Saturday, 14th December 2024

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲು ಒತ್ತಾಯ

ಕೋಲ್ಹಾರ: ಸ್ಥಳಿಯ ಆಡಳಿತ ಯಂತ್ರ ಸುಗಮವಾಗಿ ನಡೆಯಲು ಸರಕಾರ ಪ ಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸ ಬೇಕು ಎಂದು ಪ ಪಂ ಸದಸ್ಯ ಮಹಾಂತೇಶ ಗಿಡ್ಡಪ್ಪ ಗೋಳ ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೊಲ್ಹಾರ ಪಟ್ಟಣ ಪಂಚಾ ಯತ್ ಚುನಾವಣೆ ನಡೆದು ಒಂದು ವರ್ಷ ಗತಿಸುತ್ತಾ ಬಂದರೂ ಕೂಡ ರಾಜ್ಯ ಸರಕಾರ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸದಿರುವುದು ಖೇದಕರ ವಾಗಿದೆ. ಸುಗಮ ಆಡಳಿತ ಯಂತ್ರಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸುವುದು ಅತ್ಯವಶ್ಯಕವಾಗಿದೆ.

ಪ ಪಂ ಸದಸ್ಯರುಗಳಾಗಿ ನಾವು ಚುನಾಯಿತರಾಗಿದ್ದರೂ ಕೂಡ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಕೆಲಸ ಕಾರ್ಯಗಳನ್ನ ಮಾಡಲು ಹಿನ್ನಡೆಯುಂಟಾಗುತ್ತಿದೆ ಕೂಡಲೇ ರಾಜ್ಯ ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಶೋಕ ಜಿಡ್ಡಿಬಾಗಿಲು ಹಾಗೂ ಇತರರು ಇದ್ದರು.

Read E-Paper click here