Friday, 13th December 2024

ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶವನ್ನು ಪ್ರಕಟಿಸಿದ್ದು, ಶೇ.61.88 ವಿದ್ಯಾರ್ಥಿ ಗಳು ತೇರ್ಗಡೆಯಾಗಿದ್ದಾರೆ.

6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 4,22,966 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು: ಶೇ.68.72 ಮತ್ತು ಬಾಲಕರು: ಶೇ.55.22 ಇದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.88.02 ವಿದ್ಯಾರ್ಥಿಗಳು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಉಡುಪಿ (ಶೇ. 86.38) ಇದ್ದರೆ, ಶೇ.49.31 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

ಟಾಪರ್ ಇವರು:

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗು ತಾಲ್ಲೂಕು ಕೊಟ್ಟೂರು ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ವಿದ್ಯಾರ್ಥಿನಿ ಯರಾದ ಶ್ವೇತಾ ಭೀಮಶಂಕರ್ ಬೈರಗೊಂಡ ಮತ್ತು ಮಡಿವಾಳರ ಸಹನಾ 600ಕ್ಕೆ 594 ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ದಾಸನಪುರದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್, ಜಾಲಹಳ್ಳಿಯಲ್ಲಿರುವ ಸೇಂಟ್ ಕ್ಲಾರೆಟ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ ಆಕಾಶ್ ದಾಸ್, ಚಿಕ್ಕಬಳ್ಳಾಪುರ ಅಗಲಗುರ್ಕಿ ಎಸ್‌ಬಿಜಿಎನ್‌ಎಸ್ ರೂರಲ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿನಿ ನೇಹಾ ಬಿ.ಆರ್. ಮತ್ತು ಜಯನಗರ ಪಿಯು ಕಾಲೇಜಿನ ವಿದ್ಯಾರ್ಥಿ ಮಾನವ್ ವಿಜಯ್ ಕೇಜರಿವಾಲ್ 600ಕ್ಕೆ 596 ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ಜಯನಗರ ಆರ್‌.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ನಿ ಸಿಮ್ರಾನ್ ಶೀಷಾ ರಾವ್ 600ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ದ್ದಾರೆ.

ಕಾಲೇಜುವಾರು ಫಲಿತಾಂಶ ಗಮನಿಸಿದಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 52.84, ಅನುದಾನಿತ ಪದವಿ ಪೂರ್ವ ಕಾಲೇಜು ಶೇ. 62.05, ಅನುದಾನ ರಹಿತ ಪದವಿ ಪೂರ್ವ ಕಾಲೇಜು 76.50, ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜು 55.72, ವಿಭಜಿತ ಪದವಿ ಪೂರ್ವ ಕಾಲೇಜು 72.96 ಬಂದಿದೆ.