ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಪುತ್ರ ಜೈದ್ ಖಾನ್ (zaid khan) ನಟನೆಯ ಕಲ್ಟ್ (Cult movie) ಚಿತ್ರದ ಡ್ರೋನ್ ಟೆಕ್ನಿಷಿಯನ್ ಸಂತೋಷ್ ಎಂಬವರು ಆತ್ಮಹತ್ಯೆಗೆ (Self Harming) ಯತ್ನಿಸಿರುವ ಘಟನೆ ನಡೆದಿದೆ. ಚಿತ್ರೀಕರಣದ (Film shooting) ವೇಳೆ ಡ್ರೋನ್ ಹಾಳಾಗಿದ್ದು, ಇದನ್ನು ತುಂಬಿಕೊಡದ ಚಿತ್ರತಂಡದ ಮೇಲೆ ಅವರು ಆರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ NCR ದಾಖಲಾಗಿದೆ. ನವೆಂಬರ್ 25 ರಂದು ಚಿತ್ರದುರ್ಗದಲ್ಲಿ ಕಲ್ಟ್ ಸಿನಿಮಾ ಶೂಟಿಂಗ್ಗೆ ಡ್ರೋನ್ ಟೆಕ್ನಿಷಿಯನ್ ಸಂತೋಷ್ಗೆ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಿ ಶೂಟ್ ಮಾಡುತ್ತಿದ್ದರು. ಶೂಟಿಂಗ್ ವೇಳೆ ಡ್ರೋನ್ ತುಂಡಾಗಿತ್ತು. ನಷ್ಟ ಭರಿಸಿಕೊಡುವಂತೆ ಕೇಳಿದ್ದರೂ ಸ್ಪಂದಿಸದ ಚಿತ್ರದ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕನ ಮೇಲೆ ಆರೋಪ ಮಾಡಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲ್ಟ್ ಚಿತ್ರತಂಡದ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಚಿತ್ರತಂಡಕ್ಕೆ ಪೊಲೀಸರು ತಿಳಿಸಿದ್ದಾರೆ. ಚಿದ ಹೀರೋ ಜೈದ್ ಖಾನ್ ಡ್ರೋನ್ನ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ, ಡ್ರೋನ್ ಹಾಳಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜೊತೆಗೆ ಬಾಡಿಗೆಯನ್ನೂ ನೀಡಿಲ್ಲ ಎಂದು ಡ್ರೋನ್ ಟೆಕ್ನಿಷಿಯನ್ ಸಂತೋಷ್ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Cult Movie: ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ಸೆಟ್ನಲ್ಲಿ ರಚಿತಾರಾಮ್ ಹುಟ್ಟುಹಬ್ಬ!