Friday, 13th December 2024

D Kempanna Death: ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ

kempanna death news

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ವಿರುದ್ಧ 40% ಕಮಿಷನ್‌ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಇಂದು (D Kempanna Death) ನಿಧನರಾಗಿದ್ದಾರೆ. 84 ವರ್ಷದ ಕೆಂಪಣ್ಣ ಅವರು ಗುರುವಾರ ಬೆಳಗ್ಗೆ ಬೆಂಗಳೂರಿನ ಜ್ಯೋತಿಪುರದ ಅವರ ನಿವಾಸದಲ್ಲಿ, ವಯೋಸಹಜ ಅರೋಗ್ಯ ಸಮಸ್ಯೆಯಿಂದ ನಿಧನ (D Kempanna passed away) ಹೊಂದಿದರು.

ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಗ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ (ಕೆಂಪೇಗೌಡ) 40 ಪರ್ಸೆಂಟ್ ಕಮಿಷನ್ (40 Percent Commission) ಆರೋಪ ಮಾಡಿದ್ದರು. ಇದನ್ನು ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚೆನ್ನಾಗಿ ಬಳಸಿಕೊಂಡಿತ್ತು. ಇದು ಬಿಜೆಪಿಗೆ ಭಾರಿ ಹಿನ್ನಡೆಗೂ ಕಾರಣವಾಗಿತ್ತು.

ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಹಾಗೂ ಇತರ 18 ಮಂದಿ ಗುತ್ತಿಗೆದಾರರ ವಿರುದ್ಧ ಆಗಿನ ಸಚಿವ ಮುನಿರತ್ನ (Munirathna) 50 ಕೋಟಿ ರೂ. ಮಾನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ (FIR) ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಕೆಂಪಣ್ಣ ಅವರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದ್ದುದಲ್ಲದೆ, ಈ ಸಂಬಂಧ ಯಾವುದೇ ಉತ್ತರ ನೀಡದಿದ್ದುದರಿಂದ ಪೊಲೀಸರು ಅವರನ್ನು ಬಂಧಿಸಿದ್ದರು. \

ನಂತರ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಆರೋಪ ಮಾಡಿದ್ದರು. ಈ ಸರ್ಕಾರದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ಇಲ್ಲ ಅಂತ ಹೇಳಿದರೆ ನನ್ನಂತಹ ಮೂರ್ಖ ಇನ್ನೊಬ್ಬರಿಲ್ಲ. ಹಿಂದೆಯೂ ಇತ್ತು, ಈಗಲೂ ಇದೆ. ಅದನ್ನು ತಡೆಗಟ್ಟಬೇಕು. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿಲ್ಲ. ಈಗ ಯಾವುದೇ ಪ್ರಮುಖ ಕೆಲಸಗಳು ಆಗಿಲ್ಲ. ಹಾಗಾಗಿ ಆರೋಪ ಮಾಡಲ್ಲ. ಪ್ರಮುಖ ಕಾಮಗಾರಿ ನಡೆದರೆ ಆಗ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಲಿದೆ ಎಂದಿದ್ದರು.

ಇದನ್ನೂ ಓದಿ: CM Siddaramaiah: ಒಂದು ದೇಶ ಒಂದು ಚುನಾವಣೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ, ಅಪ್ರಾಯೋಗಿಕ: ಸಿಎಂ ಸಿದ್ದರಾಮಯ್ಯ