ಚಿ0ತಾಮಣಿ : ನಗರದ ವರದಾದ್ರಿ ಬೆಟ್ಟದ ಮೇಲೆ ನೆಲೆಗೊಂಡಿರುವ ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ ೦೫/೧೨/೨೦೨೨ ಸೋಮವಾರ ೮೫ ನೇ ಹನುಮ ಜಯಂತಿ ಪ್ರಯುಕ್ತವಾಗಿ ಕಡಲೆಕಾಯಿ ಜಾತ್ರೆಯನ್ನು ಏರ್ಪಡಿಸಲಾಗಿದೆ.
ಬೆಳಗ್ಗೆ ೦೯ಕ್ಕೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆಗಳು ನಡೆಯುತ್ತವೆ.ಮಧ್ಯಾಹ್ನ ೧೨ಕ್ಕೆ ಶ್ರೀ ವರದಾಂಜನೇಯ ಸ್ವಾಮಿಯವರಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಹನುಮ ಜಯಂತಿ ಅಂಗವಾಘಿ ಶ್ರೀ ವರದಾದ್ರಿ ಬೆಟ್ಟಕ್ಕೆ ವಿಶೇಷ ವಿದ್ಯುತ್ ದೀಪ ಅಲಂಕಾರವಿದ್ದು ಭಕ್ತ ಮಹಾಶಯರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವರದಾಂಜನೇಯ ಸ್ವಾಮಿ ಕೃಪೆಗೆ ಪಾತ್ರರಾಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.