ಇಂಡಿ: ವಿಜಯಪೂರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಲಿಂ, ಶ್ರೀಸಂಗನಬಸವಶ್ರೀಗಳ ಕೊಡುಗೆ ಅನೂನ್ಯವಾಗಿದೆ. ಮಹಾಶಿವ ಯೋಗಿಗಳು ಶೈಕ್ಷಣಿಕ ಸಂಸ್ಥೆ ಕಟ್ಟದಿದ್ದರೆ ಈ ಭಾಗ ಶಿಕ್ಷದಿಂದ ವಂಚಿತರಾಗಿರುತ್ತಿದ್ದೇವು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಜಿಲ್ಲಾಡಳಿತ ಜಿಲ್ಲಾಪಂಚಾಯತ ವಿಜಯಪೂರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ವಿಜಯಪೂರ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕುಸ್ತಿ ಪಂದ್ಯಾವಳಿ ೨೦೨೨-೨೩ನೇಸಾಲಿನ ಕ್ಷೇತ್ರ ಶಿಕ್ಷಣಾಧಿಕಾಇಗಳ ಕಾರ್ಯಾಲಯ ಗ್ರಾ,ಪಂ ಲಚ್ಯಾಣ ಇವರ ಸಂಯುಕ್ತಾಶ್ರಯದಲ್ಲಿ ಸಿದ್ದಲಿಂಗೇಶ್ವರ ಮಹಾರಾಜರ ಮಠದ ಆವರಣದಲ್ಲಿ ನಡೇದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ವಿಜಯಪೂರ ಜಿಲ್ಲೆ ಬ್ರಟೀಷರ ಕಾಲದಿಂದ ನೀರಾವರಿ ವಂಚಿತವಾಗಿದ್ದು ಕುಡಿಯುವ ನೀರಿಗಾಗಿ ಪರಿತಪ್ಪಿಸುವ ಪರಸ್ಥಿತಿ ತಪ್ಪ ಬಳಕೆ ಮಾಡಿದಂತಾಗಿತ್ತು ಸದ್ಯ ತಕ್ಕಮಟ್ಟಿಗೆ ಪರಿಹಾರ ಆಗಿದೆ. ಆರೋಗ್ಯವೇ ಭಾಗ್ಯ ಎನ್ನುವಂತೆ ಕ್ರೀಡೆಗಳಿಂದ ದೈಹಿಕ,ಮಾನಸಿಕ ಆರೋಗ್ಯ ಸದೃಡವಾಗಿರುತ್ತದೆ.
ಪ್ರಾಚೀನ ಕಾಲದ ಭಾರತೀಯರ ಕ್ರೀಡೆಗಳಲ್ಲಿ ಕುಸ್ತಿ ಕ್ರೀಡೆ ಸಹಿತ ಒಂದಾಗಿದೆ. ಲಚ್ಯಾಣ ಸಿದ್ದಲಿಂಗನ ಕ್ಷೇತ್ರದಲ್ಲಿ ೩ ವರ್ಷಗಳ ಪರ್ಯಂತರ ಕುಸ್ತಿ ಗೆಲುವು ಸಾಧಿಸಿದರೆ ಬೆಳ್ಳಿಯ ಗಧೆ ಕೊಡುವ ವಾಡಿಕೆ ಶ್ರೀಸಿದ್ದಲಿಂಗನ ಕೃಪೆಯೂ ಅಥವಾ ಪವಾಡವೂ ಗೊತ್ತಿಲ್ಲ ಇಲ್ಲಿಯವರೆಗೆ ಬೆಳ್ಳಿಯ ಗಧೆ ಯಾವ ಕುಸ್ತಿಪಟುಗಳು ಪಡೆದುಕೊಂಡಿಲ್ಲ ಸುಕ್ಷೇತ್ರದಲ್ಲಿಯೇ ಉಳಿದಿರುವುದು ಸಿದ್ದಲಿಂಗನ ಅದ್ಭುತ ಶಕ್ತಿಯಾಗಿದೆ.
