Wednesday, 11th December 2024

ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಶಹಾಪುರ (ಯಾದಗಿರಿ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟದ ಅವಘಡದಿಂದ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.‌

ಭೀಮರಾಯ ಶಿವಪ್ಪ ಮರ್ಸ (78), ಮಲ್ಲಣ್ಣ ಹಳ್ಳದ (28) ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಫೆ.25 ರಂದು ಆಧ್ಯಾ (3), ಮಹಾಂತೇಶ (15 ತಿಂಗಳ‌ಮಗು), ನಿಂಗಮ್ಮ (86) ಮೃತಪಟ್ಟಿದ್ದರು. ನಂತರ ಗಂಗಮ್ಮ (45), ಶ್ವೇತಾ (6) ಮೃತಪಟ್ಟಿದ್ದರು.

ದೋರನಹಳ್ಳಿಯಲ್ಲಿ ನಿವೃತ್ತ ನೌಕರ ಸಾಯಬಣ್ಣ ಹಗರಟಿಗಿ ಅವರ ಮನೆಯಲ್ಲಿ ಸೀಮಂತ ಕಾರ್ಯ ಕ್ರಮ ನಡೆಯುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸುಮಾರು 24 ಮಂದಿ ಗಾಯಗೊಂಡಿ ದ್ದರು. ಗಾಯಾಳುಗಳಿಗೆ ದೋರನಹಳ್ಳಿ ಪ್ರಾಥಮಿಕ ಆರೋಗ್ಯ, ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಕಲಬುರಗಿಯ ಬಸವೇಶ್ವರ, ಜಿಮ್ಸ್, ಚಿರಾಯು, ಯುನಿಟೈಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.