆ. ಗ್ರಾಮೀಣ ಭಾಗದ ಅಪರಾಧಗಳಾದ ಮಟಕ್, ಜೂಜಾಟ ದಯಾದಿಗಳ ಕಲಹ ಪರಿಪೂರ್ಣವಾಗಿ ತಡೆಗಟ್ಟಲು ಪೋಲಿಸ್ ರೊಂದಿಗೆ ಕೈಜೋಡಿಸಿ ಹಾಗೂ ಸೈಬರ ಕ್ರೈಮ್ ಬಗ್ಗೆ ಜಾಗೃತ ವಹಿಸಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಮಲ್ಕಪ್ಪ ಪೂಜಾರಿ ಹಾಗೂ ಜಗಮ್ಮ ಮಲ್ಲುನಾಥ ಕೋಡ್ಲಾ, ಪೊಲೀಸ್ ಸಿಬ್ಬಂದಿಗಳಾದ ಎಚ್.ಸಿ. ನಾಗರಾಜ ಜಯಪಾಲ, ಎಚ್.ಜಿ ಯಲ್ಲಾಲಿಂಗ, ರ್ಗ್ರಾಮದ ಹಿರಿಯರಾದ ಮಲ್ಕಣ್ಣ ನಿಡಗುಂದಿ, ಸಿದ್ದಣ ಬುಕ್ಕಾ, ಮಲ್ಲಿಕಾರ್ಜುನ ಗದ್ದಿ, ಹಣಮಂತ ಕಿಷ್ಟಾಪೂರ್, ಭೀಮರಾಯ ಮಡಿವಾಳ, ಹಾಸರೆಡ್ಡಿ ಪೈಕೋಡಿ, ರಫೀಕ್, ಹಣಮಂತ ಚಂಡಗೋಳ, ಸಹಾದೇವ ಕುಂದೇಲಿ, ಗ್ರಾಮದ ಅನೇಕರು ಉಪಸ್ಥಿತಿ ರಿದ್ದರು. ಗ್ರಂಥ ಪಾಲಕ ಭೀಮರೆಡ್ಡಿ ಚಪೇಟ್ಲಾ ಸ್ವಾಗತಿಸಿ ನಿರೂಪಿಸಿದರು. ಕರ ವಸೂಲಿಗಾರ್ ಬಸರೆಡ್ಡಿ ಕುಪ್ಪಗಿರಿ ವಂದಿಸಿದರು.