Saturday, 14th December 2024

ದಲಿತ ಪರ ಸಂಘಟನೆಗಳು ಮೌನಾ ಚರಣೆಯ ಕಾರ್ಯಕ್ರಮ

ಪಾವಗಡ : ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕನ್ನಡನಾಡಿನ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಸಾಹಿತಿ ಗಳ್ಳೊಬ್ಬರಾದ ಸರಳ ಸಜ್ಜನಿಕೆ ಡಾಕ್ಟರ್ ಸಿದ್ದಲಿಂಗಯ್ಯರವರ ಮರಣದ ಪ್ರಯುಕ್ತ ದಲಿತ ಪರ ಸಂಘಟನೆಗಳು ಮೌನಾ ಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರೊ ಬಸವಲಿಂಗಪ್ಪ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಮಾತನಾಡುತ್ತಾ, ಹಿರಿಯ ಸಾಹಿತಿಗಳು ಅಸಮಾನ್ಯ ಬುದ್ಧಿಜೀವಿ ದಲಿತಪರ ಕಾಳಜಿಯುಳ್ಳ ಸಿದ್ದಲಿಂಗಯ್ಯ ರವರು ದಲಿತ ಬಡಕುಟುಂಬದ ದೇವಯ್ಯ ಮತ್ತು ವೆಂಕಟಮ್ಮನ ಪುತ್ರರಾಗಿ 1954 ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಮಂಚನಬೆಲೆ ಕುಗ್ರಾಮದಲ್ಲಿ ಜನಿಸಿದ್ದು, ವಿದ್ಯಾರ್ಥಿದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು ಆಕ್ರೋಶ ಗಳನ್ನು ಕಾವ್ಯ ಸಾಹಿತಿ ಮಾಧ್ಯಮಗಳ ಮುಖಾಂತರ ವ್ಯಕ್ತಪಡಿಸುತ್ತಿದ್ದರು, ಅವರ ಮರಣ ನಾಡಿನ ಸಮಸ್ತ ದಲಿತಪರ ಜನಾಂಗಕ್ಕೆ ಬಾರಿ ಅಪಾರವಾದ ನಷ್ಟವನ್ನುoಟು ಮಾಡಿದೆ.
ಆಗಿನ ಕಾಲದ ಸಂಸ್ಕಾರವಿಲ್ಲದ ಮಾದಿಗ ಜನಾಂಗವೆಂದು ಬಿತ್ತುತ್ತಿರುವ ಸಂದರ್ಭದಲ್ಲಿ ತನ್ನದೇ ಆದ ಸಾಹಿತಿ ಕಾವ್ಯಗಳ ಮೂಲಕ ಇಡೀ ನಾಡನ್ನೇ ಬೆಚ್ಚಿ ಬೀಳಿಸುವಂತಹ ಕವನಗಳನ್ನು ಬರೆದು ಮಾಧ್ಯಮಗಳ ಮುಖೇನ ಬಿತ್ತರಿಸಿ ನ್ಯಾಯ ಹೋರಾಟ ದಲ್ಲಿ ದಲಿತ ಜನಾಂಗವನ್ನು  ಮುಂಚೂಣಿಗೆ ತಂದಿರುತ್ತಾರೆoದು ಹೇಳಿದರು.
ಇದೇ ವೇಳೆಯಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಹಿರಿಯ ಸಾಹಿತಿಗಳ ಮರಣ  ದಲಿತ ಸಮುದಾಯಕ್ಕೆ ಭಾರಿ ಹಿನ್ನಡೆ ವಿಷಯ, ಜನಪರ ಕಾಳಜಿಯುಳ್ಳ ಹಿರಿಯ ಸಾಹಿತಿಗಳು 1975 ರಲ್ಲಿ ಬರೆದ ಹಲವಾರು ಕವನಗಳ ಸಂಕಲನಗಳಾದ ‘ಹೊಲೆಮಾದಿಗರ ಹಾಡು’,ಸಾವಿರಾರು ನದಿಗಳು, ಕಪ್ಪು ನಾಡಿನ ಹಾಡು,  ಮೆರವಣಿಗೆ, ಇತರೆ ಕವಿತೆಗಳ ಮೂಲಕ ದಲಿತರ ಜೀವನಗಳನ್ನು ಬೆಳಕಿಗೆ ತರಲಾರಂಭಿಸಿರುತ್ತಾರೆ.
ಊರು-ಕೇರಿ ಆತ್ಮಕಥೆಯನ್ನು ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲಿ ಅನುವಾದಗೊoಡು, ಇಂಗ್ಲಿಷ್ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಂದಿದ್ದು, ಅವರು ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ ದಲಿತ ಸಂಘರ್ಷ ಸಮಿತಿ ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪನೆ ಮಾಡಿ ತನ್ನ ದಲಿತ ಜನಾಂಗವನ್ನು ಉತ್ತೇಜನ ಮಾಡಲು ಮಹಾನ್ ವ್ಯಕ್ತಿಯಾಗಿ ಪರಿತಪಿಸುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಮಾಜಿ ಪುರಸಭೆ ಸದಸ್ಯ ವಸಂತ್, ಟಿ ಎನ್ ಪೇಟೆ ರಮೇಶ್, ಹನುಮಂತ ರಾಯಪ್ಪ, ಅಂಬರೀಶ್, ನರಸಿಂಹಪ್ಪ, ಶ್ರೀನಿವಾಸ್, ಮಂಜುನಾಥ್ ಹಾಗೂ ಮತ್ತಿತರರು ಭಾಗವಹಿಸಿದ್ದರು.