Tuesday, 10th September 2024

ದತ್ತಿ ಉಪನ್ಯಾಸ ಕಾರ್ಯಕ್ರಮ

ಕೊಲ್ಹಾರ: ವಿಶ್ವಗುರು ಬಸವಣ್ಣನವರ ಜಗತ್ತಿಗೆ ಸಾಮಾಜಿಕ ನ್ಯಾಯ ಸಾರಿದ ಮಹಾನ್ ಚೇತನ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.

ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಶರಣ ಸಾಹಿತ್ಯ ಪರಿಷತ್ ವತಿಯಿಂದ ಲಿಂಗೈಕ್ಯ ಗುರಸಂಗಪ್ಪ ಗುರುಲಿಂಗಪ್ಪ ಗಿಡ್ಡಪ್ಪಗೋಳ ಹಾಗೂ ಮಹದೇವಪ್ಪ ಹಂಚಿನಾಳ ಅವರ ದತ್ತಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು ಸಮಾಜದಲ್ಲಿರುವ ವರ್ಣ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸಮ ಸಮಾಜ ಕಟ್ಟಲು ಕಲ್ಯಾಣದಲ್ಲಿ ಕ್ರಾಂತಿ ಮಾಡಿದರು. ಜಗತ್ತಿಗೆ ಕಾಯಕ ತತ್ವ ಕಲಿಸಿ ಕಾಯಕವೇ ಕೈಲಾಸ ಎಂದು ಬಸವಣ್ಣನವರು ಸಾರಿದ್ದಾರೆ ಎಂದರು.

ಕನ್ನಡ ಪಂಡಿತರಾದ ಬಿ.ಎಸ್‌ ಹಂಗರಗಿ, ಕೆ.ಯು ಗಿಡ್ಡಪ್ಪಗೋಳ ಹಾಗೂ ಸುನಂದಾಬಾಯಿ ಗಿಡ್ಡಪ್ಪಗೋಳ ಮಾತನಾಡಿದರು‌. ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ನಾಗರಾಜ್ ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ನಾವಿ ಸ್ವರಚಿತ ಶರಣರ ಕವನ ವಾಚನ ಮಾಡಿದರು.
ಪಟ್ಟಣದ ಸಾಹಿತ್ಯ ಪ್ರೇಮಿ ಗಂಗಾಧರ ಏಳಗಂಟಿ ತಮ್ಮ ತಂದೆಯವರಾದ ಲಿಂಗೈಕ್ಯ ಹುಚ್ಚಪ್ಪ ಏಳಗಂಟಿ ಇವರ ಸವಿ ನೆನಪಿಗಾಗಿ 25000 ರೂಪಾಯಿ ದತ್ತಿ ದಾನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಬಸಪ್ಪ ಗಿಡ್ಡಪ್ಪಗೋಳ, ಅತಿಥಿಗಳಾಗಿ ಸಿ.ಎಮ್ ಕಾಂಬಳೆ, ಭುವನೇಶ್ವರಿ ಹಿರೇಮಠ, ಜಿ ಜಿ ಕುಲಕರ್ಣಿ, ಉಪಸ್ಥಿತಿ ಕೆ.ಆರ್ ದಾಸರ, ರುದ್ರಮ್ಮ ಗಿಡ್ಡಪ್ಪಗೋಳ ವಹಿಸಿದ್ದರು. ಶೋಭಾ ಬಾಟಿ ನಿರೂಪಿಸಿದರು, ಕೆ.ಎಸ್ ಬಾಲಗೊಂಡ ಸ್ವಾಗತಿಸಿದರು. ರಾಜೇಶ್ವರಿ ಜತ್ತಿ ಪ್ರಾರ್ಥಿಸಿದರು, ಸೌಮ್ಯ ಗಿಡ್ಡಪ್ಪಗೋಳ ವಂದಿಸಿದರು.

Leave a Reply

Your email address will not be published. Required fields are marked *