ಕೊಲ್ಹಾರ: ಪಟ್ಟಣದಲ್ಲಿ ಎಐಎಂಐಎಂ ಪಕ್ಷದ ಕಾರ್ಯಕರ್ತರ ಸಭೆ ಜರುಗಿತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತ ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಮುಖಂಡ ಸಲೀಂ ಅತ್ತಾರ್ ಮಾತನಾಡುತ್ತಾ ಕಾಂಗ್ರೆಸ್ ಬಿಜೆಪಿ ಹಾಗೂ ಇತರ ಪಕ್ಷಗಳು ಮುಸ್ಲಿಮ ರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದೆ.
ಹಾಗಾಗಿ ಮುಸ್ಲಿಂ ಸಮಾಜ ಒಂದಾಗಿ ಈ ಬಾರಿ ಎಐಎಂಐಎಂ ಪಕ್ಷವನ್ನು ಬೆಂಬಲಿಸ ಬೇಕು ಎಂದು ಕರೆ ನೀಡಿದರು. ಮುಸ್ಲಿಂ ಸಮಾಜ ಕೇವಲ ಓಟ್ ಬ್ಯಾಂಕ ಆಗಿ ಬಳಕೆ ಯಾಗದೆ ಪ್ರಬುದ್ಧತೆಯಿಂದ ನಮ್ಮ ಹಕ್ಕನ್ನು ಪಡೆದುಕೊಳ್ಳುವಲ್ಲಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡುತ್ತಾ ಮುಸ್ಲಿಮರ ಮತಪಡೆಯುವ ಕಾಂಗ್ರೆಸ್ ಪಕ್ಷ ಮರಳಿ ಮುಸ್ಲಿಂ ಸಮಾಜಕ್ಕೆ ನೀಡಿರುವುದಾದರೂ ಏನು ಎಂದು ಪ್ರಶ್ನಿಸಿದರು?. ಸಂವಿಧಾನ ನಮಗೆ ಮತದಾನ ಎಂಬ ಅಮೂಲ್ಯವಾದ ಹಕ್ಕನ್ನು ನೀಡಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು, ಈ ಬಾರಿ ಬಾಗೇ ವಾಡಿ ಮತಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತ ಎಂದು ಸ್ಪಷ್ಟಿಕರಿಸಿದರು.
ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ್ ಮಾತನಾಡುತ್ತಾ ನಾವು ಯಾವುದೇ ಪಕ್ಷ ಅಥವಾ ಯಾವುದೇ ಧರ್ಮದ ವಿರುದ್ಧ ಅಲ್ಲ ದೇಶಕ್ಕೆ ಮಾರಕವಾದ ಆರ್.ಎಸ್.ಎಸ್ ತತ್ವ ಸಿದ್ಧಾಂತವನ್ನು ವಿರೋಧಿಸುತ್ತೇವೆ ಬಿಜೆಪಿಯ ತತ್ವ ಸಿದ್ಧಾಂತವನ್ನು ವಿರೋಧಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಕೇವಲ ವೋಟ್ ಬ್ಯಾಂಕ್ ಆಗಿ ಕಾಣುತ್ತಾರೆ ಮುಸ್ಲಿಮರ ಬಗ್ಗೆ ನೈಜವಾದ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಇದ್ದಿದ್ದರೆ ಸಾಚಾರ್ ವದಿಯನ್ನು ಜಾರಿಗೆ ತಂದು ಮುಸ್ಲಿಂ ಸಮಾಜವನ್ನು ಮೇಲೆತ್ತುವ ಕೆಲಸ ಮಾಡುತ್ತಿತ್ತು ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಬಿ.ಕೆ ಗಿರಗಾಂವಿ, ಬಾಷಾಸಾಬ ಚೌದ್ರಿ, ಯುನೂಸ್ ಮಕಾನದಾರ, ಅಲ್ತಾಪ ಅವಜಿ, ಅಜ್ಜು ಮನಗೂಳಿ, ಹಸನಡೊಂಗರಿ ತೆಲಗಿ ಹಾಗೂ ಅಂಜುಮನ್ ಕಮೀಟಿ ಪದಾಧಿಕಾರಿಗಳು ಇದ್ದರು.
Read E-Paper click here