ಬೆಂಗಳೂರು: ಮಕ್ಕಳನ್ನು ಸೆಳೆಯಲು ಚಾಕೋಲೇಟ್‌ಗೂ ಡ್ರಗ್‌ಸ್ ಬೆರೆಸುತ್ತಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಡ್ರಗ್‌ಸ್ ಸವರಿ ಕೊಡುವ ದೊಡ್ಡ ಗುಮಾನಿ ಇದೆ. ಶ್ರೀಮಂತ ಮಕ್ಕಳು ಓದುವ ಶಾಲೆಗಳಲ್ಲಿ ಡ್ರಗ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎನ್ನುವ ಶಂಕೆಯೂ ಇದೆ. ಇದೇ ವೇಳೆ, ಐಸ್ ಕ್ರೀಮ್‌ಗೆ ಡ್ರಗ್‌ಸ್ ಸವರಿ ಕೊಡುವ ಶಂಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಡ್ರಗ್‌ಸ್‌ಗೆ ಆಡಿಕ್‌ಟ್ ಆಗುವ ಆತಂಕವಿದೆ ಎಂದ ಸಚಿವರು ಡ್ರಗ್‌ಸ್ ವಿಚಾರದಲ್ಲಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.