Friday, 1st December 2023

ತಿಕೋಟಾ ತಾಲೂಕಿನಲ್ಲಿ ಲಘು ಭೂಕಂಪನ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಮಧ್ಯಾಹ್ನ ಜನರಿಗೆ ಲಘು ಭೂಕಂಪನದ ಅನುಭವವಾಗಿದೆ.

ಇದರಿಂದ ಬೆಚ್ಚಿದ ಜನರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಬಾಬಾನಗರ, ಬಿಜ್ಜರಗಿ,. ಕಳ್ಳಕವಟಗಿ, ಘೋಣಸಗಿ ಗ್ರಾಮದ ಜನರಿಗೆ ಭೂಕಂಪನದ ಅನುಭವವಾಗಿದೆ. ತುಂತುರು ಮಳೆ ನಡುವೆ ಭೂಮಿಯಿಂದ ಶಬ್ದ ಕೇಳಿಬಂತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಆದರೆ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಯಾವುದೇ ಭೂಕಂಪನ ಸಂಭವಿಸಿಲ್ಲ ಎಂದು ವರದಿ ಮಾಡಿದೆ.

error: Content is protected !!