Wednesday, 11th December 2024

ಹಡಪದ ಸಮಾಜದಿಂದ ವಿವಿಧ ಬೇಡಿಕೆಗೆ ಒತ್ತಾಯಿಸಿ ಮನವಿ

ಸಿರವಾರ : ಬಸವಣ್ಣನನವರ ಕಾಲದಲ್ಲಿ ಅವರೊಂದಿಗೆ ಸಮಾಜದ ಅಭಿವೃದ್ಧಿಗೆ ನಿಂತಿದ್ದ ಹಡಪದ ಅಪ್ಪಣನವರಿಗೆ ಅನುಭವ ಮಂಟಪದಲ್ಲಿ ಪ್ರಾತಿನಿಧ್ಯ ನೀಡುವಂತೆ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ ವಿಜಯೇಂದ್ರ ಹುಲಿನಾಯಕ ಅವರಿಗೆ ಸಲ್ಲಿಸಿದ ಮನವಿಯಲ್ಲಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕ್ರಾಂತಿಕಾರಿ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಮೂಡನಂಬಿಕೆ, ಶೋಷಣೆ, ಅಸ್ಪøಶ್ಯತೆ, ಗೂಡಾಚಾರ ಇವುಗಳನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ ಗವಿಯು ಬಸವಣ್ಣನವರ ಗವಿಯ ಹತ್ತಿರ ಇದ್ದು ಯಾವುದೇ ಸರ್ಕಾರ ಅಭಿವೃದ್ಧಿ ಮಾಡಿರುವುದಿಲ್ಲ.

ಆದ್ದರಿಂದ ಕೂಡಲೇ ಅಲ್ಲಿ ಹಪ್ಪಣನವರ ಅರವಿನ ಗವಿಯೆಂದು ನಾಮಫಲಕ ಹಾಕ ಬೇಕು. ಸಮಾಜದ ಪೀಠಾಧಿಪತಿಗಳಾದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಯವರನ್ನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಶಾಶ್ವತ ಸದಸ್ಯರನ್ನಾಗಿ ನೇಮಕ ಮಾಡಬೇಕು. ಹಪ್ಪಣ್ಣನವರ ಅರವಿನ ಗವಿಯನ್ನು ಅಭಿವೃದ್ಧಿ ಪಡಿಸಬೇಕು. ಅನುಭವ ಮಂಟಪದಲ್ಲಿ ಎಲ್ಲಾ ಶರಣರ ರೀತಿ ಯಲ್ಲಿ ಹಪ್ಪಣ್ಣನವರಿಗೆ ಪ್ರಾತಿನಿಧ್ಯ ನೀಡಬೇಕು.

ಬಸವಕಲ್ಯಾಣ ಹಡಪದ ಸಮಾಜದ ಹೆಸರಿನಲ್ಲಿ 2 ಎಕರೆ ಜಾಗ ನೀಡಿ ಸಮುದಾಯ ಭವನ ಮತ್ತು ಕಲ್ಯಾನ ಮಂಟಪ ನಿರ್ಮಾಣಕ್ಕೆ 1 ಕೋಟಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಚಿಂಚರಕಿ, ಬಸವರಾಜ ನುಗುಡೋಣಿ, ಅಮರೇಶ ಕನಸಾವಿ, ಶರಣಪ್ಪ ಹಡಪದ ಗಣದಿನ್ನಿ, ಚಂದ್ರಶೇಖರ ಹಡಪದ, ಬಸವರಾಜ ಬೂದುರು, ಬಸವರಾಜ ಹರವಿ, ವೆಂಕಟೇಶ, ಮೌನೇಶ, ಬಸವರಾಜ ಹೀರಾ, ಚಿದಾನಂದ, ಮಲ್ಲಿಕಾರ್ಜುನ, ಅಮರೇಶ, ಚಂದ್ರಕಾಂತ, ಮಲ್ಲಿಕಾರ್ಜುನ, ವೀರೇಶ ಇತರರು ಇದ್ದರು.