Sunday, 1st December 2024

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾಗಿ ಅರಸೀಕೆರೆ ಕೆ.ಡಿ.ಅಂಜಿನಪ್ಪ ಆಯ್ಕೆ

ಹರಪನಹಳ್ಳಿ: ಡಾ.ಹೆಚ್.ಪ್ರಕಾಶ ಬೀರಾವರ ಸ್ಥಾಪಿತ ಭಾರತೀಯ ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷರಾಗಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೆ.ಡಿ.ಅಂಜಿನಪ್ಪ ಆಯ್ಕೆಯಾಗಿದ್ದಾರೆ.

ಈಚೆಗೆ ಚಿತ್ರದುರ್ಗದಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಡಾ.ಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಾದ ತಿಮ್ಮರಾಜ್, ರೈತ ಮೋರ್ಚಾ ರಾಜ್ಯಾಧ್ಯಕ್ಷ ಹನುಮಂತಪ್ಪ ಅವರು ನೇಮಕಾತಿ ಆದೇಶ ಪತ್ರ ವಿತರಿಸಿ ದ್ದಾರೆ. ಕಳೆದ ಒಂದು ದಶಕಗಳ ಹೋರಾಟ ಮತ್ತು ರಾಜಕಾರಣದಲ್ಲಿ ಪಳಗಿರುವ ಕೆ.ಡಿ.ಅಂಜಿನಪ್ಪ ಅವರು ವಿವಿಧ ಸಂಘಟನೆಗಳ ಮುಂಚೂಣಿ ನಾಯಕರಾಗಿ ಹೋರಾಟ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ದೀನ ದಲಿತ, ಅಲ್ಪಸಂಖ್ಯಾತ, ಬಡವರ, ರೈತರ ಪರವಾಗಿ ಹೋರಾಟ ಮಾಡಿಕೊಂಡು ಬರಬೇಕೆಂದು ರಾಜ್ಯಾಧ್ಯಕ್ಷ  ಡಾ.ಹೆಚ್.ಪ್ರಕಾಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನನ್ನ ಜನಪರ ಹೋರಾಟವನ್ನು ಗುರುತಿಸಿರುವ ಸಂಘದ ರಾಜ್ಯಾಧ್ಯಕ್ಷರಾದ ಡಾ.ಪ್ರಕಾಶ್ ಅವರು ವಿಜಯನಗರ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ನಿರಂತರವಾಗಿ ಶೋಷಿತರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ಮಾಡುತ್ತೇನೆ. ಶೀಘ್ರದಲ್ಲಿಯೇ ಜಿಲ್ಲಾ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಭಾರತೀಯ ದಲಿತ ಸಂಘರ್ಷ ಸಮಿತಿಯ ಕೆ.ಡಿ.ಅಂಜಿನಪ್ಪ ತಿಳಿಸಿದ್ದಾರೆ.