Wednesday, 11th December 2024

ಡಿಸಿಎಂ ಕಾರಜೋಳಗೆ ಹೆಚ್ಚುವರಿ ಖಾತೆ: ಪ್ರವಾಸೋದ್ಯಮ ಜತೆಗೆ ಕನ್ನಡ-ಸಂಸ್ಕೃತಿ

ಬೆಂಗಳೂರು : ಡಿಸಿಎಂ ಗೋವಿಂದ ಕಾರಜೋಳಗೆ ಮತ್ತೆ ಎರಡು ಖಾತೆ ಜವಾಬ್ದಾರಿ ನೀಡುವ ಸಾಧ್ಯತೆಇದೆ. ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಿ.ಟಿ. ರವಿ ಹೊಂದಿದ್ದ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಖಾತೆಯನ್ನು ಗೋವಿಂದ ಕಾರಜೋಳಗೆ ನೀಡಲು ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಗೋವಿಂದ್ ಕಾರ ಜೋಳ ಬಳಿಯಿದ್ದ ಸಮಾಜ ಕಲ್ಯಾಣ ಖಾತೆಯನ್ನು ಬಿ.ಶ್ರೀರಾಮುಲುಗೆ ನೀಡಲು ತೀರ್ಮಾನಿಸಲಾಗಿದೆ.

ಇನ್ನು ಕಾರಜೋಳ ಅವರು ಸಮಾಜ ಕಲ್ಯಾಣ ಮತ್ತು ಪಿಡಬ್ಲ್ಯೂಡಿ ಖಾತೆ ಹೊಂದಿದ್ದರು.

ಇದೀಗ ಸಮಾಜ ಕಲ್ಯಾಣ ಖಾತೆ ರಾಮುಲುಗೆ ನೀಡಿ ಪಿಡಬ್ಲ್ಯೂಡಿ ಖಾತೆ ಜೊತೆಗೆ ಪ್ರವಾಸೋ ದ್ಯಮ ಮತ್ತು ಕನ್ನಡ-ಸಂಸ್ಕೃತಿ ಖಾತೆ ಹೆಚ್ಚುವರಿಯಾಗಿ ನೀಡಲು ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.