ಕುಸ್ತಿ ಪಂದ್ಯಾವಳಿ ಮಹಾರಾಷ್ಟ್ರ ರಾಜ್ಯಗಳಲ್ಲಿ ಅತೀ ಹೆಚ್ಚು ನೋಡುತ್ತೇವೆ. ಡಾ.ಬಿ.ಆರ್ ಅಂಬೇಡ್ಕರವರನ್ನು ಪ್ರೇರಣೆನೀಡಿದ ರಾಜ್ಯಮನೇತನದ ಸಾಹುಮಾಹಾರಾಜರು ಕುಸ್ತಿ ಕ್ರೀಡೆಗಳ ಬಗ್ಗೆ ಆಸಕ್ತಿ ಹೊಂದಿದರು ಅವರ ಅವಧಿಯಲ್ಲಿ ಅನೇಕ ಕುಸ್ತಿ ಗರಡಿ ಮನೆಗಳು ಕಟ್ಟಿದ್ದಾರೆ ಆದ್ದರಿಂದ ಇತಿಹಾಸ ತಿಳಿದಿರಬೇಕು. ಭಾರತದ ಸನಾತನ ಆಟ, ಪಾಠಗಳು ಸಂಸ್ಕೃತಿಗಳು ಪ್ರತಿಯೋಬ್ಬರು ಗೌರವಿಸಬೇಕು, ಆಟಗಳು ಸೋಲು ಗೆಲುವಿನ ಸೋಪಾನ, ಸೋಲು ಗೆಲುವು ಸಮಾನವಾಗಿ ಗೌರವಿಸಬೇಕು . ವಿಧ್ಯಾರ್ಥಿಗಳು ಜೀವನದ ಪ್ರತಿಯೊಂದು ರಂಗದಲ್ಲಿ ಯಶಸ್ವೀ ಸಾಧಿಸಲಿ ಎಂದು ಹಾರೈಸಿದರು.
ನಮ್ಮ ಆರೋಗ್ಯದ ಮೇಲೆ ಕಾಳಜಿವಹಿಸಬೇಕು. ಅಧುನಿಕ ಭರಾಟೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸದಿದ್ದರೆ ಅವಘಡಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ಏನ್ನೇಲ್ಲಾ ಕೊಂಡಕೊಳ್ಳಬಹುದು ಆರೋಗ್ಯ ಸಂಪತ್ತು ಗಳಿಸುವುದು ಕಷ್ಟ ಆದ್ದರಿಂದ ಸದೃಢ ಶರೀರದಲ್ಲಿ ಸದೃಢ ಮನಸ್ಸ ಇರುತ್ತದೆ ಆದ್ದರಿಂದ ಕ್ರೀಡೆಗಳು ಸದಾ ನಡೆಯಬೇಕು. ಕ್ರೀಡೆಗಳು ಆರೋಗ್ಯಕರವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಧಾನ್ನಮ್ಮನವರ್ ಧಾನ್ನಮ್ಮನವರ್ ಹೇಳಿದರು.
ಗ್ರಾ,ಪಂ ಅಧ್ಯಕ್ಷೆ ಶ್ರೀಮತಿ ಕೌಸರ್‌ಬಾನು ನಧಾಫ್, ಉಪನಿರ್ದೇಶಕರು ಉಮೇಶ ಶಿರಹಟ್ಟಿಮಠ, ಎಸಿ ರಾಮಚಂದ್ರ ಗಡೆದ , ತಹಶೀಲ್ದಾರ ನಾಗಯ್ಯಾ ಹಿರೇಮಠ, ವಿಭಾಗಿಯ ಉಪನಿರ್ದೇಶಕ ಕೆ.ಬಿ ತೆಲಬಕ್ಕನವರ್ .ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಎ.ಪಿ ಠಾಕೂರ, ಎ.ಎಸ್ ಲಾಳಸೇರಿ, ಪ್ರಕಾಶ ಐರೋಡಗಿ,ಧನರಾಜ ಮುಜಗೊಂಡ ವೇದಿಕೆಯಲ್ಲಿದ್ದರು.