Saturday, 23rd November 2024

Dandiya Fashion 2024: ಯುವತಿಯರ ದಾಂಡಿಯಾ ಸೆಲೆಬ್ರೇಷನ್‌‌‌ಗೆ ಬಂತು ಟ್ರೆಡಿಷನಲ್‌ ಗ್ರ್ಯಾಂಡ್‌ ಚೋಲಿ ಎಥ್ನಿಕ್‌ ವೇರ್ಸ್

Dandiya Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ದಾಂಡಿಯಾ ಹಾಗೂ ಗರ್ಬಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಯುವತಿಯರಿಗೆಂದೇ, ನಾನಾ ಬಗೆಯ ಟ್ರೆಡಿಷನಲ್‌ ಗ್ರ್ಯಾಂಡ್‌ ಲೆಹೆಂಗಾ-ಚೋಲಿ, ಗಾಗ್ರಾ-ಚೋಲಿ, ಚನಿಯಾ-ಚೋಲಿಯಂತಹ ಎಥ್ನಿಕ್‌ವೇರ್‌‌ಗಳು ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ. ಈ ಸೀಸನ್‌ನಲ್ಲಿ ನಡೆಯುತ್ತಿರುವ ದಾಂಡಿಯಾ (Dandiya Fashion 2024) ಹಾಗೂ ಗರ್ಬಾ ನೃತ್ಯಕ್ಕೆ ಧರಿಸಿದಾಗ ಆಕರ್ಷಕವಾಗಿ ಕಾಣುವ ಎಥ್ನಿಕ್‌ವೇರ್‌ಗಳು ಇದೀಗ ಫ್ಯಾಷನ್‌ಲೋಕದ ಎಥ್ನಿಕ್‌ವೇರ್ಸ್ ಕೆಟಗರಿಯಲ್ಲಿ, ಟಾಪ್‌ ಲಿಸ್ಟ್‌ನಲ್ಲಿವೆ.

ಚಿತ್ರಕೃಪೆ: ಪಿಕ್ಸೆಲ್‌

ದಕ್ಷಿಣ ಭಾರತದವರಿಗೂ ಪ್ರಿಯವಾದ ಎಥ್ನಿಕ್‌ವೇರ್ಸ್

ಅಂದಹಾಗೆ, ಉತ್ತರ ಭಾರತದ ದಾಂಡಿಯಾ, ಇದೀಗ ಉದ್ಯಾನನಗರಿಯಲ್ಲೂ ಸಾಮಾನ್ಯವಾಗಿದ್ದು, ದಕ್ಷಿಣ ಭಾರತದ ಯುವತಿಯರನ್ನು ಸೆಳೆದಿದೆ. ಪರಿಣಾಮ, ಸ್ಥಳಿಯರಿಗೂ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಗಾಗ್ರ -ಚೋಲಿ, ಚನಿಯಾ- ಚೋಲಿ, ಲೆಹೆಂಗಾ –ಚೋಲಿ ಸೆಟ್‌ಗಳು ಬಂದಿವೆ.

ಟ್ರೆಡಿಷನಲ್‌ ಗಾಗ್ರ -ಚೋಲಿ ಕಮಾಲ್‌

ರಾಜಸ್ಥಾನದ ಸಾಂಪ್ರಾದಾಯಿಕ ಉಡುಪಾದ ಈ ಗಾಗ್ರ-ಚೋಲಿ ಮಲ್ಟಿ ಕಲರ್, ಮೆಷಿನ್‌-ಹ್ಯಾಂಡ್‌ ಎಂಬ್ರಾಯ್ಡರಿ, ಮಿರರ್‌, ಕಾಂಟ್ರಾಸ್ಟ್ ಮಿಕ್ಸ್ ಮ್ಯಾಚ್‌ ಎಂಬಾಲಿಶ್ಡ್ ಡಿಸೈನ್‌ ಸೇರಿದಂತೆ ನಾನಾ ಡಿಸೈನ್‌ನಲ್ಲಿ ಲಭ್ಯವಿದೆ ಎನ್ನುತ್ತಾರೆ ಮಾರಾಟಗಾರರು.

ಲೆಹೆಂಗಾ-ಚೋಲಿ ಜಾದೂ

ಹೆವ್ವಿ ಡಿಸೈನ್‌ನ ಲೆಹೆಂಗಾ-ಚೋಲಿಯ ಮೇಲೆ ಹ್ಯಾಂಡ್‌ ಎಂಬ್ರಾಯ್ಡರಿಯಿಂದಿಡಿದು, ಕಟ್‌ ವರ್ಕ್‌, ಕಲಾಂಕಾರಿ, ಜರ್ದೋಸಿಯಂತಹ ಸೂಕ್ಮ ಕಲಾತ್ಮಕ ವರ್ಕ್‌ ಕಾಣಬಹುದು. ಇದರೊಂದಿಗೆ ಡಿಸೈನರ್‌ವೇರ್‌ ಜತೆಗೆ ದೊರೆಯುವ ಚುನ್ನಿಗಳು ಕೂಡ ಅತ್ಯಾಕರ್ಷಕ ಭಾರಿ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.

ಆಕರ್ಷಕ ಚನಿಯಾ – ಚೋಲಿ

ಇದು ನೋಡಲು ತಕ್ಷಣಕ್ಕೆ ಗಾಗ್ರ-ಚೋಲಿಯಂತೆ ಕಂಡರೂ ಅದಲ್ಲ! ಡಿಸೈನ್‌ಗಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಟ್ವಿರ್ಲಿಂಗ್‌ ಮಾಡಿದರೇ ಹರಡುವಂತಹ ಲಂಗ ಹೊಂದಿರುತ್ತದೆ. ಮಲ್ಟಿ ಕಲರ್‌ ಹಾಗೂ ಮಲ್ಟಿ ಡಿಸೈನ್‌ ಹೊಂದಿರುತ್ತವೆ ಎನ್ನುತ್ತಾರೆ ವಿನ್ಯಾಸಕರು.

ಈ ಸುದ್ದಿಯನ್ನೂ ಓದಿ | Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಬಹು ನಿರೀಕ್ಷಿತ ʼಭೈರಾದೇವಿʼ ಚಿತ್ರ ಅ.3ರಂದು ರಿಲೀಸ್‌

ದಾಂಡಿಯಾ ಡಿಸೈನರ್‌ವೇರ್‌ ಪ್ರಿಯರು ಗಮನಿಸಬೇಕಾದದ್ದು

ನಿಮ್ಮ ಪರ್ಸನಾಲಿಟಿಗೆ ಸೂಕ್ತವಾದ ಚೋಲಿ ಡಿಸೈನರ್‌ವೇರ್‌ ಆರಿಸಿ.
ಆದಷ್ಟೂ ಲೈಟ್‌ವೈಟ್‌ ಎಥ್ನಿಕ್‌ವೇರ್‌ ಧರಿಸಿ. ಇಲ್ಲವಾದಲ್ಲಿ ನೃತ್ಯ ಮಾಡಲು ಸಾಧ್ಯವಾಗದೇ ಇರಬಹುದು.
ಫೋಟೋಶೂಟ್‌ಗೆ ಟ್ವಿರ್ಲಿಂಗ್‌ ಮಾಡಬಹುದಾದ ಚನಿಯಾ-ಚೋಲಿ ಬೆಸ್ಟ್ ಆಯ್ಕೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)